ನಟ ರಣದೀಪ್ ಹೂಡ (Randeep Hooda) ಅವರು ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾಗೆ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದರ ಜೊತೆ ಸಾವರ್ಕರ್ ಪಾತ್ರಕ್ಕೆ ಅವರೇ ಬಣ್ಣ ಹಚ್ಚುತ್ತಿದ್ದಾರೆ. ಇತ್ತೀಚೆಗೆ ಸಾವರ್ಕರ್ ಅವರ 140ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಈ ವೇಳೆ ಹೊಸ ಪೋಸ್ಟರ್ ಬಿಡುಗಡೆ ಮಾಡಿರುವ ರಣದೀಪ್ ಹೂಡ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಇದನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ.
ವೀರಸಾವರ್ಕರ್ ಲುಕ್ನ ಫೋಟೋ ಪೋಸ್ಟ್ ಮಾಡಿರುವ ರಣದೀಪ್ ಹೂಡ ಅವರು, ‘ಬ್ರಿಟಿಷರ ಸಾಲಿನಲ್ಲಿರೋ ಮೋಸ್ಟ್ ವಾಂಟೆಂಡ್ ಭಾರತೀಯ. ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಖುದಿರಾಮ್ ಬೋಸ್ ಅವರಂತಹ ಕ್ರಾಂತಿಕಾರಿಗಳ ಹಿಂದಿನ ಸ್ಫೂರ್ತಿ. ವೀರ ಸಾವರ್ಕರ್ ಯಾರು? ಅವರ ನಿಜವಾದ ಕಥೆಯನ್ನು ನೋಡಿ’ ಎಂದು ಅಡಿಬರಹ ನೀಡಿದ್ದರು.
The most wanted Indian by the British. The inspiration behind revolutionaries like – Netaji Subhash Chandra Bose, Bhagat Singh & Khudiram Bose.
Who was #VeerSavarkar? Watch his true story unfold!Presenting @RandeepHooda in & as #SwantantryaVeerSavarkar In Cinemas 2023… pic.twitter.com/u0AaoQIbWt
— Randeep Hooda (@RandeepHooda) May 28, 2023
ಈ ಪೋಸ್ಟರ್ನಲ್ಲಿರುವ ತಪ್ಪನ್ನು ನಟಿ ಸ್ವಸ್ತಿಕಾ ಮುಖರ್ಜಿ ಅವರು ಎತ್ತು ತೋರಿಸಿದ್ದಾರೆ. ‘ಖುದಿರಾಮ್ ಬೋಸ್ 18ನೇ ವಯಸ್ಸಿನಲ್ಲಿ ನಿಧನರಾದರು. ನೇತಾಜಿ ಅವರು ಯಾರಿಂದಲೂ ಪ್ರೇರಿತರಾಗಿ ನೇತಾಜಿಯಾದರೇ? ಭಗತ್ ಸಿಂಗ್ ಇತಿಹಾಸ ನಮಗೆಲ್ಲರಿಗೂ ಈಗಾಗಲೇ ತಿಳಿದಿದೆ. ಈ ಸ್ಫೂರ್ತಿದಾಯಕ ಕಥೆಗಳು ಭೂಮಿಯ ಮೇಲೆ ಎಲ್ಲಿಂದ ಹೊರಹೊಮ್ಮುತ್ತಿವೆ?’ ಎಂದು ಸ್ವಸ್ತಿಕಾ ಪ್ರಶ್ನೆ ಮಾಡಿದ್ದಾರೆ.
‘ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಅಥವಾ ನಮ್ಮ ದೇಶಕ್ಕಾಗಿ ಹೋರಾಡಿದವರನ್ನು ಅವಮಾನಿಸಲು ಯಾರೂ ಬಯಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನನಗೆ ಖಂಡಿತವಾಗಿಯೂ ಅಂತಹ ಉದ್ದೇಶವಿಲ್ಲ. ಆದರೆ ಸಿನಿಮಾಗಾಗಿ ಈ ರೀತಿ ಮಾಡೋದು ಸರಿಯಲ್ಲ’ ಎಂದಿದ್ದಾರೆ ಅವರು.
Khudiram Bose died at the age of 18. Someone inspired him even before that to join the freedom movement?
And Netaji became Netaji because he was inspired by someone ? And Bhagat Singh’s history we all know already. From where on earth are these inspiring stories popping up ?— Swastika Mukherjee (@swastika24) May 29, 2023
ಇದನ್ನೂ ಓದಿ: ರಾಮ್ ಚರಣ್ ನಿರ್ಮಾಣದ ಚಿತ್ರಕ್ಕೆ ಸಂಕಷ್ಟ; ಬರ್ತಿದೆ ಎರಡೆರಡು ವೀರ ಸಾವರ್ಕರ್ ಸಿನಿಮಾ
‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇದೆ. ಮೊದಲ ನಿರ್ದೇಶನದಲ್ಲಿ ಬಯೋಪಿಕ್ ಮಾಡುವ ಚಾಲೆಂಜ್ನ ರಣದೀಪ್ ಹೂಡ ತೆಗೆದುಕೊಂಡಿದ್ದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಇದರ ಜೊತೆಗೆ ರಾಮ ಚರಣ್ ಕೂಡ ವೀರ ಸಾವರ್ಕರ್ ಕುರಿತು ಸಿನಿಮಾ ನಿರ್ಮಾಣ ಮಾಡುತ್ತಿದ್ದು, ‘ದಿ ಇಂಡಿಯಾ ಹೌಸ್’ ಶೀರ್ಷಿಕೆ ನೀಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ