ಬಣ್ಣದ ಲೋಕದಲ್ಲಿ ನಟ-ನಟಿಯರ ಬಗ್ಗೆ ಗಾಸಿಪ್ ಹಬ್ಬುವುದು ಹೊಸದೇನೂ ಅಲ್ಲ. ಆದರೆ ಇಂಥ ಗಾಸಿಪ್ಗಳಿಂದಾಗಿ ಕೆಲವೊಮ್ಮೆ ಅವರ ಕುಟುಂಬದವರಿಗೆ ಚಿಂತೆ ಆಗುತ್ತದೆ. ಚಿತ್ರರಂಗದಲ್ಲಿ ಮಕ್ಕಳ ಇಮೇಜ್ಗೆ ಧಕ್ಕೆ ಆಗುತ್ತದೆ ಎಂದು ಕಲಾವಿದರ ಪೋಷಕರು ತಲೆ ಕೆಡಿಸಿಕೊಳ್ಳುತ್ತಾರೆ. ಆದರೆ ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರ ತಂದೆ-ತಾಯಿ ಈ ಸಮಸ್ಯೆಯನ್ನು ಸ್ವಲ್ಪ ಡಿಫರೆಂಟ್ ಆಗಿ ಹ್ಯಾಂಡಲ್ ಮಾಡಿದ್ದಾರೆ. ಮಗನ ಬಗ್ಗೆ ಕೇಳಿಬಂದ ದೊಡ್ಡ ಗಾಸಿಪ್ಗೆ ಅವರು ತಮಾಷೆಯಿಂದಲೇ ಪ್ರತಿಕ್ರಿಯಿಸಿದ್ದಾರೆ. ನಟಿ ಕತ್ರಿನಾ ಕೈಫ್ ಜೊತೆ ವಿಕ್ಕಿ ಕೌಶಲ್ ಎಂಗೇಜ್ಮೆಂಟ್ ಮಾಡಿಕೊಂಡರು ಎಂಬ ಗಾಸಿಪ್ ಇತ್ತೀಚೆಗೆ ಬಲವಾಗಿ ಕೇಳಿಬಂದಿತ್ತು.
2019ರಿಂದ ಈಚೆಗೆ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಳಿಸುದ್ದಿ ಕೇಳಿಬರುತ್ತಿದೆ. ಈ ಬಗ್ಗೆ ಅವರಿಬ್ಬರು ಯಾವುದೇ ಬಹಿರಂಗ ಹೇಳಿಕೆಗಳನ್ನು ನೀಡಿಲ್ಲ. ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎಂಬುದು ಗಾಸಿಪ್ ಮಂದಿಯ ವಾದ. ಎಂಗೇಜ್ಮೆಂಟ್ ಮಾಡಿಕೊಳ್ಳುವ ಮಟ್ಟಕ್ಕೆ ಅವರ ಪ್ರೇಮ್ ಕಹಾನಿ ಮುಂದುವರಿದಿದೆ ಎಂಬ ಗಾಸಿಪ್ ಇತ್ತೀಚೆಗೆ ಹಬ್ಬಿತ್ತು. ಅದು ವಿಕ್ಕಿ ಕೌಶಲ್ ಮನೆಯವರ ಕಿವಿಗೆ ಬಿದ್ದಾಗ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಅವರ ಸಹೋದರ ಸನ್ನಿ ಕೌಶಲ್ ವಿವರಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸನ್ನಿ ಕೌಶಲ್ ಈ ವಿಚಾರ ಬಾಯಿಬಿಟ್ಟಿದ್ದಾರೆ. ‘ಅಂದು ವಿಕ್ಕಿ ಜಿಮ್ಗೆ ಹೋಗಿದ್ದ. ಆತ ಮನೆಗೆ ಬರುವುದರೊಳಗೆ ಕತ್ರಿನಾ ಕೈಫ್ ಜೊತೆಗಿನ ಎಂಗೇಜ್ಮೆಂಟ್ ವದಂತಿ ಅಪ್ಪ-ಅಮ್ಮನ ಕಿವಿಗೆ ಬಿದ್ದಿತ್ತು. ಅವನು ಜಿಮ್ ಮುಗಿಸಿ ಬಂದ ತಕ್ಷಣ ಅವರು ಆ ಬಗ್ಗೆ ವಿಚಾರಿಸಿದರು. ನಿಶ್ಚಿತಾರ್ಥ ಮಾಡಿಕೊಂಡಿದ್ದೀಯಂತೆ, ನಮಗೆಲ್ಲ ಸ್ವೀಟ್ ಕೊಡಪ್ಪ ಅಂತ ಕೇಳಿದರು’ ಎಂದು ಆ ಘಟನೆಯನ್ನು ಹೇಳಿಕೊಂಡು ನಕ್ಕಿದ್ದಾರೆ ವಿಕ್ಕಿ ಕೌಶಲ್ ತಮ್ಮ ಸನ್ನಿ ಕೌಶಲ್.
ತಮ್ಮ ಎಂಗೇಜ್ಮೆಂಟ್ ವದಂತಿಯನ್ನು ಮನೆಯವರು ಹಗುರವಾಗಿ ಪರಿಗಣಿಸಿದ್ದಕ್ಕೆ ವಿಕ್ಕಿಗೂ ಸಮಾಧಾನ ಆಗಿರಬೇಕು. ಅವರು ಕೂಡ ಅಷ್ಟೇ ತಮಾಷೆಯಾಗಿ ಉತ್ತರ ನೀಡಿದರಂತೆ. ‘ಇದು ಕಾಲ್ಪನಿಕ ನಿಶ್ಚಿತಾರ್ಥ ಆದ್ದರಿಂದ ನಿಮಗೂ ಕಾಲ್ಪನಿಕ ಸ್ವೀಟ್ ನೀಡುತ್ತೇನೆ’ ಅಂತ ವಿಕ್ಕಿ ಉತ್ತರಿಸಿದ್ದರು ಎಂದು ಸನ್ನಿ ವಿವರಿಸಿದ್ದಾರೆ. ಗಾಸಿಪ್ ಅದೇನೇ ಇರಲಿ ವಿಕ್ಕಿ-ಕತ್ರಿನಾ ಜೋಡಿಯನ್ನು ಅವರ ಅಭಿಮಾನಿಗಳು ಸಖತ್ ಇಷ್ಟಪಡುತ್ತಿದ್ದಾರೆ. ಆದಷ್ಟು ಬೇಗ ಅವರಿಬ್ಬರು ಮದುವೆ ಆಗಲಿ ಎಂದು ಹಾರೈಸುತ್ತಿದ್ದಾರೆ.
ಈ ಮೊದಲು ರಣಬೀರ್ ಕಪೂರ್ ಜೊತೆ ಕತ್ರಿನಾ ಕೈಫ್ ಡೇಟಿಂಗ್ ಮಾಡುತ್ತಿದ್ದರು. ಸಲ್ಮಾನ್ ಖಾನ್ ಜೊತೆಗೂ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಸದ್ಯ ಸಲ್ಲು ಜೊತೆ ಅವರು ‘ಟೈಗರ್ 3’ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಇತ್ತ, ವಿಕ್ಕಿ ಕೌಶಲ್ ಕೂಡ ಹಲವು ಆಫರ್ಗಳನ್ನು ತಮ್ಮ ಕೈಯಲ್ಲಿ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ:
ಮಾಡೆಲಿಂಗ್ ಮಾಡುತ್ತಿದ್ದ ದಿನಗಳಲ್ಲಿ ದೀಪಿಕಾ ಹಾಗೂ ಕತ್ರಿನಾ ಹೇಗಿದ್ದರು? ಅಪರೂಪದ ಚಿತ್ರ ನೋಡಿ
ವಿಕ್ಕಿ ಕೌಶಲ್- ಕತ್ರಿನಾ ಸಂಬಂಧದ ಬಗ್ಗೆ ಬಾಯ್ಬಿಟ್ಟ ಕಪೂರ್ ಕುಟುಂಬದ ಕುಡಿ; ಶೀಘ್ರವೇ ಮದುವೆ?