ಹಿಂದಿ ಕಿರುತೆರೆಯಲ್ಲಿ ಫೇಮಸ್ ಆಗಿರುವ ನಟಿ ಉರ್ಫಿ ಜಾವೇದ್ (Urfi Javed) ಅವರು ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ತಮ್ಮ ಚಿತ್ರ-ವಿಚಿತ್ರ ಡ್ರೆಸ್ನಿಂದಾಗಿ ಗಮನ ಸೆಳೆಯುವ ಅವರು ಇತ್ತೀಚೆಗೆ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡರು. ಅವರ ಕೈಯಲ್ಲಿ ಭಗವದ್ಗೀತೆ (Bhagavad Gita) ಇತ್ತು. ಧರಿಸಿದ್ದ ಟಿ-ಶರ್ಟ್ ಮೇಲೆ ‘ನಾನು ಜಾವೇದ್ ಅಖ್ತರ್ ಮೊಮ್ಮಗಳಲ್ಲ’ (Not Javed Akhtar’s Granddaughter) ಎಂದು ಬರೆಯಲಾಗಿತ್ತು. ಈ ಎರಡು ವಿಚಾರಗಳ ಹಿಂದೆಯೂ ಒಂದೊಂದು ಕಹಾನಿ ಇದೆ. ‘ಬಿಗ್ ಬಾಸ್ ಒಟಿಟಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಉರ್ಫಿ ಜಾವೇದ್ ಅವರ ಖ್ಯಾತಿ ಹೆಚ್ಚಿದೆ. ಅದೇ ರೀತಿ ಅವರು ಟೀಕೆಗೂ ಒಳಗಾಗುತ್ತಾ ಇರುತ್ತಾರೆ.
ತುಂಬ ಗ್ಲಾಮರಸ್ ಆದ ಬಟ್ಟೆಗಳನ್ನು ಉರ್ಫಿ ಜಾವೇದ್ ಧರಿಸುತ್ತಾರೆ. ಅದರಿಂದ ಒಂದು ವರ್ಗದ ನೆಟ್ಟಿಗರಿಗೆ ಅಸಮಾಧಾನ ಇದೆ. ಉರ್ಫಿ ಏನೇ ಕಿರಿಕ್ ಮಾಡಿಕೊಂಡರೂ ಕೂಡ ‘ಜಾವೇದ್ ಅಖ್ತರ್ ಮೊಮ್ಮಗಳಿಗೆ ಸ್ವಲ್ಪ ಬುದ್ಧಿ ಹೇಳಿ’ ಎಂದು ಜನರು ಕಮೆಂಟ್ ಮಾಡುತ್ತಾರೆ. ಚಿತ್ರಸಾಹಿತಿ ಜಾವೇದ್ ಅಖ್ತರ್ ಅವರಿಗೂ ಉರ್ಫಿ ಜಾವೇದ್ ಅವರಿಗೂ ಯಾವುದೇ ಸಂಬಂಧ ಇಲ್ಲ. ಇಬ್ಬರ ಹೆಸರಿನಲ್ಲೂ ‘ಜಾವೇದ್’ ಇದೆ ಅಷ್ಟೇ. ಆ ಕಾರಣಕ್ಕಾಗಿ ಉರ್ಫಿಯನ್ನು ಜಾವೇದ್ ಅಖ್ತರ್ ಅವರ ಮೊಮ್ಮಗಳು ಎಂದು ಅನೇಕರು ಭಾವಿಸಿದ್ದಾರೆ.
‘ನಾನು ಜಾವೇದ್ ಅಖ್ತರ್ ಮೊಮ್ಮಗಳಲ್ಲ’ ಎಂದು ಹೇಳಿ ಹೇಳಿ ಉರ್ಫಿಗೆ ಸಾಕಾಗಿ ಹೋಗಿದೆ. ಹಾಗಾಗಿ ಊರಿಗೆಲ್ಲ ತಿಳಿಯಲಿ ಎಂಬ ಕಾರಣಕ್ಕೆ ತಾವು ಧರಿಸಿದ ಟಿ-ಶರ್ಟ್ ಮೇಲೆ ‘ನಾನು ಜಾವೇದ್ ಅಖ್ತರ್ ಮೊಮ್ಮಗಳಲ್ಲ’ ಎಂದು ಪ್ರಿಂಟ್ ಹಾಕಿಸಿಕೊಂಡು ಬಂದು ಅವರು ಪೋಸ್ ನೀಡಿದ್ದಾರೆ. ಈ ವೇಳೆ ಅವರು ಹಿಡಿದುಕೊಂಡಿದ್ದ ಭಗವದ್ಗೀತೆ ಎಲ್ಲರ ಗಮನ ಸೆಳೆದಿದೆ.
ತಾವು ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದರೂ ಕೂಡ ಆ ಧರ್ಮದಲ್ಲಿ ತಮಗೆ ನಂಬಿಕೆ ಉಳಿದಿಲ್ಲ ಎಂದು ಕೆಲವೇ ದಿನಗಳ ಹಿಂದೆ ಉರ್ಫಿ ಜಾವೇದ್ ಹೇಳಿಕೆ ನೀಡಿದ್ದರು. ಅಲ್ಲದೇ ತಾವು ಭಗವದ್ಗೀತೆ ಓದುತ್ತಿರುವುದಾಗಿಯೂ ಅವರು ಹೇಳಿದ್ದರು. ಅದರಂತೆಯೇ ಅವರೀಗ ಭಗವದ್ಗೀತೆ ಹಿಡಿದು ಓಡಾಡುತ್ತಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ವಿಚಿತ್ರವಾಗಿ ವಿನ್ಯಾಸಗೊಂಡ ಬಟ್ಟೆಗಳನ್ನು ಉರ್ಫಿ ಜಾವೇದ್ ಧರಿಸುತ್ತಾರೆ. ಅವರ ಅನೇಕ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ‘ಬಿಗ್ ಬಾಸ್ ಒಟಿಟಿ’ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದಾಗ ಅವರು ಕಸದ ಚೀಲದಿಂದಲೇ ಕಾಸ್ಟ್ಯೂಮ್ ತಯಾರಿಸಿಕೊಂಡು ಗಮನ ಸೆಳೆದಿದ್ದರು.
ಇದನ್ನೂ ಓದಿ:
‘ಮುಸ್ಲಿಂ ಹುಡುಗನನ್ನು ಮದುವೆ ಆಗಲ್ಲ’: ಬಲವಾದ ಕಾರಣ ನೀಡಿದ ಮುಸ್ಲಿಂ ನಟಿ ಉರ್ಫಿ ಜಾವೇದ್
ಎಷ್ಟೇ ಟ್ರೋಲ್ ಮಾಡಿದ್ರೂ ಜಗ್ಗಲ್ಲ ಈ ಯುವತಿ; ಇಷ್ಟೊಂದು ನೆಗೆಟಿವ್ ಕಮೆಂಟ್ ಬರಲು ಕಾರಣ ಏನು?
Published On - 7:52 am, Wed, 12 January 22