AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕುಡಿದ ಮತ್ತಿನಲ್ಲಿ ನಿರ್ದೇಶಕ ಅಪ್ಪುಗೆ ಕೇಳಿದ’; ಭಯಾನಕ ಅನುಭವ ಹಂಚಿಕೊಂಡ ನಟಿ

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತಮ್ಮ ಆರಂಭಿಕ ವೃತ್ತಿಜೀವನದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. 'ತನು ವೆಡ್ಸ್ ಮನು' ಯಶಸ್ಸಿನ ನಂತರ ನಟಿಸಿದ ಸಿನಿಮಾವೊಂದರ ನಿರ್ದೇಶಕ ಕುಡಿದು ರಾತ್ರಿ ಬಾಗಿಲು ತಟ್ಟಿ ಅಪ್ಪುಗೆಗೆ ಪಟ್ಟು ಹಿಡಿದಿದ್ದನೆಂದು ನಟಿ ಶಾಕಿಂಗ್ ವಿಚಾರ ಬಹಿರಂಗಪಡಿಸಿದ್ದಾರೆ .

‘ಕುಡಿದ ಮತ್ತಿನಲ್ಲಿ ನಿರ್ದೇಶಕ ಅಪ್ಪುಗೆ ಕೇಳಿದ’; ಭಯಾನಕ ಅನುಭವ ಹಂಚಿಕೊಂಡ ನಟಿ
ಸ್ವರಾ ಭಾಸ್ಕರ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Oct 02, 2026 | 8:14 AM

Share

ಮುಖ್ಯಾಂಶಗಳು

  • ರಾತ್ರಿ ವೇಳೆ ಬಾಗಿಲು ತಟ್ಟಿದ್ದ ಕುಡುಕ ನಿರ್ದೇಶಕ
  • ಸ್ವರಾ ಭಾಸ್ಕರ್ ಬಿಚ್ಚಿಟ್ಟ ಬೆಚ್ಚಿಬೀಳಿಸುವ ಸತ್ಯ
  • ಬಾಲಿವುಡ್‌ನ ಕಪ್ಪು ಚುಕ್ಕೆಯನ್ನು ಬಯಲು ಮಾಡಿದ ನಟಿ

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ನಡೆದ ಕಹಿ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ನಿರ್ದೇಶಕನೊಬ್ಬ ಕುಡಿದು ತಮಗೆ ನೀಡಿದ ಕಿರುಕುಳದ ಬಗ್ಗೆ ಅವರು ಮೌನ ಮುರಿದಿದ್ದಾರೆ. ಈ ಘಟನೆಯು ತಮಗೆ ತೀವ್ರ ಭಯ ಹುಟ್ಟಿಸಿತ್ತು ಎಂದು ಅವರು ಬಹಿರಂಗಪಡಿಸಿದ್ದಾರೆ. ಅವರ ಈ ಮಾತುಗಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿವೆ. ನಟಿಯ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

‘ತನು ವೆಡ್ಸ್ ಮನು ಸಿನಿಮಾ ಸೂಪರ್ ಹಿಟ್ ಆದ ಬೆನ್ನಲ್ಲೇ ಈ ಘಟನೆ ನಡೆದಿದೆ. ಮುಖ್ಯಭೂಮಿಕೆಯಲ್ಲಿದ್ದ ಚಿತ್ರದ ಶೂಟಿಂಗ್ ವೇಳೆ ನಿರ್ದೇಶಕ ನಟಿಗೆ ಕವಿತೆಗಳನ್ನು ಕಳುಹಿಸುತ್ತಿದ್ದ. ಆ ಬಳಿಕ ಖಾಸಗಿಯಾಗಿ ಪ್ರಣಯ ಸನ್ನಿವೇಶದ ರೀಹರ್ಸಲ್ ಮಾಡಲು ಕ ಕರೆದಿದ್ದ. ಆದರೆ ಇತರೆ ನಟರು ಮತ್ತು ಕ್ಯಾಮೆರಾಮೆನ್ ಇಲ್ಲದೆ ಒಬ್ಬಂಟಿಯಾಗಿ ಬರಲು ಹೇಳಿದ್ದು ನಟಿಗೆ ಅನುಮಾನ ತಂದಿತ್ತು’ ಎಂದಿದ್ದಾರೆ.

‘ಗೆಸ್ಟ್ ಹೌಸ್‌ನಲ್ಲಿ ಉಳಿದುಕೊಂಡಿದ್ದಾಗ ನಿರ್ದೇಶಕ ಮತ್ತು ಕ್ಯಾಮೆರಾಮ್ಯಾನ್ ಮದ್ಯಪಾನ ಮಾಡುತ್ತಿದ್ದರು. ಇದನ್ನು ಗಮನಿಸಿದ ತಕ್ಷಣವೇ ಆ ಜಾಗದಿಂದ ಹೊರಬಂದೆ. ಕೇವಲ 20 ವರ್ಷದ ಯುವತಿಯಾಗಿದ್ದ ನನಗೆ ಆ ವಾತಾವರಣ ಭಯ ಹುಟ್ಟಿಸಿತ್ತು. ಒಬ್ಬಂಟಿ ಹೆಣ್ಣುಮಗಳಾಗಿ ಕುಡಿತದ ಮತ್ತಿನಲ್ಲಿದ್ದ ಪುರುಷರ ಜೊತೆ ಕೆಲಸ ಮಾಡಲು ಅವರು ನಿರಾಕರಿಸಿದ್ದರು’ ಎಂದಿದ್ದಾರೆ.

ಆದರೆ ಕಿರುಕುಳ ಅಷ್ಟಕ್ಕೇ ನಿಲ್ಲಲಿಲ್ಲ. ರಾತ್ರಿ ವೇಳೆ ಕುಡಿದ ಮತ್ತಿನಲ್ಲಿ ಬಂದ ನಿರ್ದೇಶಕ ನಟಿಯ ಕೋಣೆಯ ಬಾಗಿಲನ್ನು ಜೋರಾಗಿ ತಟ್ಟಿದ್ದಾನೆ. ಬಾಗಿಲು ತೆರೆದಾಗ ತನಗೆ ಅಪ್ಪುಗೆ ನೀಡುವಂತೆ ಪಟ್ಟು ಹಿಡಿದಿದ್ದಾನೆ. ಆತ ತೂರಾಡುತ್ತಾ ಒತ್ತಾಯಿಸುತ್ತಿದ್ದಾಗ ನಟಿ ಆತನ ಮುಖಕ್ಕೆ ಹೊಡೆದಂತೆ ಬೇಡವೆಂದು ನಿರಾಕರಿಸಿದ್ದಾರೆ.

ಇದನ್ನೂ ಓದಿ: ರಾಮ ಜನ್ಮಭೂಮಿ ತೀರ್ಪು ಬಂದಾಗ ಶಾರುಖ್, ಸಲ್ಮಾನ್, ಆಮಿರ್ ಬಳಿ ಕ್ಷಮೆ ಕೇಳಿದ್ದ ಸ್ವರಾ ಭಾಸ್ಕರ್

‘ರೈಸ್ & ಫಾಲ್ 2’ ಶೋನಲ್ಲಿ ಸಹ ಸ್ಪರ್ಧಿಗಳಾದ ಪ್ರಿಯಾಂಕಾ ಚಹರ್ ಮತ್ತು ತೇಜ್ ಪ್ರತಾಪ್ ಯಾದವ್ ಜೊತೆ ಸ್ವರಾ ಈ ವಿಷಯ ಹಂಚಿಕೊಂಡಿದ್ದಾರೆ. ಆದರೆ ಆ ನಿರ್ದೇಶಕ ಅಥವಾ ಸಿನಿಮಾದ ಹೆಸರನ್ನು ಅವರು ಬಹಿರಂಗಪಡಿಸಿಲ್ಲ. ಪ್ರಸ್ತುತ ಈ ರಿಯಾಲಿಟಿ ಶೋನಲ್ಲಿ ಸ್ವರಾ ಭಾಸ್ಕರ್ ಪ್ರಮುಖ ಸ್ಪರ್ಧಿಯಾಗಿ ಮುನ್ನುಗ್ಗುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:13 am, Fri, 2 October 26

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ