ಸಾವರ್ಕರ್ ಹೊಗಳುವ ಭರದಲ್ಲಿ ಎಡವಟ್ಟು ಮಾಡಿಕೊಂಡ ನಟ ರಣದೀಪ್ ಹೂಡ

ಬ್ರಿಟಿಷರ ಸಾಲಿನಲ್ಲಿರೋ ಮೋಸ್ಟ್​ ವಾಂಟೆಂಡ್ ಭಾರತೀಯ. ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಖುದಿರಾಮ್ ಬೋಸ್​ ಅವರಂತಹ ಕ್ರಾಂತಿಕಾರಿಗಳ ಹಿಂದಿನ ಸ್ಫೂರ್ತಿ ಎಂದಿದ್ದರು ದೀಪಕ್ ಹೂಡ.

ಸಾವರ್ಕರ್ ಹೊಗಳುವ ಭರದಲ್ಲಿ ಎಡವಟ್ಟು ಮಾಡಿಕೊಂಡ ನಟ ರಣದೀಪ್ ಹೂಡ
ಸ್ವಸ್ತಿಕಾ-ಸಾವರ್ಕರ್ ಸಿನಿಮಾ ಪೋಸ್ಟರ್
Follow us
ರಾಜೇಶ್ ದುಗ್ಗುಮನೆ
|

Updated on: May 30, 2023 | 11:52 AM

ನಟ ರಣದೀಪ್ ಹೂಡ (Randeep Hooda) ಅವರು ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾಗೆ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದರ ಜೊತೆ ಸಾವರ್ಕರ್ ಪಾತ್ರಕ್ಕೆ ಅವರೇ ಬಣ್ಣ ಹಚ್ಚುತ್ತಿದ್ದಾರೆ. ಇತ್ತೀಚೆಗೆ ಸಾವರ್ಕರ್ ಅವರ 140ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಈ ವೇಳೆ ಹೊಸ ಪೋಸ್ಟರ್ ಬಿಡುಗಡೆ ಮಾಡಿರುವ ರಣದೀಪ್ ಹೂಡ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಇದನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ.

ವೀರಸಾವರ್ಕರ್​ ಲುಕ್​ನ ಫೋಟೋ ಪೋಸ್ಟ್ ಮಾಡಿರುವ ರಣದೀಪ್ ಹೂಡ ಅವರು,  ‘ಬ್ರಿಟಿಷರ ಸಾಲಿನಲ್ಲಿರೋ ಮೋಸ್ಟ್​ ವಾಂಟೆಂಡ್ ಭಾರತೀಯ. ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಖುದಿರಾಮ್ ಬೋಸ್​ ಅವರಂತಹ ಕ್ರಾಂತಿಕಾರಿಗಳ ಹಿಂದಿನ ಸ್ಫೂರ್ತಿ. ವೀರ ಸಾವರ್ಕರ್ ಯಾರು? ಅವರ ನಿಜವಾದ ಕಥೆಯನ್ನು ನೋಡಿ’ ಎಂದು ಅಡಿಬರಹ ನೀಡಿದ್ದರು.

ವಿರೋಧ ಏಕೆ?

ಈ ಪೋಸ್ಟರ್​ನಲ್ಲಿರುವ ತಪ್ಪನ್ನು ನಟಿ ಸ್ವಸ್ತಿಕಾ ಮುಖರ್ಜಿ ಅವರು ಎತ್ತು ತೋರಿಸಿದ್ದಾರೆ. ‘ಖುದಿರಾಮ್ ಬೋಸ್ 18ನೇ ವಯಸ್ಸಿನಲ್ಲಿ ನಿಧನರಾದರು. ನೇತಾಜಿ ಅವರು ಯಾರಿಂದಲೂ ಪ್ರೇರಿತರಾಗಿ ನೇತಾಜಿಯಾದರೇ? ಭಗತ್ ಸಿಂಗ್ ಇತಿಹಾಸ ನಮಗೆಲ್ಲರಿಗೂ ಈಗಾಗಲೇ ತಿಳಿದಿದೆ. ಈ ಸ್ಫೂರ್ತಿದಾಯಕ ಕಥೆಗಳು ಭೂಮಿಯ ಮೇಲೆ ಎಲ್ಲಿಂದ ಹೊರಹೊಮ್ಮುತ್ತಿವೆ?’ ಎಂದು ಸ್ವಸ್ತಿಕಾ ಪ್ರಶ್ನೆ ಮಾಡಿದ್ದಾರೆ.

‘ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಅಥವಾ ನಮ್ಮ ದೇಶಕ್ಕಾಗಿ ಹೋರಾಡಿದವರನ್ನು ಅವಮಾನಿಸಲು ಯಾರೂ ಬಯಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನನಗೆ ಖಂಡಿತವಾಗಿಯೂ ಅಂತಹ ಉದ್ದೇಶವಿಲ್ಲ. ಆದರೆ ಸಿನಿಮಾಗಾಗಿ ಈ ರೀತಿ ಮಾಡೋದು ಸರಿಯಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ರಾಮ್ ಚರಣ್ ನಿರ್ಮಾಣದ ಚಿತ್ರಕ್ಕೆ ಸಂಕಷ್ಟ; ಬರ್ತಿದೆ ಎರಡೆರಡು ವೀರ ಸಾವರ್ಕರ್ ಸಿನಿಮಾ

‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇದೆ. ಮೊದಲ ನಿರ್ದೇಶನದಲ್ಲಿ  ಬಯೋಪಿಕ್ ಮಾಡುವ ಚಾಲೆಂಜ್​ನ ರಣದೀಪ್ ಹೂಡ ತೆಗೆದುಕೊಂಡಿದ್ದು ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಇದರ ಜೊತೆಗೆ ರಾಮ ಚರಣ್ ಕೂಡ ವೀರ ಸಾವರ್ಕರ್ ಕುರಿತು ಸಿನಿಮಾ ನಿರ್ಮಾಣ ಮಾಡುತ್ತಿದ್ದು, ‘ದಿ ಇಂಡಿಯಾ ಹೌಸ್’ ಶೀರ್ಷಿಕೆ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್