ಸೋನಂ ಕಪೂರ್ ಹಾಗೂ ಆನಂದ್ ಅಹುಜಾ (Anand Ahuja) ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮನೆಗೆ ಹೊಸ ಸದಸ್ಯನ ಆಗಮನ ಆಗುತ್ತಿದೆ. ಈ ಕಾರಣಕ್ಕೆ ಸೋನಂ (Sonam Kapoor) ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಅವರಿಗೆ ಶಾಕ್ ನೀಡುವಂತಹ ಘಟನೆ ಒಂದು ನಡೆದಿದೆ. ಸೋನಂ ಹಾಗೂ ಆನಂದ್ ಅವರು ಮುಂಬೈ ಮಾತ್ರವಲ್ಲದೆ, ನಾನಾ ನಗರಗಳಲ್ಲಿ ಮನೆ ಹೊಂದಿದ್ದಾರೆ. ಆ ಪೈಕಿ ದೆಹಲಿ ನಿವಾಸದಲ್ಲಿ ಕಳ್ಳತನವಾಗಿದೆ. ಅತ್ಯಮೂಲ್ಯ ವಸ್ತುಗಳು ಹಾಗೂ ನಗದನ್ನು ಕದ್ದೊಯ್ಯಲಾಗಿದೆ (Robbery). ಈ ಕುರಿತಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಗೊಂಡಿದೆ.
ದೆಹಲಿ ಮನೆಯಲ್ಲಿ ಸೋನಂ ವಾಸ ಮಾಡುತ್ತಿಲ್ಲ. ಆದರೆ, ಅವರ ಮಾವ ಹರೀಶ್ ಅಹುಜಾ ಹಾಗೂ ಅವರ ಅತ್ತೆ ಪ್ರಿಯಾ ಅಹುಜಾ ವಾಸವಾಗಿದ್ದಾರೆ. ಇವರ ಜತೆಗೆ ಆನಂದ್ ಅವರ ಅಜ್ಜಿ ಸರಳಾ ಅಹುಜಾ ಕೂಡ ಇವರ ಜತೆಗೇ ಇದ್ದಾರೆ. ಇತ್ತೀಚೆಗೆ ಪ್ರಿಯಾ ಅವರು ಕಬೋರ್ಡ್ ತೆಗೆದು ನೋಡಿದ್ದರು. ಈ ವೇಳೆ ಜ್ಯುವೆಲರಿ ಹಾಗೂ ನಗದು ಕಾಣೆ ಆಗಿರುವುದು ಗಮನಕ್ಕೆ ಬಂದಿದೆ. ಕಳೆದ ಎರಡು ವರ್ಷಗಳಿಂದ ಕೊವಿಡ್ ಇದ್ದ ಕಾರಣ ಪ್ರಿಯಾ ಹೆಚ್ಚು ಸುತ್ತಾಟ ನಡೆಸಿಲ್ಲ. ಈ ಕಾರಣಕ್ಕೆ ಅವರು ಜ್ಯುವೆಲರಿ ಬಳಕೆ ಮಾಡಿಲ್ಲ. ಜ್ಯುವೆಲರಿ ಇರುವ ಕಬೋರ್ಡ್ ಕೊನೆಯ ಬಾರಿ ತಾವು ಪರಿಶೀಲಿಸಿದ್ದು ಎರಡು ವರ್ಷಗಳ ಹಿಂದೆ ಎಂದು ಅವರು ಹೇಳಿಕೊಂಡಿದ್ದಾರೆ.
ದೆಹಲಿ ಮನೆಯಲ್ಲಿ 25 ಜನರನ್ನು ಕೆಲಸಕ್ಕೆ ಇಟ್ಟುಕೊಳ್ಳಲಾಗಿದೆ. ಹೊರಗಿನಿಂದ ಬೇರೆಯವರು ಬಂದು ಕಳ್ಳತನ ಮಾಡಲು ಸಾಧ್ಯವಿಲ್ಲ ಅನ್ನೋದು ಪೊಲೀಸರು ಅಭಿಪ್ರಾಯ. ಹೀಗಾಗಿ, ಮನೆಯ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಕಳೆದುಕೊಂಡಿದ್ದೆಷ್ಟು?
ಮನೆಯಲ್ಲಿರುವ ಸಿಸಿಟಿವಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ದೂರಿನಲ್ಲಿ ಹೇಳಿದ ಪ್ರಕಾರ ಕಳೆದುಕೊಂಡಿರುವ ನಗದು ಮತ್ತು ಆಭರಣಗಳ ಮೌಲ್ಯವನ್ನು ಲೆಕ್ಕ ಹಾಕಿದರೆ 2.41 ಕೋಟಿ ರೂಪಾಯಿ ಆಗಲಿದೆ. ಈ ಕಾರಣಕ್ಕೆ ಕುಟುಂಬದವರಿಗೆ ಸಹಜವಾಗಿಯೇ ಚಿಂತೆಗೆ ಒಳಗಾಗಿದ್ದಾರೆ.
ಈ ಮೊದಲು ಹೀಗೆಯೇ ಆಗಿತ್ತು..
ಹರೀಶ್ ಅಹುಜಾ ಅವರಿಗೆ ಈ ರೀತಿ ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಅವರು ವಂಚನೆಗೆ ಒಳಗಾಗಿದ್ದರು. ಆನಂದ್ ಅವರಿಗೆ 27 ಕೋಟಿ ರೂಪಾಯಿ ವಂಚನೆ ನಡೆದಿತ್ತು. ಈ ಪ್ರಕರಣದಲ್ಲಿ 10 ಜನರನ್ನು ಬಂಧಿಸಲಾಗಿತ್ತು.
ಮಗುವಿನ ನಿರೀಕ್ಷೆಯಲ್ಲಿ ಸೋನಂ
2018ರಲ್ಲಿ ಉದ್ಯಮಿ ಆನಂದ್ ಅಹೂಜಾ ಅವರನ್ನು ಸೋನಂ ಮದುವೆ ಆದರು. ಅದ್ದೂರಿಯಾಗಿ ಇವರ ಮದುವೆ ನೆರವೇರಿತ್ತು. ಮದುವೆ ಆಗಿ ಸುಮಾರು ನಾಲ್ಕು ವರ್ಷಗಳ ಬಳಿಕ ಸೋನಂ ಕಡೆಯಿಂದ ಗುಡ್ ನ್ಯೂಸ್ ಸಿಗುತ್ತಿದೆ. ಪ್ರೆಗ್ನೆನ್ಸಿ ಫೋಟೋ ಹಂಚಿಕೊಂಡು ಸೋನಂ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: ಸೋನಂ ಕಪೂರ್ ಮಾವನಿಗೆ ಬರೋಬ್ಬರಿ ₹ 27 ಕೋಟಿ ವಂಚಿಸಿದ್ದ ಸೈಬರ್ ವಂಚಕರ ಬಂಧನ; ಓರ್ವ ಆರೋಪಿ ಕರ್ನಾಟಕದವನು!
Sonam Kapoor: ತಾಯಿ ಆಗುತ್ತಿದ್ದಾರೆ ಸೋನಂ ಕಪೂರ್; ಪ್ರೆಗ್ನನ್ಸಿ ಫೋಟೋ ಹಂಚಿಕೊಂಡ ನಟಿ
Published On - 2:52 pm, Sat, 9 April 22