Vicky Kaushal: ‘ಆ ವಿಚಾರ ಮಾತಾಡೋದ್ರಲ್ಲಿ ಅರ್ಥವೇ ಇಲ್ಲ’: ಸಲ್ಮಾನ್​ ಖಾನ್​ ಬಾಡಿ ಗಾರ್ಡ್​ ವರ್ತನೆ ಬಗ್ಗೆ ವಿಕ್ಕಿ ಕೌಶಲ್​ ಪ್ರತಿಕ್ರಿಯೆ

Salman Khan Viral Video: ವಿಕ್ಕಿ ಕೌಶಲ್​ ಅವರನ್ನು ಸಲ್ಮಾನ್​ ಖಾನ್​ ನಿರ್ಲಕ್ಷ್ಯ ಮಾಡಿದರು ಎಂಬುದು ಅನೇಕರ ವಾದ. ಸಲ್ಲು ಅವರ ಈ ವರ್ತನೆಯಿಂದ ವಿಕ್ಕಿ ಕೌಶಲ್​ರ ಅಭಿಮಾನಿಗಳಿಗೆ ಬೇಸರ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಬಗೆಬಗೆಯ ಚರ್ಚೆ ಮಾಡಲಾಗುತ್ತಿದೆ.

Vicky Kaushal: ‘ಆ ವಿಚಾರ ಮಾತಾಡೋದ್ರಲ್ಲಿ ಅರ್ಥವೇ ಇಲ್ಲ’: ಸಲ್ಮಾನ್​ ಖಾನ್​ ಬಾಡಿ ಗಾರ್ಡ್​ ವರ್ತನೆ ಬಗ್ಗೆ ವಿಕ್ಕಿ ಕೌಶಲ್​ ಪ್ರತಿಕ್ರಿಯೆ
ವಿಕ್ಕಿ ಕೌಶಲ್​

Updated on: May 27, 2023 | 10:20 PM

ಅಬುಧಾಬಿಯಲ್ಲಿ ಐಫಾ ಪ್ರಶಸ್ತಿ ಪ್ರದಾನ (IIFA 2023) ಸಮಾರಂಭ ನಡೆಯುತ್ತಿದೆ. ಈ ಕಾರ್ಯಕ್ರಮದ ಸಲುವಾಗಿ ಹಿಂದಿ ಚಿತ್ರರಂಗದ ಘಟಾನುಘಟಿ ಸೆಲೆಬ್ರಿಟಿಗಳು ಅಲ್ಲಿಗೆ ತೆರಳಿದ್ದಾರೆ. ದೊಡ್ಡ ದೊಡ್ಡ ಸ್ಟಾರ್​ ನಟರು ಇಂಥ ಕಾರ್ಯಕ್ರಮಕ್ಕೆ ಬಂದಾಗ ಅಭಿಮಾನಿಗಳ ನೂಕುನುಗ್ಗಲು ಉಂಟಾಗುವುದು ಸಹಜ. ಆಗ ಕೆಲವೊಂದು ಅಚಾತುರ್ಯಗಳು ನಡೆಯುತ್ತವೆ. ಈ ಬಾರಿಯ ಐಫಾದಲ್ಲೂ ಅಂಥದ್ದೊಂದು ಘಟನೆ ನಡೆಯಿತು. ಸಲ್ಮಾನ್ ಖಾನ್ (Salman Khan) ಅವರು ಬರುವಾಗ ಅವರಿಗೆ ಭದ್ರತೆ ಒದಗಿಸಲಾಯಿತು. ಅವರನ್ನು ಬಾಡಿ ಗಾರ್ಡ್ಸ್​ ಸುತ್ತುವರಿದಿದ್ದರು. ಅದೇ ದಾರಿಯಲ್ಲಿ ನಿಂತುಕೊಂಡಿದ್ದ ನಟ ವಿಕ್ಕಿ ಕೌಶಲ್​ ಅವರನ್ನು ಸಲ್ಲು ಅಂಗರಕ್ಷಕರು ತಳ್ಳಿಹಾಕಿದರು. ಮಾಧ್ಯಮಗಳ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಅದು ವೈರಲ್​ ಆಗಿದೆ. ಆ ಘಟನೆ ಬಗ್ಗೆ ಈಗ ವಿಕ್ಕಿ ಕೌಶಲ್​ (Vicky Kaushal) ಪ್ರತಿಕ್ರಿಯೆ ನೀಡಿದ್ದಾರೆ.

ವಿಕ್ಕಿ ಕೌಶಲ್​ ಅವರನ್ನು ಸಲ್ಮಾನ್​ ಖಾನ್​ ನಿರ್ಲಕ್ಷ್ಯ ಮಾಡಿದರು ಎಂಬುದು ಅನೇಕರ ವಾದ. ಸಲ್ಲು ಅವರ ಈ ವರ್ತನೆಯಿಂದ ವಿಕ್ಕಿ ಕೌಶಲ್​ರ ಅಭಿಮಾನಿಗಳಿಗೆ ಬೇಸರ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಬಗೆಬಗೆಯ ಚರ್ಚೆ ಮಾಡಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದಾಗ ವಿಕ್ಕಿ ಕೌಶಲ್​ ಅವರು ನೇರ ಉತ್ತರ ನೀಡಿದ್ದಾರೆ. ‘ಹಲವು ಬಾರಿ ಅನಗತ್ಯ ಚರ್ಚೆಗಳು ಆಗುತ್ತವೆ. ಅದರಿಂದ ಏನೂ ಪ್ರಯೋಜನ ಇಲ್ಲ. ಅದರ ಬಗ್ಗೆ ಮಾತನಾಡುವುದರಲ್ಲಿ ಅರ್ಥವೇ ಇಲ್ಲ. ವಿಡಿಯೋದಲ್ಲಿ ಕಾಣಿಸಿಕೊಂಡಂತೆ ವಾಸ್ತವ ಇರುವುದೇ ಇಲ್ಲ’ ಎಂದು ವಿಕ್ಕಿ ಕೌಶಲ್​ ಹೇಳಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ತಂಗಿ ಮನೆಯಲ್ಲಿ ಕಳ್ಳತನ, ಆರೋಪಿ ಬಂಧನ

ದೀಪಾವಳಿಗೆ ಬರಲಿದೆ ಸಲ್ಮಾನ್​ ಖಾನ್​ ಹೊಸ ಸಿನಿಮಾ:

ಸಲ್ಮಾನ್​ ಖಾನ್​ ಅವರೀಗ ‘ಟೈಗರ್​ 3’ ಚಿತ್ರದ ಮೇಲೆ ಗಮನ ಹರಿಸಿದ್ದಾರೆ. ಅಭಿಮಾನಿಗಳ ಪಾಲಿನ ಖುಷಿಯ ವಿಚಾರ ಏನೆಂದರೆ ಈ ಸಿನಿಮಾದ ಶೂಟಿಂಗ್​ ಮುಕ್ತಾಯ ಆಗಿದೆ. ಈ ವಿಷಯವನ್ನು ಸ್ವತಃ ಸಲ್ಮಾನ್​ ಖಾನ್​ ಖಚಿತ ಪಡಿಸಿದ್ದಾರೆ. ಐಫಾ ಅವಾರ್ಡ್ಸ್ ಸಲುವಾಗಿ ಸಲ್ಮಾನ್​ ಖಾನ್​ ಅವರು ಅಬುಧಾಬಿಗೆ ತೆರಳಿದ್ದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡುವಾಗ ಅವರು ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ನಿನ್ನೆ ರಾತ್ರಿ ಟೈಗರ್​ 3 ಚಿತ್ರದ ಶೂಟಿಂಗ್​ನಲ್ಲಿ ನಾನು ಭಾಗಿಯಾಗಿದ್ದೆ. ಅಂತೂ ಅದರ ಚಿತ್ರೀಕರಣ ಮುಗಿಸಿದ್ದೇನೆ. ಅದು ತುಂಬ ಕಷ್ಟಕರವಾಗಿತ್ತು. ಆದರೂ ಚೆನ್ನಾಗಿತ್ತು. ದೀಪಾವಳಿ ಹಬ್ಬಕ್ಕೆ ನೀವು ಈ ಸಿನಿಮಾ ನೋಡುತ್ತೀರಿ’ ಎಂದು ಸಲ್ಮಾನ್​ ಖಾನ್ ಹೇಳಿದ್ದಾರೆ.

ಇದನ್ನೂ ಓದಿ: 19 ಅಂತಸ್ತಿನ ಐಷಾರಾಮಿ ಹೋಟೆಲ್ ನಿರ್ಮಿಸಲಿದ್ದಾರೆ ಸಲ್ಮಾನ್ ಖಾನ್? ಇಲ್ಲಿದೆ ಸಂಪೂರ್ಣ ವಿವರ

‘ಟೈಗರ್​ 3’ ಚಿತ್ರಕ್ಕೆ ಮನೀಶ್​ ಶರ್ಮಾ ಅವರು ನಿರ್ದೇಶನ ಮಾಡುತ್ತಿದ್ದಾರೆ. ಯಶ್​ ರಾಜ್​ ಫಿಲ್ಮ್ಸ್​ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಸಲ್ಮಾನ್​ ಖಾನ್​ ಜೊತೆ ಕತ್ರಿನಾ ಕೈಫ್​, ಇಮ್ರಾನ್ ಹಷ್ಮಿ ಕೂಡ ಪಾತ್ರವರ್ಗದಲ್ಲಿದ್ದಾರೆ. ‘ಟೈಗರ್​’ ಸರಣಿಯ ಚಿತ್ರಗಳ ಬಗ್ಗೆ ಅಭಿಮಾನಿಗಳಿಗೆ ಸಖತ್​ ಕ್ರೇಜ್​ ಇದೆ. ಹಾಗಾಗಿ ‘ಟೈಗರ್​ 3’ ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿದೆ. ಇದರಲ್ಲಿ ಭರ್ಜರಿ ಆ್ಯಕ್ಷನ್​ ದೃಶ್ಯಗಳು ಇರಲಿವೆ ಎಂದು ನಿರೀಕ್ಷಿಸಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us