
ವಿದೇಶಿ ಸೆನ್ಸಾರ್ ಬೋರ್ಡ್ ಸದಸ್ಯ ಹಾಗೂ ವಿಮರ್ಶಕ ಎಂದು ಹೇಳಿಕೊಂಡು ಪ್ರಚಾರ ಪಡೆಯುತ್ತಿರುವ ಉಮೈರ್ ಸಂಧು (Umair Sandhu) ಅನೇಕ ಸೆಲೆಬ್ರಿಟಿಗಳ ವಿರೋಧ ಕಟ್ಟಿಕೊಂಡಿದ್ದಾನೆ. ಅದಕ್ಕೆ ಕಾರಣ ಆಗಿರುವುದು ಆತನ ವಿವಾದಾತ್ಮಕ ಟ್ವೀಟ್ಗಳು. ಟ್ವಿಟರ್ನಲ್ಲಿ ಆ್ಯಕ್ಟೀವ್ ಆಗಿರುವ ಉಮೈರ್ ಸಂಧು ಈಗ ನಟಿ ಸೆಲಿನಾ ಜೇಟ್ಲಿ (Celina Jaitley) ಬಗ್ಗೆ ಅಶ್ಲೀಲವಾಗಿ ಪೋಸ್ಟ್ ಮಾಡಿದ್ದಾನೆ. ನಟರಾದ ಫಿರೋಜ್ ಖಾನ್ ಮತ್ತು ಫರ್ದೀನ್ ಖಾನ್ (Fardeen Khan) ಜೊತೆ ಸೆಲಿನಾ ಜೇಟ್ಲಿ ಸಂಬಂಧ ಹೊಂದಿದ್ದರು ಎಂದು ಉಮೈರ್ ಸಂಧು ಪೋಸ್ಟ್ ಮಾಡಿದ್ದಾನೆ. ಇದನ್ನು ಕಂಡು ಸೆಲಿನಾ ಗರಂ ಆಗಿದ್ದಾರೆ. ತಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿರುವ ವಿಮರ್ಶಕನಿಗೆ ಅವರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೇ ನೆಟ್ಟಿಗರು ಕೂಡ ಉಮೈರ್ ಸಂಧು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಾಲಿವುಡ್ನ ಹಲವಾರು ಸಿನಿಮಾಗಳಲ್ಲಿ ನಟಿಸಿ ಫಿರೋಜ್ ಖಾನ್ ಫೇಮಸ್ ಆಗಿದ್ದರು. ನಿರ್ಮಾಪಕನಾಗಿಯೂ ಅವರು ಸಕ್ರಿಯರಾಗಿದ್ದರು. ಅವರ ಪುತ್ರ ಫರ್ದೀನ್ ಖಾನ್ ಕೂಡ ಜನಪ್ರಿಯತೆ ಹೊಂದಿದ್ದಾರೆ. ‘ಈ ತಂದೆ ಮತ್ತು ಮಗನ ಜೊತೆ ಹಲವು ಬಾರಿ ಮಲಗಿದ ಏಕೈಕ ನಟಿ ಸೆಲಿನಾ ಜೆಟ್ಲಿ’ ಎಂದು ಉಮೈರ್ ಸಂಧು ಆರೋಪ ಮಾಡಿದ್ದಾನೆ. ಈ ಟ್ವೀಟ್ ವೈರಲ್ ಆಗಿದೆ.
2003ರಲ್ಲಿ ‘ಜಾನ್ಶೀನ್’ ಸಿನಿಮಾ ತೆರೆಕಂಡಿತ್ತು. ಸೆಲಿನಾ ಜೇಟ್ಲಿ ನಟಿಸಿದ ಮೊದಲ ಸಿನಿಮಾ ಅದು. ಆ ಚಿತ್ರಕ್ಕೆ ಫಿರೋಜ್ ಖಾನ್ ಬಂಡವಾಳ ಹೂಡಿದ್ದರು. ಅವರ ಪುತ್ರ ಫರ್ದೀನ್ ಖಾನ್ ಹೀರೋ ಆಗಿ ನಟಿಸಿದ್ದರು. ಆ ಬಳಿಕ ಸೆಲಿನಾ ಜೇಟ್ಲಿ ಅವರಿಗೆ ಬಾಲಿವುಡ್ನಲ್ಲಿ ಹಲವು ಅವಕಾಶಗಳು ಸಿಕ್ಕವು. ಇಷ್ಟು ವರ್ಷಗಳ ನಂತರ ಉಮೈರ್ ಸಂಧು ಅವರು ವಿನಾ ಕಾರಣವಾಗಿ ಸೆಲಿನಾ ಜೇಟ್ಲಿ ಮೇಲೆ ಆಪಾದನೆ ಹೊರಿಸಿದ್ದಾರೆ.
‘ಮಿಸ್ಟರ್ ಸಂಧು.. ಇದನ್ನು ಪೋಸ್ಟ್ ಮಾಡುವುದರಿಂದ ನಿನಗೆ ಗಂಡಸ್ತನ ಬಂದಿದೆ ಎನಿಸುತ್ತದೆ. ಅದರ ಬದಲು ನಿನ್ನ ನಪುಂಸಕತ್ವನ್ನು ಗುಣಪಡಿಸಿಕೊಳ್ಳಲು ಬೇರೆ ಮಾರ್ಗ ಇದೆ. ವೈದ್ಯರ ಬಳಿಗೆ ಹೋಗಬಹುದು. ಆ ಮಾರ್ಗ ಪ್ರಯತ್ನಿಸು’ ಎಂದು ಸೆಲಿನಾ ಜೇಟ್ಲಿ ಖಡಕ್ ಆಗಿ ತಿರುಗೇಟು ನೀಡಿದ್ದಾರೆ. ಅಲ್ಲದೇ, ಇಂಥ ಟ್ವೀಟ್ ಮಾಡಿದ ಉಮೈರ್ ಸಂಧು ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವಿಟರ್ ಸಂಸ್ಥೆಗೆ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Celina Jaitly: 3 ಮಕ್ಕಳ ತಾಯಿ ಸೆಲಿನಾ ಜೇಟ್ಲಿಗೆ ಹೊಸ ಮದುವೆ ಪ್ರಪೋಸಲ್; ‘ಗಂಡನನ್ನು ಕೇಳಿ ಹೇಳ್ತೀನಿ’ ಎಂದ ನಟಿ
ಸೆಲಿನಾ ಜೇಟ್ಲಿ ಅವರು ಈಗ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದಾರೆ. ಒಂದು ಕಾಲದಲ್ಲಿ ನಟಿಯಾಗಿ, ಮಾಡೆಲ್ ಆಗಿ ಬ್ಯುಸಿ ಆಗಿದ್ದ ಅವರು ಈಗ ಸಂಸಾರದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಮೂವರು ಗಂಡು ಮಕ್ಕಳ ಆರೈಕೆಯಲ್ಲಿ ಅವರು ತೊಡಗಿಕೊಂಡಿದ್ದಾರೆ. ನಟನೆಯಿಂದ ಅಂತರ ಕಾಯ್ದುಕೊಂಡಿದ್ದರೂ ಕೂಡ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಅವರು ಸೋಶಿಯಲ್ ಮೀಡಿಯಾ ಬಳಸುತ್ತಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.