ಗಳಿಕೆಯಲ್ಲಿ ‘ಕಲ್ಕಿ’ ಚಿತ್ರವನ್ನೂ ಹಿಂದಿಕ್ಕಿದ ‘ಸ್ತ್ರೀ 2’; ಒಟ್ಟೂ ಕಲೆಕ್ಷನ್ ಎಷ್ಟು?

|

Updated on: Aug 23, 2024 | 10:48 AM

ಶ್ರದ್ಧಾ ಕಪೂರ್ ನಟನೆಯ ‘ಸ್ತ್ರೀ 2’ ಸಿನಿಮಾ ಮೆಚ್ಚುಗೆ ಪಡೆಯುತ್ತಿದೆ. ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್​ನಲ್ಲಿ 290 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಗುರುವಾರ ಈ ಸಿನಿಮಾ ಬರೋಬ್ಬರಿ 16 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬೀಗಿದೆ. ಕರ್ನಾಟಕದಲ್ಲೂ ಚಿತ್ರ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ.

ಗಳಿಕೆಯಲ್ಲಿ ‘ಕಲ್ಕಿ’ ಚಿತ್ರವನ್ನೂ ಹಿಂದಿಕ್ಕಿದ ‘ಸ್ತ್ರೀ 2’; ಒಟ್ಟೂ ಕಲೆಕ್ಷನ್ ಎಷ್ಟು?
ಶ್ರದ್ಧಾ ಕಪೂರ್
Follow us on

ಶ್ರದ್ಧಾ ಕಪೂರ್ ಹಾಗೂ ರಾಜ್​ಕುಮಾರ್ ರಾವ್ ನಟನೆಯ ‘ಸ್ತ್ರೀ 2’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಈ ಸಿನಿಮಾ ರಿಲೀಸ್ ಆಗಿ 8 ದಿನಗಳು ಕಳೆದಿವೆ. ಗುರುವಾರ (ಆಗಸ್ಟ್ 22) ಈ ಚಿತ್ರ ಬರೋಬ್ಬರಿ 16 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 290 ಕೋಟಿ ರೂಪಾಯಿ ಆಗಿದೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ರಾಜ್​ಕುಮಾರ್ ರಾವ್ ಹಾಗೂ ಶ್ರದ್ಧಾ ಕಪೂರ್ ಅವರ ವೃತ್ತಿ ಜೀವನದಲ್ಲಿ ಇಷ್ಟು ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದು ಇದೇ ಮೊದಲು. ಈ ಸಿನಿಮಾಗೆ ದಿನ ಕಳೆದಂತೆ ಶೋಗಳ ಸಂಖ್ಯೆ ಹೆಚ್ಚುತ್ತಿದೆ. ವಿಶ್ವಾದ್ಯಂತ ಈ ಸಿನಿಮಾ 401 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ವಾರವರೂ ಸಿನಿಮಾ ಉತ್ತಮ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಕರ್ನಾಟಕದಲ್ಲೂ ಚಿತ್ರ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ.

‘ಕಲ್ಕಿ 2898 ಎಡಿ’ ಹಿಂದಿ ವರ್ಷನ್ ಕಲೆಕ್ಷನ್ ವಿಚಾರಕ್ಕೆ ಬಂದರೆ ‘ಸ್ತ್ರೀ 2’ ಸಿನಿಮಾ ಮೇಲುಗೈ ಸಾಧಿಸಿದೆ. ‘ಕಲ್ಕಿ 2898 ಎಡಿ’ ಹಿಂದಿ ವರ್ಷನ್​ನಿಂದ 293 ಕೋಟಿ ರೂಪಾಯಿ ಬಂದಿದೆ. ‘ಫೈಟರ್’ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇವುಗಳನ್ನು ‘ಸ್ತ್ರೀ 2’ ಸಿನಿಮಾ ಹಿಂದಿಕ್ಕಿದೆ. ಈ ವರ್ಷ ರಿಲೀಸ್ ಆದ ಯಶಸ್ವಿ ಸಿನಿಮಾಗಳ ಸಾಲಿನಲ್ಲಿ ‘ಸ್ತ್ರೀ 2’ ಚಿತ್ರಕ್ಕೆ ಸ್ಥಾನ ಸಿಕ್ಕಿದೆ.

ಇದನ್ನೂ ಓದಿ: ‘ಸ್ತ್ರೀ 2’ನಲ್ಲಿ ಅತಿಥಿ ಪಾತ್ರ ಮಾಡಿದ ವರುಣ್ ಧವನ್​ಗೆ ಭರ್ಜರಿ ಸಂಭಾವನೆ; ಉಳಿದವರ ರೆಮ್ಯುನರೇಷನ್ ಎಷ್ಟು?

‘ಸ್ತ್ರೀ’ ಚಿತ್ರ 2018ರಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಅದರ ಮುಂದುವರಿದ ಭಾಗವಾಗಿ ‘ಸ್ತ್ರೀ 2’ ಸಿನಿಮಾ ಮೂಡಿ ಬಂದಿದೆ. ಮೊದಲ ಚಿತ್ರದ ಕಥೆಗೆ ಕನೆಕ್ಷನ್ ಕೊಟ್ಟು ‘ಸ್ತ್ರೀ 2’ ಚಿತ್ರವನ್ನು ಮುಂದುವರಿಸಲಾಗಿದೆ. ಸಿನಿಮಾದಲ್ಲಿ ಭರ್ಜರಿ ಕಾಮಿಡಿ ಇದೆ. ಈ ಕಾರಣಕ್ಕೆ ಜನರು ಚಿತ್ರವನ್ನು ಹೆಚ್ಚು ಇಷ್ಟಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:45 am, Fri, 23 August 24