Vijay Sethupathi: ಶಾರುಖ್​ ಖಾನ್ ಎದುರು ವಿಲನ್​ ಆಗಿ ನಟಿಸಿದ ವಿಜಯ್​ ಸೇತುಪತಿಗೆ ಸಿಕ್ಕ ಸಂಬಳ ಎಷ್ಟು?

Vijay Sethupathi Remuneration: ‘ಜವಾನ್​’ ಸಿನಿಮಾದಲ್ಲಿ ವಿಜಯ್​ ಸೇತುಪತಿ ಅವರು ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎಷ್ಟೋ ಹೀರೋಗಳಿಗೂ ಸಿಗದಷ್ಟು ಸಂಭಾವನೆಯನ್ನು ವಿಜಯ್​ ಸೇತುಪತಿ ಅವರು ವಿಲನ್​ ಆಗಿ ಪಡೆಯುತ್ತಿದ್ದಾರೆ.

Vijay Sethupathi: ಶಾರುಖ್​ ಖಾನ್ ಎದುರು ವಿಲನ್​ ಆಗಿ ನಟಿಸಿದ ವಿಜಯ್​ ಸೇತುಪತಿಗೆ ಸಿಕ್ಕ ಸಂಬಳ ಎಷ್ಟು?
ವಿಜಯ್​ ಸೇತುಪತಿ

Updated on: Jul 17, 2023 | 9:00 PM

ಎಲ್ಲ ಬಗೆಯ ಪಾತ್ರಗಳಿಗೆ ಜೀವ ತುಂಬುವಂತಹ ಕಲಾವಿದ ವಿಜಯ್​ ಸೇತುಪತಿ (Vijay Sethupathi) ಅವರು ಬಾಲಿವುಡ್​ನಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಶಾರುಖ್​ ಖಾನ್​ ನಟನೆಯ ‘ಜವಾನ್​’ (Jawan) ಸಿನಿಮಾದಲ್ಲಿ ಅವರು ವಿಲನ್​ ಆಗಿ ನಟಿಸಿದ್ದಾರೆ. ಸ್ಟಾರ್​ ನಟನಾಗಿ ಮಿಂಚುತ್ತಿರುವ ಅವರಿಗೆ ಕೈ ತುಂಬ ಸಂಭಾವನೆ ಸಿಗುತ್ತದೆ. ಅದರಲ್ಲೂ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳ ಸಿನಿಮಾಗಳಲ್ಲಿ ನಟಿಸಿದರೆ ಸಂಬಳ ಇನ್ನೂ ಹೆಚ್ಚುತ್ತದೆ. ಅದಕ್ಕೆ ಬೆಸ್ಟ್​ ಉದಾಹರಣೆ ಎಂದರೆ ‘ಜವಾನ್​’ ಸಿನಿಮಾ. ಈ ಚಿತ್ರಕ್ಕೆ ಶಾರುಖ್​ ಖಾನ್ (Shah Rukh Khan)​ ಒಡೆತನದ ‘ರೆಡ್​ ಚಿಲ್ಲೀಸ್​ ಎಂಟರ್​ಟೇನ್​ಮೆಂಟ್​’ ಬಂಡವಾಳ ಹೂಡಿದೆ. ವಿಜಯ್​ ಸೇತುಪತಿ ಅವರಿಗೆ ಬರೋಬ್ಬರಿ 21 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ವಿಜಯ್​ ಸೇತುಪತಿ ಅವರು ತಮಿಳು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ‘ಜವಾನ್​’ ಚಿತ್ರಕ್ಕೆ ನಿರ್ದೇಶನ ಮಾಡಿರುವುದು ಕಾಲಿವುಡ್​ ನಿರ್ದೇಶಕ ಅಟ್ಲಿ. ಹಾಗಾಗಿ ತಮಿಳು ಚಿತ್ರರಂಗದ ಹಲವರಿಗೆ ‘ಜವಾನ್​’ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ. ಶಾರುಖ್​ ಖಾನ್​ ಎದುರು ವಿಜಯ್​ ಸೇತುಪತಿಯವರೇ ವಿಲನ್​ ಆಗಿ ನಟಿಸಬೇಕು ಎಂಬುದು ಚಿತ್ರತಂಡದ ಬೇಡಿಕೆ ಆಗಿತ್ತು. ಅದಕ್ಕಾಗಿ ದುಬಾರಿ ಸಂಭಾವನೆ ನೀಡಲೂ ಶಾರುಖ್​ ಖಾನ್​ ರೆಡಿ ಇದ್ದರು. ಹಾಗಾಗಿ ವಿಜಯ್​ ಸೇತುಪತಿ ಅವರ ಜೇಬಿಗೆ 21 ಕೋಟಿ ರೂಪಾಯಿ ಸೇರಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಎಷ್ಟೋ ಹೀರೋಗಳು ಕೂಡ ಇಷ್ಟ ಸಂಭಾವನೆ ಪಡೆದಿಲ್ಲ.

ಇದನ್ನೂ ಓದಿ: ಯಶ್​ ನಟನೆಯ ಸಿನಿಮಾಗಳನ್ನು ನೋಡಿ ‘ಜವಾನ್​’ ಚಿತ್ರಕ್ಕಾಗಿ ತಯಾರಿ ಮಾಡಿಕೊಂಡಿದ್ದ ಶಾರುಖ್​ ಖಾನ್​

ಸೆಪ್ಟೆಂಬರ್​ 7ರಂದು ‘ಜವಾನ್​’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆಗೆ ದೀಪಿಕಾ ಪಡುಕೋಣೆ, ನಯನತಾರಾ, ಸಾನ್ಯಾ ಮಲ್ಹೋತ್ರಾ, ರಿಧಿ ಡೋಗ್ರಾ ಮುಂತಾದವರು ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿರುವ ಪ್ರಿವ್ಯೂ ನೋಡಿ ಎಲ್ಲರೂ ವಾವ್​ ಎಂದಿದ್ದಾರೆ. ಇದರಲ್ಲಿನ ಆ್ಯಕ್ಷನ್​ ಕಂಡು ಶಾರುಖ್​ ಖಾನ್​ ಅಭಿಮಾನಿಗಳಿಗೆ ಥ್ರಿಲ್​ ಆಗಿದೆ. ತಾಂತ್ರಿಕವಾಗಿ ಈ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಆಗಿದೆ.

ಇದನ್ನೂ ಓದಿ: Jawan: ‘ಜವಾನ್​’ ಸಿನಿಮಾದ ಪ್ರಿವ್ಯೂನಲ್ಲಿ ಈ ಸುಂದರಿಗಾಗಿ ಹುಡುಕಾಡಿದ ಫ್ಯಾನ್ಸ್​; ಯಾರು ಈ ಬೆಡಗಿ?

2023ರ ಆರಂಭದಲ್ಲೇ ಶಾರುಖ್​ ಖಾನ್​ ಅವರಿಗೆ ‘ಪಠಾಣ್​’ ಸಿನಿಮಾ ಮೂಲಕ ಭರ್ಜರಿ ಗೆಲುವು ಸಿಕ್ಕಿತು. ಆ ಸಿನಿಮಾ ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತು. ಅದೇ ರೀತಿ ‘ಜವಾನ್​’ ಸಿನಿಮಾ ಕೂಡ ಅಬ್ಬರಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಆ ಬಳಿಕ ‘ಡಂಕಿ’ ಸಿನಿಮಾ ತೆರೆಕಾಣಲಿದೆ. ಆ ಚಿತ್ರಕ್ಕೆ ರಾಜ್​ಕುಮಾರ್​ ಹಿರಾನಿ ನಿರ್ದೇಶನ ಮಾಡುತ್ತಿದ್ದಾರೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us