The Sabarmati Report: ‘ದಿ ಸಾಬರಮತಿ ರಿಪೋರ್ಟ್​’: ಗೋಧ್ರಾ ಹತ್ಯಾಕಾಂಡ ಕುರಿತು ಸಿದ್ಧವಾಗಿದೆ ಸಿನಿಮಾ

|

Updated on: Feb 28, 2024 | 1:15 PM

ನೈಜ ಘಟನೆಯನ್ನು ಆಧರಿಸಿ ‘ದಿ ಸಾಬರಮತಿ ರಿಪೋರ್ಟ್​’ ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ವಿಕ್ರಾಂತ್​ ಮಾಸ್ಸಿ ಅವರು ಪತ್ರಕರ್ತನ ಪಾತ್ರ ಮಾಡಿದ್ದಾರೆ. ಗೋಧ್ರಾ ಹತ್ಯಾಕಾಂಡದ ಕಥೆಯನ್ನು ಈ ಸಿನಿಮಾ ತೆರೆದಿಡಲಿದೆ. ಈ ಚಿತ್ರದ ಟೀಸರ್​ ಬಿಡುಗಡೆ ಆಗಿದೆ. ರಂಜನ್​ ಚಂಡೇಲ್​ ನಿರ್ದೇಶನದ ‘ದಿ ಸಾಬರಮತಿ ರಿಪೋರ್ಟ್​’ ಸಿನಿಮಾ ಮೇ 3ರಂದು ರಿಲೀಸ್​ ಆಗಲಿದೆ.

The Sabarmati Report: ‘ದಿ ಸಾಬರಮತಿ ರಿಪೋರ್ಟ್​’: ಗೋಧ್ರಾ ಹತ್ಯಾಕಾಂಡ ಕುರಿತು ಸಿದ್ಧವಾಗಿದೆ ಸಿನಿಮಾ
ಗೋಧ್ರಾ ರೈಲು ದಹನ, ವಿಕ್ರಾಂತ್​ ಮಾಸ್ಸಿ
Follow us on

ಇತಿಹಾಸದ ಕಹಿ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವ ಟ್ರೆಂಡ್​ ಜೋರಾಗಿದೆ. ‘ದಿ ಕಾಶ್ಮೀರ್​ ಫೈಲ್ಸ್​’ ಬಳಿಕ ಅಂತಹ ಕಥೆಗಳ ಕಡೆಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. 22 ವರ್ಷಗಳ ಹಿಂದಿನ ಗೋಧ್ರಾ ರೈಲು ಹತ್ಯಾಕಾಂಡ ಆಧರಿಸಿ ಈಗ ಹೊಸ ಸಿನಿಮಾ ಸಿದ್ಧವಾಗಿದೆ. ‘ದಿ ಸಾಬರಮತಿ ರಿಪೋರ್ಟ್​’ (The Sabarmati Report) ಎಂದು ಈ ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಬಾಲಿವುಡ್​ನ ಖ್ಯಾತ ನಟ ವಿಕ್ರಾಂತ್​ ಮಾಸ್ಸಿ (Vikrant Massey) ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅಲ್ಲದೇ, ರಾಶಿ ಖನ್ನಾ ಹಾಗೂ ರಿಧಿ ಡೋಗ್ರಾ ಕೂಡ ನಟಿಸಿದ್ದಾರೆ. ‘ದಿ ಸಾಬರಮತಿ ರಿಪೋರ್ಟ್​’ ಚಿತ್ರದ ಟೀಸರ್​ (The Sabarmati Report Teaser) ಬಿಡುಗಡೆ ಆಗಿದ್ದು ಹೊಸ ಸಂಚಲನ ಸೃಷ್ಟಿಸಿದೆ.

2002ರ ಫೆಬ್ರವರಿ 27ರಂದು ನಡೆದ ಗೋಧ್ರಾ ರೈಲು ದುರಂತದಲ್ಲಿ 59 ಜನರ ಸಜೀವ ದಹನ ಆಗಿತ್ತು. ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಈ ಸಿನಿಮಾ ಮಾಡಲಾಗಿದೆ ಎಂದು ಚಿತ್ರದ ಟೀಸರ್​ನಲ್ಲಿ ತಿಳಿಸಲಾಗಿದೆ. ಗೋದ್ರಾ ಹತ್ಯಾಕಾಂಡದ ಕುರಿತು ಸುದ್ದಿ ವಾಚನ ಮಾಡುವ ಪತ್ರಕರ್ತನ ಪಾತ್ರದಲ್ಲಿ ವಿಕ್ರಾಂತ್​ ಮಾಸ್ಸಿ ಅವರು ಕಾಣಿಸಿಕೊಂಡಿದ್ದಾರೆ. ‘ದಿ ಸಾಬರಮತಿ ರಿಪೋರ್ಟ್​’ ಸಿನಿಮಾದ ಟೀಸರ್​ ವೈರಲ್​ ಆಗಿದೆ.

‘ಬಾಲಾಜಿ ಮೋಷನ್​ ಪಿಕ್ಚರ್ಸ್​’ ಹಾಗೂ ‘ಎ ವಿಕಿರ್​ ಫಿಲ್ಮ್ಸ್​ ಪ್ರೊಡಕ್ಷನ್​’ ಜಂಟಿಯಾಗಿ ‘ದಿ ಸಾಬರಮತಿ ರಿಪೋರ್ಟ್​’ ಸಿನಿಮಾವನ್ನು ನಿರ್ಮಿಸಿವೆ. ರಂಜನ್​ ಚಂಡೇಲ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಟೀಸರ್​ನ ಜೊತೆ ಸಿನಿಮಾದ ರಿಲೀಸ್​ ದಿನಾಂಕವನ್ನು ಘೋಷಿಸಲಾಗಿದೆ. ಮೇ 3ರಂದು ‘ದಿ ಸಾಬರಮತಿ ರಿಪೋರ್ಟ್​’ ಸಿನಿಮಾ ಬಿಡುಗಡೆ ಆಗಲಿದೆ. ಸೂಕ್ಷ್ಮ ವಿಚಾರದ ಕುರಿತು ಈ ಸಿನಿಮಾ ನಿರ್ಮಾಣ ಆಗಿರುವುದರಿಂದ ರಿಲೀಸ್​ ಸಮಯದಲ್ಲಿ ವಿವಾದ ಶುರುವಾಗುವ ಸಾಧ್ಯತೆ ಇದೆ.

‘ದಿ ಸಾಬರಮತಿ ರಿಪೋರ್ಟ್​’ ಚಿತ್ರದ ಟೀಸರ್​:

ನಟ ವಿಕ್ರಾಂತ್​ ಮಾಸ್ಸಿ ಅವರಿಗೆ ಈಗ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಕಳೆದ ವರ್ಷ ಬಿಡುಗಡೆಯಾದ ‘12th ಫೇಲ್​’ ಸಿನಿಮಾದ ಯಶಸ್ಸಿನಿಂದ ಅವರು ಸ್ಟಾರ್​ ಆಗಿದ್ದಾರೆ. ಹಾಗಾಗಿ ಅವರ ಮುಂಬರುವ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈಗ ಅವರು ‘ದಿ ಸಾಬರಮತಿ ರಿಪೋರ್ಟ್​’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾ ನೋಡಲು ವಿಕ್ರಾಂತ್​ ಮಾಸ್ಸಿ ಅಭಿಮಾನಿಗಳು ಕಾದಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಗೋಧ್ರಾ ರೀತಿ ಘಟನೆ ಹೇಳಿಕೆ: ಬಿಕೆ ಹರಿಪ್ರಸಾದ್ ವಿಚಾರಣೆ ನಡೆಸಿದ ಸಿಸಿಬಿ

ಗೋಧ್ರಾ ಹತ್ಯಾಕಾಂಡದ ಬಗ್ಗೆ ಬೇರೆ ಬೇರೆ ಅಭಿಪ್ರಾಯ ಇದೆ. ಈ ಸಿನಿಮಾದ ಮೂಲಕ ಸತ್ಯ ಹೊರಬರಲಿ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಈ ಸಿನಿಮಾ ಖಂಡಿತವಾಗಿಯೂ ಹಿಟ್​ ಆಗಲಿದೆ ಎಂದು ನೆಟ್ಟಿಗರು ಭವಿಷ್ಯ ನುಡಿಯುತ್ತಿದ್ದಾರೆ. ‘12th ಫೇಲ್​’ ಬಳಿಕ ವಿಕ್ರಾಂತ್​ ಮಾಸ್ಸಿ ಅವರು ಮತ್ತೊಮ್ಮೆ ನೈಜ ಘಟನೆ ಆಧಾರಿತ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.