The Kashmir Files Box Office Collection | ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಎಲ್ಲರ ನಿರೀಕ್ಷೆಯಂತೆ ಎರಡನೇ ದಿನ ಗಳಿಕೆಯಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದೆ. ಚಿತ್ರವು ಮೊದಲ ದಿನ ಭಾರತೀಯ ಬಾಕ್ಸಾಫೀಸ್ನಲ್ಲಿ ಸುಮಾರು ₹ 3.55 ಕೋಟಿ ಬಾಚಿಕೊಂಡಿತ್ತು. ವಿಶ್ವಾದ್ಯಂತ ಸುಮಾರು 4.25 ಕೋಟಿ ರೂ ಗಳಿಸಿತ್ತು. ಇದೀಗ ಎರಡನೇ ದಿನದ ಗಳಿಕೆಯ ಮಾಹಿತಿ ಹೊರಬಿದ್ದಿದ್ದು, ಹಲವು ದಾಖಲೆಗಳನ್ನು ಚಿತ್ರ ಬರೆದಿದೆ. 2020ರ ನಂತರ ಕೊರೊನಾ ಕಾರಣಗಳಿಂದ ಚಿತ್ರಮಂದಿರಗಳ ಗಳಿಕೆಯಲ್ಲಿ ತುಸು ತಗ್ಗಿತ್ತು. ಇದೀಗ ಹೊಸ ದಾಖಲೆಯನ್ನು ‘ದಿ ಕಾಶ್ಮೀರ್ ಫೈಲ್ಸ್’ ಬರೆದಿದೆ. ಚಿತ್ರದ ಮೊದಲ ದಿನದ ಗಳಿಕೆಗೂ ಹಾಗೂ ಎರಡನೇ ದಿನದ ಗಳಿಕೆಗೂ ಶೇ.139.44 ಪ್ರತಿಶತ ಏರಿಕೆಯಾಗಿದೆ. ಶನಿವಾರದಂದು ಭಾರತೀಯ ಬಾಕ್ಸಾಫೀಸ್ನಲ್ಲಿ ಚಿತ್ರವು 8.50 ಕೋಟಿ ರೂ ಗಳಿಸಿದೆ. ವಿಶ್ವಾದ್ಯಂತ ಚಿತ್ರ ಎಷ್ಟು ಗಳಿಸಿದೆ ಎಂಬ ಮಾಹಿತಿಯನ್ನು ನಿರ್ಮಾಣ ಸಂಸ್ಥೆಯಾದ ಜೀ ಸ್ಟುಡಿಯೋಸ್ (Zee Studios) ಹಂಚಿಕೊಂಡಿದೆ. ಅದರ ಪ್ರಕಾರ ಎರಡನೇ ದಿನ ಅಂದರೆ ಶನಿವಾರ- ಭಾರತ ಸೇರಿದಂತೆ ವಿಶ್ವಾದ್ಯಂತ ಸುಮಾರು 10.10 ಕೋಟಿ ರೂ ಗಳನ್ನು ‘ದಿ ಕಾಶ್ಮೀರ್ ಫೈಲ್ಸ್’ ಬಾಚಿಕೊಂಡಿದೆ.
ಜೀ ಸ್ಟುಡಿಯೋಸ್ ಹಂಚಿಕೊಂಡಿರುವ ಮಾಹಿತಿ:
The staggering facts of #TheKashmirFiles are striking hard on the box office!??
The movie is in cinemas now, book your tickets.https://t.co/LHqmDwPasGhttps://t.co/6cXZEj1iJc@mithunda_off @AnupamPKher @DarshanKumaar #ChinmayMandlekar #PallaviJoshi @vivekagnihotri pic.twitter.com/iflZMyr6aB— Zee Studios (@ZeeStudios_) March 13, 2022
ಹಲವು ಸೀಮಿತತೆಗಳ ನಡುವೆಯೂ ಗೆಲ್ಲುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’:
‘ದಿ ಕಾಶ್ಮೀರ್ ಫೈಲ್ಸ್’ ಹಲವು ಸೀಮಿತತೆಗಳ ನಡುವೆ ತೆರೆಕಂಡಿತ್ತು. ಪ್ರಬಲ ಪೈಪೋಟಿಯಾಗಿ ‘ರಾಧೆ ಶ್ಯಾಮ್’ ಚಿತ್ರ ಮಾ.11ರಂದೇ ತೆರೆ ಕಂಡಿತ್ತು. ಅಲ್ಲದೇ ಮೊದಲ ದಿನ ‘ದಿ ಕಾಶ್ಮೀರ್ ಫೈಲ್ಸ್’ಗೆ ಸಿಕ್ಕಿದ್ದು ಕೇವಲ 630 ಸ್ಕ್ರೀನ್ಗಳು. ಅಲ್ಲದೇ ಈ ವೀಕೆಂಡ್ ಆಸುಪಾಸಿನಲ್ಲಿ ಯಾವ ರಜಾದಿನಗಳೂ ಇರಲಿಲ್ಲ. ಆದರೆ ಚಿತ್ರ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸುತ್ತಿದೆ.
‘ದಿ ಕಾಶ್ಮೀರ್ ಫೈಲ್ಸ್’ ಹಿಂದಿಯಲ್ಲಿ ಮಾತ್ರ ತೆರೆಕಂಡಿದೆ. ಚಿತ್ರಕ್ಕೆ ಪ್ರತಿಕ್ರಿಯೆ ಉತ್ತಮವಾಗಿರುವುದರಿಂದ ದಕ್ಷಿಣದಲ್ಲೂ ಚಿತ್ರದ ಸ್ಕ್ರೀನ್ಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಪರಿಣಾಮ, ಭಾರತದಲ್ಲಿ ಮೊದಲ ದಿನ 630 ಇದ್ದ ಸ್ಕ್ರೀನ್ಗಳಲ್ಲಿ ಪ್ರದರ್ಶನವಾಗುತ್ತಿದ್ದ ಚಿತ್ರವು, ಇಂದು (ಭಾನುವಾರ) ಸುಮಾರು 2000ಕ್ಕೂ ಹೆಚ್ಚು ತೆರೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಗಳಿಕೆ ಏರಲು ಇದು ಪ್ರಮುಖ ಕಾರಣವಾಗಿದೆ.
ಚಿತ್ರ ನೋಡಿದ ವೀಕ್ಷಕರು ಭಾವುಕರಾಗಿದ್ದು, ಕಾಶ್ಮೀರಿ ಪಂಡಿತರ ಕಷ್ಟಗಳನ್ನು ತೆರೆಯ ಮೇಲೆ ತಂದಿದ್ದಕ್ಕೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಧನ್ಯವಾದ ಹೇಳುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಜನರು ಬರೆದುಕೊಳ್ಳುತ್ತಿದ್ದು, ‘ದಿ ಕಾಶ್ಮೀರ್ ಫೈಲ್ಸ್’ ಟ್ರೆಂಡ್ ಆಗಿದೆ. 1990ರ ಕಾಶ್ಮೀರ ಘಟನೆಗಳ, ಪಂಡಿತರ ವಲಸೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರಮರ್ತಿ, ಪಲ್ಲವಿ ಜೋಶಿ, ಪ್ರಕಾಶ್ ಬೆಳವಾಡಿ ಮೊದಲಾದವರು ಈ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ ತಂಡಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ:
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತಂಡ ಶನಿವಾರ (ಮಾ.12) ಸಂಜೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಪ್ರಧಾನಿ ಚಿತ್ರವನ್ನು ಹಾಗೂ ಚಿತ್ರತಂಡವನ್ನು ಶ್ಲಾಘಿಸಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ತುಂಬ ಖುಷಿ ಆಯಿತು. ನಮ್ಮ ಸಿನಿಮಾ ಬಗ್ಗೆ ಅವರು ಹೇಳಿದ ಪ್ರಶಂಸೆಯ ಮಾತುಗಳಿಂದಾಗಿ ಈ ಭೇಟಿ ತುಂಬ ವಿಶೇಷವಾಯಿತು’ ಎಂದು ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಭಾರತದ ಅತ್ಯಂತ ಸವಾಲಿನ ಸತ್ಯವನ್ನು ಇಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡಲು ಧೈರ್ಯ ತೋರಿಸಿದ್ದಾಗಿ ನಿಮಗೆ ಧನ್ಯವಾದಗಳು’ ಎಂದು ನಿರ್ಮಾಪಕರಿಗೆ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ:
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ಮೋದಿ ಮೆಚ್ಚುಗೆ ಮಾತು; ಚಿತ್ರತಂಡಕ್ಕೆ ಖುಷಿಯೋ ಖುಷಿ
Bollywood: ಸಾಮಾಜಿಕ ಜಾಲತಾಣಗಳಿಗೆ ವಿದಾಯ ಹೇಳಿದ ಬಾಲಿವುಡ್ ಸೆಲೆಬ್ರಿಟಿಗಳು ಯಾರು ಗೊತ್ತಾ..!
Published On - 4:37 pm, Sun, 13 March 22