ಗುಂಡಿನ ದಾಳಿಯ ಬಳಿಕ ಮತ್ತೆ ಚಿತ್ರೀಕರಣಕ್ಕೆ ಮರಳಿದ ಟೈಗರ್ ಶ್ರಾಫ್

ಟೈಗರ್ ಶ್ರಾಫ್ ಮೇಲೆ ದಾಳಿಯ ಹಿಂದೆ ಭೂಗತ ಪಾತಕಿಗಳ ಕೈವಾಡವಿದ್ದು, ದಾಳಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಈಗಾಗಲೇ ಹಲವರನ್ನು ಬಂಧಿಸಿದ್ದಾರೆ. ಜೊತೆಗೆ ದಾಳಿಕೋರರ ವಿಚಾರಣೆಯಿಂದ ಹಲವು ಮಹತ್ವದ ಅಂಶಗಳು ಸಹ ಹೊರಗೆ ಬಂದಿವೆ. ಗುಂಡಿನ ದಾಳಿಯಲ್ಲಿ ಟೈಗರ್ ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದವು. ಇದೀಗ ದಾಳಿ ನಡೆದ ತಿಂಗಳಿಗೂ ಮುಂಚೆಯೇ ಟೈಗರ್ ಶ್ರಾಫ್ ಅವರು ಚಿತ್ರೀಕರಣಕ್ಕೆ ಮರಳಿದ್ದಾರೆ.

ಗುಂಡಿನ ದಾಳಿಯ ಬಳಿಕ ಮತ್ತೆ ಚಿತ್ರೀಕರಣಕ್ಕೆ ಮರಳಿದ ಟೈಗರ್ ಶ್ರಾಫ್
Tiger Shroff

Updated on: Nov 11, 2026 | 3:34 PM

ಮುಖ್ಯಾಂಶಗಳು

  • ಟೈಗರ್ ಶ್ರಾಫ್ ಮೇಲೆ ನಡೆದಿತ್ತು ಗುಂಡಿನ ದಾಳಿ
  • ದಾಳಿ ಬಳಿಕ ಮತ್ತೆ ಚಿತ್ರೀಕರಣಕ್ಕೆ ಮರಳಿದ ಟೈಗರ್
  • ಹೊಸ ಸಿನಿಮಾನಲ್ಲಿ ನಟಿಸುತ್ತಿರುವ ಟೈಗರ್

ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಕಳೆದ ತಿಂಗಳು (ಅಕ್ಟೋಬರ್ 18) ರಂದು ಮುಂಬೈನ ಜುಹುವಿನಲ್ಲಿ ಗುಂಡಿನ ದಾಳಿ ನಡೆದಿತ್ತು. ನಡು ರಸ್ತೆಯಲ್ಲಿ ನಡೆದ ಈ ಗುಂಡಿನ ದಾಳಿ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಈ ದಾಳಿಯ ಹಿಂದೆ ಭೂಗತ ಪಾತಕಿಗಳ ಕೈವಾಡವಿದ್ದು, ದಾಳಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಈಗಾಗಲೇ ಹಲವರನ್ನು ಬಂಧಿಸಿದ್ದಾರೆ. ಜೊತೆಗೆ ದಾಳಿಕೋರರ ವಿಚಾರಣೆಯಿಂದ ಹಲವು ಮಹತ್ವದ ಅಂಶಗಳು ಸಹ ಹೊರಗೆ ಬಂದಿವೆ. ಗುಂಡಿನ ದಾಳಿಯಲ್ಲಿ ಟೈಗರ್ ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದವು. ಇದೀಗ ದಾಳಿ ನಡೆದ ತಿಂಗಳಿಗೂ ಮುಂಚೆಯೇ ಟೈಗರ್ ಶ್ರಾಫ್ ಅವರು ಚಿತ್ರೀಕರಣಕ್ಕೆ ಮರಳಿದ್ದಾರೆ.

ಇದೀಗ ನಟ ಟೈಗರ್ ಶ್ರಾಫ್ ಮತ್ತೆ ಸಿನಿಮಾ ಶೂಟಿಂಗ್‌ಗೆ ಮರಳಿದ್ದು, ತಮ್ಮ ನಟನೆ, ಆಕ್ಷನ್ ಮತ್ತು ನೃತ್ಯ ಕೌಶಲ್ಯವನ್ನು ಮತ್ತೊಮ್ಮೆ ಪ್ರದರ್ಶಿಸಲು ಸಿದ್ಧರಾಗಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ನಿರ್ಮಾಣದ, ರಾಜ್ ಮೆಹ್ತಾ ನಿರ್ದೇಶನದ ‘ಲಗ್ ಜಾ ಗಲೆ’ ಸಿನಿಮಾನಲ್ಲಿ ಟೈಗರ್ ಶ್ರಾಫ್ ನಟನೆ ಮಾಡುತ್ತಿದ್ದು, ಇದೇ ಸಿನಿಮಾದ ಚಿತ್ರೀಕರಣದಲ್ಲಿ ಟೈಗರ್ ಅವರು ಇಂದಿನಿಂದ ತೊಡಗಿಕೊಂಡಿದ್ದಾರೆ.

Loading...

ಸಿನಿಮಾಕ್ಕಾಗಿ ಅದ್ಧೂರಿ ಹಾಡೊಂದರ ಚಿತ್ರೀಕರಣ ಮಾಡಲಾಗುತ್ತಿದ್ದು, ಬೋಸ್ಕೋ ಮಾರ್ಟಿಸ್ ಅವರ ನೃತ್ಯ ನಿರ್ದೇಶನದಲ್ಲಿ ಈ ಹಾಡನ್ನು ಉತ್ಸಾಹಭರಿತ ಪಾರ್ಟಿ ವಾತಾವರಣವಿರುವ ಅತ್ಯಂತ ವರ್ಣರಂಜಿತ ಡಿಸ್ಕೋ ಸೆಟ್‌ನಲ್ಲಿ ಚಿತ್ರೀಕರಿಸಲಾಗುತ್ತಿದೆ. ಮುಂಬೈನಲ್ಲಿಯೇ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದ್ದು, ಭಾರತೀಯ ಮತ್ತು ವಿದೇಶಿ ನೃತ್ಯಪಟುಗಳ ಜೊತೆಗೆ ಇತರೆ ಕಲಾವಿದರನ್ನೊಳಗೊಂಡ ಈ ನೃತ್ಯ ಸನ್ನಿವೇಶವನ್ನು ಬೃಹತ್ ಮಟ್ಟದಲ್ಲಿ ನಿರ್ಮಿಸಲಾಗುತ್ತಿದೆ. ಟೈಗರ್ ಅವರನ್ನು ಕೇಂದ್ರಬಿಂದುವಾಗಿಟ್ಟುಕೊಂಡು, ಈ ಹಾಡಿಗೆ ಅತ್ಯಂತ ಸ್ಟೈಲಿಶ್ ಹಾಗೂ ಹೈ-ಎನರ್ಜಿ ಲುಕ್ ನೀಡಲು ಚಿತ್ರತಂಡ ಸರ್ವ ಪ್ರಯತ್ನ ನಡೆಸುತ್ತಿದೆಯಂತೆ.

ಇದನ್ನೂ ಓದಿ:ಗುಂಡಿನ ದಾಳಿ ಘಟನೆ ಬಳಿಕ ಮುಂಬೈನ ಫ್ಲಾಟ್‌ ಮಾರಾಟ ಮಾಡಿದ ನಟ ಟೈಗರ್ ಶ್ರಾಫ್

ಹಾಡಿನ ಚಿತ್ರೀಕರಣವನ್ನು ಮುಂದಿನ ನಾಲ್ಕು ದಿನಗಳ ಕಾಲ ನಡೆಸಲಾಗುತ್ತಿದ್ದು, ಇದಕ್ಕಾಗಿ ದೊಡ್ಡ ಮಟ್ಟದ ತಯಾರಿ ಮಾಡಲಾಗಿದೆ. ಅದ್ಧೂರಿ ಸೆಟ್​​, ಹಲವಾರು ಕಲಾವಿದರ ಜೊತೆಗೆ ಸಿನಿಮಾ ಸೆಟ್​​ಗೆ ಭದ್ರತೆಯನ್ನು ಸಹ ಪೊಲೀಸರು ಒದಗಿಸಿದ್ದಾರೆ. ಜೊತೆಗೆ ಚಿತ್ರೀಕರಣದ ವೇಳೆಯಲ್ಲೂ ಸಹ ಹಲವು ಮುನ್ನೆಚ್ಚರಿಕೆಗಳನ್ನು ವಹಿಸಲಾಗಿದೆ. ಮೆಟಲ್ ಡಿಟೆಕ್ಟರ್​​ಗಳನ್ನು ಸಹ ಅಳವಡಿಸಲಾಗಿದೆ ಎನ್ನಲಾಗುತ್ತಿದೆ.

ಖ್ಯಾತ ನೃತ್ಯ ನಿರ್ದೇಶಕ ರೆಮೊ ಡಿಸೋಜಾ ನಿರ್ದೇಶನ ಸಿನಿಮಾ ಒಂದರಲ್ಲೂ ಸಹ ಟೈಗರ್ ನಟನೆ ಮಾಡಿದ್ದು ಆ ಸಿನಿಮಾದ ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ. ಮೂಲಗಳ ಪ್ರಕಾರ ಆ ಯೋಜನೆಯ ಹೆಚ್ಚಿನ ಭಾಗಗಳು ಈಗಾಗಲೇ ಚಿತ್ರೀಕರಣಗೊಂಡಿದ್ದು, ಕೇವಲ ಹಾಡುಗಳು ಮಾತ್ರ ಬಾಕಿಯುಳಿದಿವೆ. ಬಾಕಿ ಇರುವ ಈ ಹಾಡಿನ ಶೂಟಿಂಗ್‌ಗಳನ್ನು ಈ ತಿಂಗಳ ಅಂತ್ಯದ ವೇಳೆಗೆ ಮುಗಿಸುವ ಸಾಧ್ಯತೆಯಿದೆ. ಟೈಗರ್ ಅವರ ಮೇಲೆ ನಡೆದ ದಾಳಿಯಿಂದಾಗಿ ಚಿತ್ರೀಕರಣದಿಂದ ಅವರು ಬ್ರೇಕ್ ಪಡೆದುಕೊಂಡಿದ್ದರು. ಈಗ ಮತ್ತೆ ಚಿತ್ರೀಕರಣಕ್ಕೆ ಮರಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us