ಬಾಲಿವುಡ್ನಲ್ಲಿ ನಟಿ ಸುಶ್ಮಿತಾ ಸೇನ್ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಮಾಡೆಲಿಂಗ್ ಜಗತ್ತಿನಲ್ಲಿ ಮಿಂಚಿದ ಬಳಿಕ ಅವರು ಸಿನಿಮಾ ರಂಗಕ್ಕೆ ಬಂದರು. ಈ ಕ್ಷೇತ್ರದಲ್ಲೂ ಅವರಿಗೆ ಗೆಲುವು ಸಿಕ್ಕಿದೆ. ಮಾಡೆಲ್ ಆಗಿ, ನಟಿಯಾಗಿ ಅವರು ಗೆಲುವು ಸಾಧಿಸಿದ್ದಾರೆ. ಅವರು ತೆಗೆದುಕೊಂಡ ನಿರ್ಧಾರಗಳು ಅನೇಕರಿಗೆ ಶಾಕಿಂಗ್ ಎನಿಸಿದೆ. ವಯಸ್ಸಿನಲ್ಲಿ ತಮಗಿಂತ 15 ವರ್ಷ ಚಿಕ್ಕ ಯುವಕನ ಜೊತೆ ಅವರು ಡೇಟಿಂಗ್ ಮಾಡಿದ್ದರು. ಆ ಬಳಿಕ ಅವರು ತಮಗಿಂತ 10 ವರ್ಷ ಹಿರಿಯರಾದ ಲಲಿತ್ ಮೋದಿ ಜೊತೆ ಪ್ರೀತಿಯಲ್ಲಿ ಮುಳುಗಿದ್ದರು. ಈವರೆಗೂ ಮದುವೆ ಆಗದ ಸುಶ್ಮಿತಾ ಸೇನ್ ಅವರಿಗೆ ಇಬ್ಬರು ಮಕ್ಕಳು ಇರೋದು ಅಚ್ಚರಿಯ ಸಂಗತಿ. ಅವರು ಅನೇಕ ಕಾರಣಕ್ಕೆ ವಿವಾದ ಮಾಡಿಕೊಂಡಿದ್ದಾರೆ.
ಸುಶ್ಮಿತಾ ಸೇನ್ 18ನೇ ವಯಸ್ಸಿನಲ್ಲೇ ಮಿಸ್ ಇಂಡಿಯಾ ಮತ್ತು ಮಿಸ್ ಯೂನಿವರ್ಸ್ ಆದರು. ಬಳಿಕ ಅವರಿಗೆ ಸಿನಿಮಾಗಳಿಂದ ಸಾಕಷ್ಟು ಆಫರ್ ಬಂತು. 24ನೇ ವಯಸ್ಸಿಗೆ ಹೆಣ್ಣು ಮಗುವನ್ನು ದತ್ತು ಪಡೆಯುವ ನಿರ್ಧಾರಕ್ಕೆ ಬಂದರು. ಇದನ್ನು ಅನೇಕರು ವಿರೋಧಿಸಿದರು. ಕೆಲವರು ಬೇಡ ಎಂದು ಕೂಡ ಹೇಳಿದರು. ಸುಶ್ಮಿತಾ ಸೇನ್ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. 2000ನೇ ಇಸವಿಯಲ್ಲಿ ರೀನೀ ಎಂಬ ಹೆಣ್ಣು ಮಗಳನ್ನು ಅವರು ದತ್ತು ಪಡೆದುಕೊಂಡರು. 2010ರಲ್ಲಿ ಆಲಿಶಾ ಎಂಬ ಮಗುವನ್ನು ಅವರು ದತ್ತು ಪಡೆದರು.
ಸುಶ್ಮಿತಾ ಸೇನ್ ಮದುವೆ ಆಗಿಲ್ಲ. ಆದರೆ, ಅವರ ಬಾಯ್ಫ್ರೆಂಡ್ ಲಿಸ್ಟ್ ಉದ್ದ ಇದೆ. 2018ರಿಂದ 2022ರವರೆಗೆ ರೋಹ್ಮನ್ ಶಾಲ್ ಜೊತೆ ಅವರು ಲಿವ್-ಇನ್-ರಿಲೇಶನ್ಶಿಪ್ ಹೊಂದಿದ್ದರು. ರೋಹ್ಮಲ್ ಶಾಲ್ ಅವರಿಗಿಂತ 15 ವರ್ಷ ಸಣ್ಣವರು. ಆ ಬಳಿಕ ಅವರಿಬ್ಬರ ನಡುವೆ ಬ್ರೇಕಪ್ ಆಯಿತು. ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಜೊತೆ ಈಗ ಸುಶ್ಮಿತಾ ಸೇನ್ ಡೇಟಿಂಗ್ ಮಾಡಿದರು. ಈಗ ಅವರು ಮತ್ತೆ ರೋಹ್ಮನ್ ಜೊತೆ ಸೇರಿದ್ದಾರೆ.
ಇದನ್ನೂ ಓದಿ: ‘ಮದುವೆ ಬಗ್ಗೆ ಚಿಂತೆ ಇಲ್ಲ’; 48ನೇ ವಯಸ್ಸಿನಲ್ಲಿ ಸುಶ್ಮಿತಾ ಸೇನ್ ನಿರ್ಧಾರ
‘ದಸ್ತಕ್’ ಇದು ಸುಶ್ಮಿತಾ ಸೇನ್ ನಟಿಸಿದ ಮೊದಲ ಸಿನಿಮಾ. ನಾಯಕಿಯಾಗಿ ನಟಿಸುವುದರ ಜೊತೆಗೆ ಕೆಲವು ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ‘ಬೀವಿ ನಂ.1’, ‘ಮೈ ಹೂ ನಾ’, ‘ಮೈ ನೇ ಪ್ಯಾರ್ ಕ್ಯೂ ಕಿಯಾ’ ಮುಂತಾದವು ಸುಶ್ಮಿತಾ ಸೇನ್ ಅವರು ಪ್ರಮುಖ ಸಿನಿಮಾಗಳು. ಇತ್ತೀಚೆಗೆ ಅವರು ‘ಆರ್ಯ’ ವೆಬ್ ಸೀರಿಸ್ನಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:42 am, Tue, 19 November 24