AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Satyaprem Ki Katha: 4 ಭಿನ್ನ ರೀತಿಯಲ್ಲಿ ಮದುವೆ; ಇದಕ್ಕೆ ಖರ್ಚಾಗಿದ್ದು 7 ಕೋಟಿ ರೂಪಾಯಿ: ನಟ ಕಾರ್ತಿಕ್​ ಆರ್ಯನ್​ ಬಗ್ಗೆ ಅಚ್ಚರಿಯ ಸುದ್ದಿ

Kartik Aaryan: ಕಾರ್ತಿಕ್​ ಆರ್ಯನ್​ ಅವರು ‘ಭೂಲ್​ ಬುಲಯ್ಯ 2’ ಸಿನಿಮಾದ ಯಶಸ್ಸಿನಿಂದ ಬಾರಿ ಜನಪ್ರಿಯತೆ ಪಡೆದರು. ಈಗ ಅವರ ಮುಂಬರುವ ಸಿನಿಮಾಗಳ ಬಗ್ಗೆ ಅಭಿಮಾನಿಗಳಲ್ಲಿ ಹೈಪ್​ ಸೃಷ್ಟಿ ಆಗಿದೆ.

Satyaprem Ki Katha: 4 ಭಿನ್ನ ರೀತಿಯಲ್ಲಿ ಮದುವೆ; ಇದಕ್ಕೆ ಖರ್ಚಾಗಿದ್ದು 7 ಕೋಟಿ ರೂಪಾಯಿ: ನಟ ಕಾರ್ತಿಕ್​ ಆರ್ಯನ್​ ಬಗ್ಗೆ ಅಚ್ಚರಿಯ ಸುದ್ದಿ
ಕಿಯಾರಾ ಅಡ್ವಾಣಿ, ಕಾರ್ತಿಕ್​ ಆರ್ಯನ್​
ಮದನ್​ ಕುಮಾರ್​
|

Updated on: May 30, 2023 | 3:10 PM

Share

ನಟ ಕಾರ್ತಿಕ್​ ಆರ್ಯನ್ (Kartik Aaryan)​ ಅವರು ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಅವರಿಗೆ ಹಲವು ಅವಕಾಶಗಳು ಹರಿದು ಬರುತ್ತಿವೆ. ಸದ್ಯ ಅವರು ‘ಸತ್ಯಪ್ರೇಮ್​ ಕಿ ಕಥಾ’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ (Kiara Advani) ಕಾಣಿಸಿಕೊಳ್ಳಲಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಶೂಟಿಂಗ್​ ಮುಕ್ತಾಯ ಆಯಿತು. ಅದರ ಬೆನ್ನಲ್ಲೇ ಒಂದು ವಿಶೇಷ ಸುದ್ದಿ ಕೇಳಿಬಂದಿದೆ. ಅದು ಮದುವೆಗೆ ಸಂಬಂಧಿಸಿದ ಸುದ್ದಿ. ಹಾಗಂತ ರಿಯಲ್​ ವಿವಾಹ ಅಲ್ಲ. ಇದು ಕೇವಲ ರೀಲ್​ ಸಮಾಚಾರ. ‘ಸತ್ಯಪ್ರೇಮ್​ ಕಿ ಕಥಾ’ (Satyaprem Ki Katha) ಸಿನಿಮಾದಲ್ಲಿ ಬರುವ ಒಂದು ಮದುವೆ ಸನ್ನಿವೇಶಕ್ಕಾಗಿ ಬರೋಬ್ಬರಿ 7 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ. ಗುಜರಾತಿ, ದಕ್ಷಿಣ ಭಾರತ, ಮುಸ್ಲಿಂ ಹಾಗೂ ಕ್ರಿಶ್ಚಿಯನ್​ ಶೈಲಿಯಲ್ಲಿ ನಡೆಯುವ ಮದುವೆ ದೃಶ್ಯವನ್ನು ಬಹಳ ಅದ್ದೂರಿಯಾಗಿ ಚಿತ್ರೀಕರಿಸಲಾಗಿದೆ.

ಕಾರ್ತಿಕ್​ ಆರ್ಯನ್​ ಅವರು ‘ಭೂಲ್​ ಬುಲಯ್ಯ 2’ ಸಿನಿಮಾದ ಯಶಸ್ಸಿನಿಂದ ಬಾರಿ ಜನಪ್ರಿಯತೆ ಪಡೆದರು. ಈಗ ಅವರ ಮುಂಬರುವ ಸಿನಿಮಾಗಳ ಬಗ್ಗೆ ಅಭಿಮಾನಿಗಳಲ್ಲಿ ಹೈಪ್​ ಸೃಷ್ಟಿ ಆಗಿದೆ. ಹಾಗಾಗಿ ಹೆಚ್ಚು ಹಣವನ್ನು ವಿನಿಯೋಗಿಸಲು ನಿರ್ಮಾಪಕರು ಮುಂದೆಬರುತ್ತಿದ್ದಾರೆ. ‘ಸತ್ಯಪ್ರೇಮ್​ ಕಿ ಕಥಾ’ ಚಿತ್ರಕ್ಕೆ ಸಾಜಿದ್​ ನಾಡಿಯದ್ವಾಲಾ ಅವರು ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್​ ಅವರ ಇಂಟ್ರಡಕ್ಷನ್​ ಗೀತೆಯಲ್ಲಿ ಮದುವೆ ಸನ್ನಿವೇಶ ಬರಲಿದೆ. ಅದನ್ನು ತುಂಬ ಗ್ರ್ಯಾಂಡ್​ ಆಗಿ ಚಿತ್ರೀಕರಿಸಲಾಗಿದೆ. ಹಾಗಾಗಿ ಅದಕ್ಕೆ 7 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: 175 ಕೋಟಿ ರೂ. ಗಳಿಕೆ​ ಮಾಡಿದ್ರೂ ಕಿಂಚಿತ್ತೂ ಗರ್ವ ಇಲ್ಲದೆ ಬೀದಿ ಮಕ್ಕಳ ಜತೆ ಮಾತಾಡಿದ ಕಾರ್ತಿಕ್​ ಆರ್ಯನ್​

ಈ ಮದುವೆಗಾಗಿ ಅದ್ದೂರಿ ಸೆಟ್​ಗಳನ್ನು ನಿರ್ಮಿಸಲಾಗಿತ್ತು. ಸಿನಿಮಾದಲ್ಲಿ ಬರುವ ಮೊದಲ ಸಾಂಗ್​ ಇದಾದ್ದರಿಂದ ಬಹಳ ಕಾಳಜಿ ವಹಿಸಿ ಕೆಲಸ ಮಾಡಲಾಗಿದೆ. ನೃತ್ಯ ನಿರ್ದೇಶಕ ಬಾಸ್ಕೋ ಮಾರ್ಟಿಸ್​ ಅವರು ಇದಕ್ಕೆ ಕೊರಿಯೋಗ್ರಫಿ ಮಾಡಿದ್ದಾರೆ. ದೊಡ್ಡ ಪರದೆಯಲ್ಲಿ ಈ ಹಾಡನ್ನು ನೋಡಲು ಕಾರ್ತಿಕ್​ ಆರ್ಯನ್​ ಫ್ಯಾನ್ಸ್​ ಕಾಯುತ್ತಿದ್ದಾರೆ.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಕಾರ್ತಿಕ್​ ಆರ್ಯನ್​ಗೆ​ ದುಂಬಾಲುಬಿದ್ದ ಲೇಡಿ ಫ್ಯಾನ್ಸ್​; ವೈರಲ್​ ಆಯ್ತು ವಿಡಿಯೋ

ಬಣ್ಣದ ಲೋಕದಲ್ಲಿ ಸೆಲೆಬ್ರಿಟಿಗಳ ಪ್ರೇಮ್​ ಕಹಾನಿಗಳಿಗೆ ಕೊರತೆ ಇಲ್ಲ. ಅದೇ ರೀತಿ ಬ್ರೇಕಪ್​ಗಳಿಗೂ ಬರಗಾಲ ಇಲ್ಲ. ಬಾಲಿವುಡ್​ ಮಂದಿಗೆ ಆಗಾಗ ಲವ್​ ಆಗುತ್ತದೆ. ಅಷ್ಟೇ ಬೇಗ ಬ್ರೇಕಪ್​ ಕೂಡ ಆಗುತ್ತದೆ. ನಟ ಕಾರ್ತಿಕ್​​ ಆರ್ಯನ್​ ಮತ್ತು ನಟಿ ಸಾರಾ ಆಲಿ ಖಾನ್ ಅವರ ನಡುವೆಯೂ ಅಂಥ ಅಲ್ಪಾವಧಿ ಪ್ರೀತಿ ಸಿಗುರಿತ್ತು. ‘ಲವ್​ ಆಜ್​ ಕಲ್​ 2’ ಸಿನಿಮಾದಲ್ಲಿ ಅವರಿಬ್ಬರು ಜೋಡಿಯಾಗಿ ನಟಿಸಿದ್ದರು. ಆಗ ಇಬ್ಬರ ನಡುವೆ ಆಪ್ತತೆ ಬೆಳೆದಿತ್ತು. ಆದರೆ ತಮ್ಮಿಬ್ಬರ ಸಂಬಂಧದ ಬಗ್ಗೆ ಈ ಜೋಡಿ ಸಾರ್ವಜನಿಕವಾಗಿ ಏನನ್ನೂ ಹೇಳಿಕೊಂಡಿರಲಿಲ್ಲ. ಹಾಗಂತ ಗಾಸಿಪ್​ ಮಂದಿ ಸುಮ್ಮನೆ ಇರುತ್ತಾರಾ? ಖಂಡಿತಾ ಇಲ್ಲ. ಸಾರಾ ಅಲಿ ಖಾನ್​ ಮತ್ತು ಕಾರ್ತಿಕ್​ ಆರ್ಯನ್​ ಪರಸ್ಪರ ಪ್ರೀತಿಯಲ್ಲಿ ಮುಳುಗಿದ್ದಾರೆ ಎಂಬ ಮಾತು ಎಲ್ಲೆಡೆ ಹಬ್ಬಿತ್ತು. ಆದರೆ ನಂತರದ ದಿನಗಳಲ್ಲಿ ಈ ಜೋಡಿ ಹಕ್ಕಿಗಳು ದೂರಾದವು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್