Khushi Kapoor: ಶ್ರೀದೇವಿ 2ನೇ ಪುತ್ರಿ ಖುಷಿ ಕಪೂರ್​ ಫೋಟೋ ವೈರಲ್​; ಮೊದಲ ಸಿನಿಮಾ ರಿಲೀಸ್​ಗೂ ಮುನ್ನವೇ ಹವಾ

Khushi Kapoor Bikini Photo: ಚಿತ್ರದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದ್ದಂತೆಯೇ ಸೆಲೆಬ್ರಿಟಿಗಳು ಆ್ಯಕ್ಟೀವ್​ ಆಗುತ್ತಾರೆ. ಖುಷಿ ಕಪೂರ್​ ಕೂಡ ಅದೇ ಪಾಲಿಸಿ ಅನುಸರಿಸುತ್ತಿದ್ದಾರೆ.

Khushi Kapoor: ಶ್ರೀದೇವಿ 2ನೇ ಪುತ್ರಿ ಖುಷಿ ಕಪೂರ್​ ಫೋಟೋ ವೈರಲ್​; ಮೊದಲ ಸಿನಿಮಾ ರಿಲೀಸ್​ಗೂ ಮುನ್ನವೇ ಹವಾ
ಖುಷಿ ಕಪೂರ್​

Updated on: Jul 03, 2023 | 7:40 PM

ಲೆಜೆಂಡರಿ ನಟಿ ಶ್ರೀದೇವಿ ಅವರ ಇಡೀ ಕುಟುಂಬವೇ ಚಿತ್ರರಂಗದಲ್ಲಿ ತೊಡಗಿಕೊಂಡಿದೆ. ಶ್ರೀದೇವಿ (Sridevi) ಪತಿ ಬೋನಿ ಕಪೂರ್​ ಅವರು ಬಾಲಿವುಡ್​ನಲ್ಲಿ ಯಶಸ್ವಿ ನಿರ್ಮಾಪಕ. ಬೋನಿ ಕಪೂರ್​-ಶ್ರೀದೇವಿ ದಂಪತಿಯ ಮೊದಲು ಮಗಳು ಜಾನ್ವಿ ಕಪೂರ್​ ಈಗಾಗಲೇ ಸ್ಟಾರ್​ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 2ನೇ ಪುತ್ರಿ ಖುಷಿ ಕಪೂರ್​ (Khushi Kapoor) ಅವರ ಬಾಲಿವುಡ್​ ಎಂಟ್ರಿಗೆ ದಿನಗಣನೆ ಶುರುವಾಗಿದೆ. ಅವರು ನಟಿಸಿರುವ ಮೊದಲ ಸಿನಿಮಾ ‘ದಿ ಆರ್ಚೀಸ್​​’ ರಿಲೀಸ್​ಗೆ ರೆಡಿಯಾಗಿದೆ. ಈ ನಡುವೆ ಖುಷಿ ಕಪೂರ್​ ಅವರ ಹೊಸ ಫೋಟೋ (Khushi Kapoor Photo) ವೈರಲ್​ ಆಗಿದೆ. ಬಿಕಿಸಿ ಧರಿಸಿ ಅವರು ಪೋಸ್​ ನೀಡಿದ್ದು, ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಲಕ್ಷಾಂತರ ಜನರು ಈ ಫೋಟೋಗೆ ಲೈಕ್​ ಮಾಡಿದ್ದಾರೆ.

ಬಾಲಿವುಡ್​ನಲ್ಲಿ ನೆಪೋಟಿಸಂ ಜೋರಾಗಿದೆ ಎಂದು ಆಗಾಗ ಟೀಕೆ ಕೇಳಿಬರುತ್ತಲೇ ಇರುತ್ತದೆ. ಅದರ ನಡುವೆಯೂ ಸ್ಟಾರ್ ಕಿಡ್​ಗಳ ಎಂಟ್ರಿ ಆಗುತ್ತಲೇ ಇದೆ. ಶ್ರೀದೇವಿ ಅವರ 2ನೇ ಮಗಳು ಖುಷಿ ಕಪೂರ್​ ಅವರು ಬಣ್ಣದ ಲೋಕದಲ್ಲಿ ಮಿಂಚಲು ಸಕಲ ರೀತಿಯಲ್ಲೂ ತಯಾರಿ ನಡೆಸಿದ್ದಾರೆ. ಫಿಟ್ನೆಸ್​ ಬಗ್ಗೆ ಅವರು ಹೆಚ್ಚು ಗಮನ ಹರಿಸುತ್ತಿದ್ದಾರೆ. ಗ್ಲಾಮರಸ್​ ಆದಂತಹ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಖುಷಿ ಕಪೂರ್​ ನಟಿಸಿದ ಮೊದಲ ಸಿನಿಮಾ ‘ದಿ ಆರ್ಚೀಸ್​’ಗೆ ಜೋಯಾ ಅಖ್ತರ್​ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ನೇರವಾಗಿ ನೆಟ್​ಫ್ಲಿಕ್ಸ್​ ಒಟಿಟಿ ಮೂಲಕ ಬಿಡುಗಡೆ ಆಗಲಿದೆ. ಇದೇ ಸಿನಿಮಾದಲ್ಲಿ ಶಾರುಖ್​ ಖಾನ್​ ಅವರ ಪುತ್ರಿ ಸುಹಾನಾ ಖಾನ್​ ಮತ್ತು ಅಮಿತಾಭ್​ ಬಚ್ಚನ್​ ಅವರ ಮೊಮ್ಮೊಗ ಅಗಸ್ತ್ಯ ನಂದ ಕೂಡ ನಟಿಸಿದ್ದಾರೆ. ಅವರಿಗೂ ಇದು ಮೊದಲ ಸಿನಿಮಾ. ಚಿತ್ರದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದ್ದಂತೆಯೇ ಸೆಲೆಬ್ರಿಟಿಗಳು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗುತ್ತಾರೆ. ಖುಷಿ ಕಪೂರ್​ ಕೂಡ ಅದೇ ಪಾಲಿಸಿ ಅನುಸರಿಸುತ್ತಿದ್ದಾರೆ.

ಇದನ್ನೂ ಓದಿ: Khushi Kapoor: ಬೋಲ್ಡ್​ ಫೋಟೋ ಹಾಕೋದ್ರಲ್ಲಿ ಅಕ್ಕ ಜಾನ್ವಿಗೆ ಸ್ಪರ್ಧೆ ನೀಡ್ತಾರೆ ಖುಷಿ ಕಪೂರ್​

‘ದಿ ಆರ್ಚೀಸ್​’ ಸಿನಿಮಾ ಬಗ್ಗೆ ಸಿನಿಪ್ರಿಯರಿಗೆ ಕುತೂಹಲ ಇದೆ. ರೆಟ್ರೋ ಕಾಲದ ಕಥೆಯನ್ನು ಈ ಸಿನಿಮಾ ಹೊಂದಿದೆ. 1964ರ ಕಾಲಘಟ್ಟದಲ್ಲಿ ಸಾಗುವ ಕಥೆಯಲ್ಲಿ ಹದಿಹರೆಯದ ಯುವಕ-ಯುವತಿಯರ ಮೋಜು, ಮಸ್ತಿ, ಪ್ರೀತಿ, ಬ್ರೇಕಪ್​ ಇತ್ಯಾದಿ ಇರಲಿದೆ. ಇತ್ತೀಚೆಗೆ ರಿಲೀಸ್​ ಆದ ಟೀಸರ್​ನಲ್ಲಿ ಈ ಎಲ್ಲ ಅಂಶಗಳ ಝಲಕ್​ ತೋರಿಸಲಾಗಿದೆ. ಸಿನಿಮಾದ ರಿಲೀಸ್​ ಡೇಟ್​ ಶೀಘ್ರದಲ್ಲೇ ಬಹಿರಂಗ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:57 pm, Mon, 3 July 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us