AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jawan: ‘ಜವಾನ್​’ ಸಿನಿಮಾದ ಪ್ರಿವ್ಯೂನಲ್ಲಿ ಈ ಸುಂದರಿಗಾಗಿ ಹುಡುಕಾಡಿದ ಫ್ಯಾನ್ಸ್​; ಯಾರು ಈ ಬೆಡಗಿ?

Jawan Prevue: 65 ಮಿಲಿಯನ್​ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಾಣುವ ಮೂಲಕ ‘ಜವಾನ್​’ ಸಿನಿಮಾದ ಪ್ರಿವ್ಯೂ ಧೂಳೆಬ್ಬಿಸುತ್ತಿದೆ. ಅಚ್ಚರಿ ಏನೆಂದರೆ, ಸೋಶಿಯಲ್​ ಮೀಡಿಯಾಲ್ಲಿ ಇನ್ನೊಂದು ಚರ್ಚೆ ಶುರುವಾಗಿದೆ.

Jawan: ‘ಜವಾನ್​’ ಸಿನಿಮಾದ ಪ್ರಿವ್ಯೂನಲ್ಲಿ ಈ ಸುಂದರಿಗಾಗಿ ಹುಡುಕಾಡಿದ ಫ್ಯಾನ್ಸ್​; ಯಾರು ಈ ಬೆಡಗಿ?
ರಿಧಿ ಡೋಗ್ರಾ, ಶಾರುಖ್​ ಖಾನ್​
ಮದನ್​ ಕುಮಾರ್​
|

Updated on: Jul 12, 2023 | 7:51 PM

Share

ಬಾಲಿವುಡ್​ ಸಿನಿಪ್ರೇಮಿಗಳ ವಲಯದಲ್ಲಿ ಈಗ ‘ಜವಾನ್​’ ಸಿನಿಮಾದ್ದೇ ಸುದ್ದಿ. ಶಾರುಖ್​ ಖಾನ್​ (Shah Rukh Khan) ಅಭಿಮಾನಿಗಳಂತೂ ಹಗಲು-ರಾತ್ರಿ ಈ ಸಿನಿಮಾದ ಬಗ್ಗೆಯೇ ಮಾತನಾಡುತ್ತಿದ್ದಾರೆ. ಅಷ್ಟರಮಟ್ಟಿಗೆ ಈ ಚಿತ್ರದ ಬಗ್ಗೆ ಹೈಪ್​ ಹೆಚ್ಚಾಗಿದೆ. ಇತ್ತೀಚೆಗಷ್ಟೇ ‘ಜವಾನ್​’ ಸಿನಿಮಾದ ಪ್ರಿವ್ಯೂ (Jawan prevue) ವಿಡಿಯೋ ಬಿಡುಗಡೆ ಆಯಿತು. ಇದನ್ನು ನೋಡಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯೂಟ್ಯೂಬ್​ನಲ್ಲಿ 65 ಮಿಲಿಯನ್​ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಾಣುವ ಮೂಲಕ ಈ ವಿಡಿಯೋ ಧೂಳೆಬ್ಬಿಸುತ್ತಿದೆ. ಅಚ್ಚರಿ ಏನೆಂದರೆ, ಸೋಶಿಯಲ್​ ಮೀಡಿಯಾಲ್ಲಿ ಇನ್ನೊಂದು ಚರ್ಚೆ ಶುರುವಾಗಿದೆ. ‘ಜವಾನ್​’ ಪ್ರಿವ್ಯೂನಲ್ಲಿ ಓರ್ವ ಸುಂದರಿಗಾಗಿ ಪ್ರೇಕ್ಷಕರು ಹುಡುಕಾಡಿದ್ದಾರೆ. ಯಾರದು? ರಿಧಿ ಡೋಗ್ರಾ! ಯಾಕೆ ಈ ವಿಡಿಯೋದಲ್ಲಿ ರಿಧಿ ಡೋಗ್ರಾ (Ridhi Dogra) ಕಾಣಿಸಿಲ್ಲ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.

‘ಜವಾನ್​’ ಸಿನಿಮಾದಲ್ಲಿ ಬಹುತಾರಾಗಣ ಇದೆ. ಶಾರುಖ್​ ಖಾನ್​ ಜೊತೆ ದೀಪಿಕಾ ಪಡುಕೋಣೆ, ನಯನತಾರಾ, ವಿಜಯ್​ ಸೇತುಪತಿ, ರಿಧಿ ಡೋಗ್ರಾ ಕೂಡ ನಟಿಸಿದ್ದಾರೆ. ಪ್ರಿವ್ಯೂ ವಿಡಿಯೋದಲ್ಲಿ ರಿಧಿ ಡೋಗ್ರಾ ಅವರನ್ನು ಹೊರತುಪಡಿಸಿ ಈ ಎಲ್ಲ ಸ್ಟಾರ್​ಗಳೂ ಕಾಣಿಸಿಕೊಂಡಿದ್ದಾರೆ. ಹಾಗಾಗಿ ರಿಧಿ ಡೋಗ್ರಾ ಅವರ ಅಭಿಮಾನಿಗಳಿಗೆ ಕೊಂಚ ಬೇಸರ ಆಗಿದೆ. ಸೋಶಿಯಲ್​ ಮೀಡಿಯಾ ಮೂಲಕ ಈ ಬಗ್ಗೆ ರಿಧಿ ಡೋಗ್ರಾಗೆ ನೇರವಾಗಿ ಪ್ರಶ್ನೆ ಮಾಡಲಾಗಿದೆ.

‘ಪ್ರಿವ್ಯೂ ವಿಡಿಯೋದಲ್ಲಂತೂ ಇಲ್ಲ.. ಸಿನಿಮಾದಲ್ಲಾದರೂ ಇದ್ದೀರಿ ಅಲ್ವಾ’ ಎಂದು ಅಭಿಮಾನಿಯೊಬ್ಬರು ರಿಧಿ ಡೋಗ್ರಾಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ಅವರು, ‘ಟ್ರೇಲರ್​ನಲ್ಲಿ ಕೂಡ ಇದ್ದೇನೆ. ಅದು ಎಲ್ಲಿ ಎಂಬುದು ನನಗೆ ಮಾತ್ರ ಗೊತ್ತು’ ಎಂದು ಟ್ವೀಟ್​ ಮಾಡಿದ್ದಾರೆ. ‘ನಾನು ಇದನ್ನು 30 ಬಾರಿ ನೋಡಿದ್ದೇನೆ. ಆದರೆ ನೀವು ಕಾಣಲೇ ಇಲ್ಲ’ ಎಂದು ಮತ್ತೋರ್ವ ಅಭಿಮಾನಿ ಟ್ವೀಟ್​ ಮಾಡಿದ್ದಾರೆ. ‘ನೀವು 30 ಸಲ ಶಾರುಖ್​ ಖಾನ್​ ಅವರನ್ನು ನೋಡಿದ್ದೀರಿ. ಅದಕ್ಕಿಂತ ಇನ್ನೇನು ಬೇಕು’ ಎಂದು ರಿಧಿ ಡೋಗ್ರಾ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Jawan: ‘ತಾಕತ್ತಿದ್ದರೆ ಜವಾನ್​ ಎದುರು ನಿಮ್ಮ ಸಿನಿಮಾ ರಿಲೀಸ್​ ಮಾಡಿ’: ವಿವೇಕ್​ ಅಗ್ನಿಹೋತ್ರಿಗೆ ನೇರ ಸವಾಲು

ಕಿರುತೆರೆ ಧಾರಾವಾಹಿ ಮತ್ತು ವೆಬ್​ ಸಿರೀಸ್​ಗಳಲ್ಲಿ ರಿಧಿ ಡೋಗ್ರಾ ಅವರು ನಟಿಸಿ ಫೇಮಸ್​ ಆಗಿದ್ದಾರೆ. ಅವರಿಗೆ ದೊಡ್ಡ ಫ್ಯಾನ್​ ಫಾಲೋಯಿಂಗ್​ ಇದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 18 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ಬಿಗ್​ ಬಾಸ್​ ಸ್ಪರ್ಧಿ ರಾಕೇಶ್​ ಬಾಪಟ್​ ಜೊತೆ ರಿಧಿ ಡೋಗ್ರಾಗೆ ಮದುವೆ ಆಗಿತ್ತು. ನಂತರ ಅವರು ಡಿವೋರ್ಸ್​ ಪಡೆದರು. ‘ಜವಾನ್​’ ಸಿನಿಮಾ ಬಿಡುಗಡೆ ಆದ ಬಳಿಕ ರಿಧಿ ಡೋಗ್ರಾಗೆ ಜನಪ್ರಿಯತೆ ಹೆಚ್ಚುವ ನಿರೀಕ್ಷೆ ಇದೆ. ಸೆಪ್ಟೆಂಬರ್​ 7ರಂದು ಈ ಚಿತ್ರ ರಿಲೀಸ್​ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ