ಇಂದು ದೇಶದೆಲ್ಲೆಡೆ ಗಣರಾಜ್ಯೋತ್ಸವವನ್ನು (Republic Day 2022) ಸಂಭ್ರಮದಿಂದ ಆಚರಿಸಲಾಗುತ್ತಿದೆ. ಖ್ಯಾತ ಸೆಲೆಬ್ರಿಟಿಗಳು ವಿಶೇಷ ದಿನಕ್ಕೆ ಶುಭಕೋರುತ್ತಿದ್ದಾರೆ. ಬಾಲಿವುಡ್ ತಾರೆಯರೂ ಇದಕ್ಕೆ ಹೊರತಾಗಿಲ್ಲ. ನಟಿ ಕರೀನಾ ಕಪೂರ್ (Kareena Kapoor) ಕೂಡ ವಿಶೇಷ ಚಿತ್ರದ ಮೂಲಕ ಶುಭ ಕೋರಿದ್ದಾರೆ. ಅದರಲ್ಲಿ ಅವರು ಪುತ್ರ ತೈಮೂರ್ನ ಸೃಜನಶೀಲತೆಯನ್ನು ಬಿಂಬಿಸುವ ಚಿತ್ರವೊಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಮೊದಲ ಪುತ್ರ ತೈಮೂರ್ (Taimur Ali Khan) ತನ್ನದೇ ವಿಧಾನದಲ್ಲಿ ಗಣರಾಜ್ಯೋತ್ಸವ ಆಚರಿಸಿದ್ದಾನೆ. ಹೌದು. ಕಿತ್ತಳೆ, ಸೇಬು ಹಾಗೂ ಕಿವಿ ಹಣ್ಣುಗಳಿಂದ ಭಾರತದ ಧ್ವಜದ ತ್ರಿವರ್ಣವನ್ನು ರಚಿಸಲು ಪ್ರಯತ್ನಿಸುವ ಮೂಲಕ ತೈಮೂರ್ ನಮನ ಸಲ್ಲಿಸಲು ಮುಂದಾಗಿದ್ದಾನೆ. ಪುತ್ರ ಮಾಡಿದ ಈ ಕೆಲಸವನ್ನು ಚಿತ್ರ ಸಮೇತ ಹಂಚಿಕೊಂಡಿರುವ ಕರೀನಾ ‘ಟಿಮ್ (ತೈಮೂರ್) ರಚಿಸಿದ ತ್ರಿವರ್ಣದ ಬ್ರೇಕ್ಫಾಸ್ಟ್’ ಎಂದು ಬರೆದುಕೊಂಡಿದ್ದಾರೆ. ಕರೀನಾ ಹಂಚಿಕೊಂಡಿರುವ ಈ ಚಿತ್ರ ಇದೀಗ ವೈರಲ್ ಆಗಿದ್ದು, ಅಭಿಮಾನಿಗಳ ಖಾತೆಗಳಲ್ಲಿ ಮರುಹಂಚಿಕೆಯಾಗುತ್ತಿದೆ.
ಗಣರಾಜ್ಯೋತ್ಸವಕ್ಕೆ ಸೆಲೆಬ್ರಿಟಿಗಳು ಶುಭಕೋರಿದ್ದು ಹೇಗೆ?
73ನೇ ಗಣರಾಜ್ಯೋತ್ಸವಕ್ಕೆ ಬಾಲಿವುಡ್ನ ಸೆಲೆಬ್ರಿಟಿಗಳು ಶುಭಕೋರಿದ್ದಾರೆ. ನಟ ವಿಕ್ಕಿ ಕೌಶಲ್ ‘ಸರ್ದಾರ್ ಉಧಾಮ್’ ಚಿತ್ರದ ಫೋಟೋ ಒಂದನ್ನು ಹಂಚಿಕೊಂದು ಶುಭ ಕೋರಿದ್ದಾರೆ. ನಟಿ ಕಂಗನಾ ರಣಾವತ್ ಹಾಗೂ ಕರೀನಾ ಕಪೂರ್ ಕೂಡ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಗಳಲ್ಲಿ ಚಿತ್ರ ಹಂಚಿಕೊಂಡು ಅಭಿಮಾನಿಗಳಿಗೆ ಶುಭಕೋರಿದ್ದಾರೆ.
ಸೆಲೆಬ್ರಿಟಿಗಳು ಹಂಚಿಕೊಂಡ ಚಿತ್ರಗಳು ಇಲ್ಲಿವೆ:
ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ಶುಭ ಕೋರಿ, ‘ಮೌಲ್ಯಗಳನ್ನು ಎತ್ತಿಹಿಡಿದು ಎಲ್ಲರನ್ನೂ ಒಗ್ಗಟ್ಟಾಗಿಸುವ ದೇಶದ ಸಂವಿಧಾನವನ್ನು ಎತ್ತಿಹಿಡಿಯೋಣ’ ಎಂದು ಬರೆದುಕೊಂಡಿದ್ದಾರೆ. ಮತ್ತೋರ್ವ ಖ್ಯಾತ ನಿರ್ದೇಶಕಿ ಜೋಯಾ ಅಖ್ತರ್ ಸಂವಿಧಾನದ ಚಿತ್ರವನ್ನು ಹಂಚಿಕೊಂಡು ಗಣರಾಜ್ಯೋತ್ಸವದ ಶುಭಕೋರಿದ್ದಾರೆ.
ಇದನ್ನೂ ಓದಿ:
ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಹೇಗೆ? ‘ಪುಷ್ಪ’ ಚಿತ್ರದ ಟ್ರೇಡ್ ಸೀಕ್ರೆಟ್ ಇಲ್ಲಿದೆ..
ಸೈಫ್-ಕರೀನಾ ಮಾಡಿದ ತಪ್ಪೇನು? ಫೋಟೋ ನೋಡಿ ನಿಮಗೆ ಪತ್ತೆ ಹಚ್ಚೋಕೆ ಆಗುತ್ತಾ ನೋಡಿ
Published On - 2:57 pm, Wed, 26 January 22