
ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರು ಬಾಲಿವುಡ್ ಸ್ಟಾರ್ ನಟರುಗಳಿಗೆ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್ ಇದೀಗ ಆಮಿರ್ ಖಾನ್ಗೂ ಸಹ ಲೋಕೇಶ್ ಕನಗರಾಜ್ ಹೊಸ ಸಿನಿಮಾ ನಿರ್ದೇಶಿಸಲಿದ್ದಾರೆ. ಆದರೆ ಹೀಗೆ ಬಾಲಿವುಡ್ಗೆ ಹೋದವರಲ್ಲಿ ತಮಿಳು, ತೆಲುಗಿನ ನಿರ್ದೇಶಕರೇ ಹೆಚ್ಚು. ಆದರೆ ಇದೀಗ ಕನ್ನಡದ ಸಿನಿಮಾ ನಿರ್ದೇಶಕರೊಬ್ಬರು ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದಾರೆ. ಆದರೆ ಅವರ ಮೊದಲ ಸಿನಿಮಾಕ್ಕೆ ಸಿಬಿಎಫ್ಸಿ ಬರೋಬ್ಬರಿ 23 ಕಟ್ಗಳನ್ನು ಸೂಚಿಸಿದೆ.
‘ಭಜರಂಗಿ’, ‘ಗೆಳೆಯ’, ‘ವಜ್ರಕಾಯ’, ‘ವೇದ’ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ನೀಡಿರುವ ಎ ಹರ್ಷ ಇದೀಗ ಬಾಲಿವುಡ್ಗೆ ಕಾಲಿಟ್ಟಿದ್ದಾರೆ. ಬಾಲಿವುಡ್ನ ಸ್ಟಾರ್ ಯುವ ನಟ ಟೈಗರ್ ಶ್ರಾಫ್ ನಟನೆಯ ‘ಭಾಗಿ 4’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಸಂಜಯ್ ದತ್ ವಿಲನ್. ಸೋನಮ್ ಭಾಜ್ವಾ, ಹರ್ನಾಜ್ ಸಂಧು ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾ ಇಂದು (ಸೆಪ್ಟೆಂಬರ್ 5) ಬಿಡುಗಡೆ ಆಗಿದ್ದು ಮೊದಲ ಶೋಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ.
ಆದರೆ ಈ ಸಿನಿಮಾಕ್ಕೆ ಸಿಬಿಎಫ್ಸಿ ಬರೋಬ್ಬರಿ 23 ಕಟ್ಗಳನ್ನು ಸೂಚಿಸಿದೆ. ಪಕ್ಕಾ ಆಕ್ಷನ್ ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ನಾಯಕ ಪ್ರೇಮವೈಫಲ್ಯದಿಂದಾಗಿ ಕುಡಿತದ ದಾಸನಾಗಿರುತ್ತಾನೆ. ಹಾಗಾಗಿ ಸಿನಿಮಾನಲ್ಲಿ ಕುಡಿತದ ದೃಶ್ಯಗಳು, ಸಿಗರೇಟು, ಗಾಂಜಾ ಸೇದುವ ದೃಶ್ಯಗಳು ಸಹ ಹೆಚ್ಚಿಗೆ ಇವೆ. ಆಕ್ಷನ್ ಸಿನಿಮಾ ಆಗಿರುವ ಕಾರಣದಿಂದಾಗಿ ಸಹಜವಾಗಿಯೇ ಸಿನಿಮಾನಲ್ಲಿ ಹಿಂಸೆಯೂ ಸಹ ಹೆಚ್ಚಾಗಿಯೇ ಇದೆ. ಹೀಗಾಗಿ ಸಿಬಿಎಫ್ಸಿ 23 ದೃಶ್ಯಗಳಿಗೆ ಕತ್ತರಿ ಹಾಕಿದೆ. ಹಲವು ಸಂಭಾಷಣೆಗಳ್ನು ಮ್ಯೂಟ್ ಮಾಡಿದೆ, ಬದಲಾವಣೆ ಮಾಡಿಸಲಾಗಿದೆ. ಇದೆಲ್ಲದರ ಹೊರತಾಗಿಯೂ ಸಹ ಸಿನಿಮಾಕ್ಕೆ ಎ ಪ್ರಮಾಣ ಪತ್ರ ನೀಡಲಾಗಿದೆ.
ಇದನ್ನೂ ಓದಿ:ಸಂಕಷ್ಟದಲ್ಲಿ ಯೋಗಿ ಆದಿತ್ಯನಾಥ ಕುರಿತ ಸಿನಿಮಾ, ಸಿಬಿಎಫ್ಸಿಗೆ ಕೋರ್ಟ್ ನೊಟೀಸ್
ದೀಪದಲ್ಲಿ ಸಿಗರೇಟು ಹೊತ್ತಿಸುವ ದೃಶ್ಯವನ್ನು ತೆಗೆದು ಹಾಕಲಾಗಿದೆ. ಜೊತೆಗೆ ಕೆಲವು ಅಶ್ಲೀಲ ಸಂಭಾಷಣೆಗಳನ್ನು ಮ್ಯೂಟ್ ಮಾಡಲಾಗಿದ್ದು, ಕೆಲವನ್ನು ತೆಗೆದು ಹಾಕಲಾಗಿದೆ. ಸಾಕಷ್ಟು ಬದಲಾವಣೆಗಳ ಬಳಿಕವೂ ಸಹ ಸಿನಿಮಾಕ್ಕೆ ಎ ಸರ್ಟಿಫಿಕೇಟ್ ದೊರೆತಿದ್ದು, ‘ಭಾಗಿ 4’ ಸಿನಿಮಾ ಇಂದು (ಸೆಪ್ಟೆಂಬರ್ 5) ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು, ಮೊದಲ ಶೋಕ್ಕೆ ವೀಕ್ಷಕರು ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ.
‘ಭಾಗಿ’ ಸಿನಿಮಾ ಸರಣಿ ಹಲವು ವರ್ಷಗಳಿಂದಲೂ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಟೈಗರ್ ಶ್ರಾಫ್ ವರೇ ‘ಭಾಗಿ’ ಸರಣಿಯ ನಾಯಕರಾಗಿ ನಟಿಸುತ್ತಾ ಬಂದಿದ್ದಾರೆ. ಆಕ್ಷನ್ ಸಿನಿಮಾ ಆಗಿದ್ದ ‘ಭಾಗಿ’ ಅನ್ನು ಈ ಬಾರಿ ಆಕ್ಷನ್ ಜೊತೆಗೆ ರೊಮ್ಯಾಂಟಿಕ್ ಥ್ರಿಲ್ಲರ್ ಆಗಿಯೂ ಬದಲಾಯಿಸಿದ್ದಾರೆ ಎ ಹರ್ಷ. ಈ ಸಿನಿಮಾದ ಯಶಸ್ಸಿನ ಮೂಲಕ ಹರ್ಷ ಬಾಲಿವುಡ್ನಲ್ಲಿ ಇನ್ನಷ್ಟು ಅವಕಾಶಗಳನ್ನು ಪಡೆದುಕೊಳ್ಳುತ್ತಾರಾ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ