‘ಸ್ತ್ರೀ 2’ನಲ್ಲಿ ಅತಿಥಿ ಪಾತ್ರ ಮಾಡಿದ ವರುಣ್ ಧವನ್​ಗೆ ಭರ್ಜರಿ ಸಂಭಾವನೆ; ಉಳಿದವರ ರೆಮ್ಯುನರೇಷನ್ ಎಷ್ಟು?

ಶ್ರದ್ಧಾ ಕಪೂರ್ ನಟನೆಯ ‘ಸ್ತ್ರೀ 2’ ಸಿನಿಮಾ ಮೆಚ್ಚುಗೆ ಪಡೆಯುತ್ತಿದೆ. ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್​ನಲ್ಲಿ 190.55 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾನುವಾರ ಈ ಸಿನಿಮಾ ಬರೋಬ್ಬರಿ 55 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬೀಗಿದೆ. ಈ ಚಿತ್ರದ ಕಲಾವಿದರ ಸಂಭಾವನೆ ಬಗ್ಗೆ ಇಲ್ಲಿದೆ ವಿವರ.

‘ಸ್ತ್ರೀ 2’ನಲ್ಲಿ ಅತಿಥಿ ಪಾತ್ರ ಮಾಡಿದ ವರುಣ್ ಧವನ್​ಗೆ ಭರ್ಜರಿ ಸಂಭಾವನೆ; ಉಳಿದವರ ರೆಮ್ಯುನರೇಷನ್ ಎಷ್ಟು?
ಸ್ತ್ರೀ 2
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Aug 19, 2024 | 10:50 AM

‘ಸ್ತ್ರೀ 2 ಚಿತ್ರ ಬಾಕ್ಸ್ ಆಫೀಸ್​ನಲ್ಲಿ ದಾಖಲೆ ಬರೆದಿದೆ. ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಮೂರೇ ದಿನಕ್ಕೆ 150 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾನುವಾರವೂ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಚಿತ್ರದ ಕಲಾವಿದರು ಪಡೆದಿರುವ ಸಂಭಾವನೆ ಬಗ್ಗೆ ಈಗ ಚರ್ಚೆಗಳು ಶುರವಾಗಿವೆ. ರಾಜ್​ಕುಮಾರ್ ರಾವ್ ಅವರು ‘ಸ್ತ್ರೀ 2’ ಚಿತ್ರದಲ್ಲಿ ಹೆಚ್ಚು ಸಂಭಾವನೆ ಪಡೆದ ಹೀರೋ ಎನಿಸಿಕೊಂಡಿದ್ದಾರೆ. ಆ ಬಳಿಕ ಶ್ರದ್ಧಾ ಕಪೂರ್ ನಿಲ್ಲುತ್ತಾರೆ. ಇನ್ನು, ವರುಣ್ ಧವನ್ ಕೂಡ ಒಳ್ಳೆಯ ಸಂಭಾವನೆ ಪಡೆದಿದ್ದಾರೆ.

‘ಸ್ತ್ರೀ’ ಸಿನಿಮಾ 2018ರಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈಗ ‘ಸ್ತ್ರೀ 2’ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿದೆ. ಈ ಸಿನಿಮಾದ ನಟನೆಗೆ ರಾಜ್​ಕುಮಾರ್ ರಾವ್ ಅವರು ಬರೋಬ್ಬರಿ 6 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಅವರು ವಿಕ್ಕಿ ಹೆಸರಿನ ಪಾತ್ರ ಮಾಡಿದ್ದಾರೆ. ಶ್ರದ್ಧಾ ಕಪೂರ್ ಅವರ ಪಾತ್ರಕ್ಕೂ ಸಾಕಷ್ಟು ತೂಕ ಇದೆ. ಅವರು ಈ ಚಿತ್ರದ ನಟನೆಗೆ 5 ಕೋಟಿ ರೂಪಾಯಿ ಪಡೆದಿದ್ದಾರೆ.

ಶ್ರದ್ಧಾ ಕಪೂರ್ ಅವರು ಈ ಚಿತ್ರವನ್ನು ಇಷ್ಟಪಟ್ಟು ಮಾಡಿದ್ದಾರೆ. ಹೀಗಾಗಿ, ಅವರು ಈ ಚಿತ್ರಕ್ಕೆ ಪಡೆದ ಹಣ ಕಡಿಮೆ. ಈ ಮೊದಲು ‘ತು ಜೂಟಿ ಮೇ ಮಕ್ಕರ್’ ಸಿನಿಮಾಗಾಗಿ ಬರೋಬ್ಬರಿ 7 ಕೋಟಿ ರೂಪಾಯಿ ಪಡೆದುಕೊಂಡಿದ್ದರು ಎನ್ನಲಾಗಿದೆ. ಈ ಚಿತ್ರಕ್ಕಿಂತ 2 ಕೋಟಿ ರೂಪಾಯಿ ಕಡಿಮೆ ಹಣವನ್ನೇ ಅವರು ಪಡೆದಿದ್ದಾರೆ.

ಈ ಚಿತ್ರದಲ್ಲಿ ವರುಣ್ ಧವನ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಅವರು ಕೆಲವೇ ನಿಮಿಷ ಬಂದು ಹೋಗುವ ವರುಣ್ ಧವನ್​ಗೆ 2 ಕೋಟಿ ರೂಪಾಯಿ ಪಡೆದಿದ್ದಾರೆ. ಅವರು ‘ಭೇಡಿಯಾ’ ಸಿನಿಮಾದ ಅವತಾರದಲ್ಲಿ ಬಂದಿದ್ದಾರೆ. ಅವರಿಗೆ ನೀಡಿದ ಸಂಭಾವನೆ ದುಬಾರಿ ಆಯಿತು ಎಂದು ಅನೇಕರು ಭಾವಿಸಿದ್ದಾರೆ.

ಇದನ್ನೂ ಓದಿ: ಲಾಲು ಬಯೋಪಿಕ್​ನಲ್ಲಿ ನಟಿಸೋಕೆ ಪಂಕಜ್ ತ್ರಿಪಾಠಿ ಸೂಕ್ತ; ಶುರುವಾಗಿದೆ ಚರ್ಚೆ 

ಪಂಕಜ್ ತ್ರಿಪಾಠಿ ಅವರು ಈ ಚಿತ್ರಕ್ಕಾಗಿ 3 ಕೋಟಿ ರೂಪಾಯಿ ಪಡೆದಿದ್ದಾರೆ. ಇನ್ನು, ಅಪರಶಕ್ತಿ ಖುರಾನಾ ಅವರು 70 ಲಕ್ಷ ರೂಪಾಯಿ, ಅಭಿಷೇಕ್ ಬ್ಯಾನರ್ಜಿ ಅವರು 55 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ. ‘ಸ್ತ್ರೀ 2’ ಸಿನಿಮಾ ಕೇವಲ ನಾಲ್ಕು ದಿನಕ್ಕೆ 190 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾ ಗಳಿಕೆಯಲ್ಲಿ ಎಲ್ಲವನ್ನೂ ಮೀರಿಸಿದೆ. ಶೀಘ್ರವೇ ಸಿನಿಮಾ 300 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:47 am, Mon, 19 August 24