‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತೆರೆಗೆ ಬಂದ ಬಳಿಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಸಾಕಷ್ಟು ಚರ್ಚೆಗೆ ಒಳಗಾಗುತ್ತಿದ್ದಾರೆ. ಹಲವು ವಿಚಾರಗಳ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಈಗ ಅವರು ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಫಿಲ್ಮ್ಫೇರ್ ಪ್ರಶಸ್ತಿಯನ್ನು ತಿರಸ್ಕರಿಸಿರುವುದು ಮಾತ್ರವಲ್ಲ ಆ ಬಗ್ಗೆ ಅವರು ಪ್ರಚಾರ ಪಡೆಯಲು ಮುಂದಾಗಿದ್ದಾರೆ. ಈ ವಿಚಾರವನ್ನು ಬಾಲಿವುಡ್ ಹೀರೋ ಗುಲ್ಶನ್ ದೇವಯ್ಯ (Gulshan Devaiah) ತೆರೆದಿಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ಏಪ್ರಿಲ್ 27ರಂದು ಮುಂಬೈನಲ್ಲಿ ಅದ್ದೂರಿಯಾಗಿ ಫಿಲ್ಮ್ಫೆರ್ ಪ್ರಶಸ್ತಿ ಕಾರ್ಯಕ್ರಮ ನಡೆದಿದೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ 7 ವಿಭಾಗಗಳಲ್ಲಿ ನಾಮಿನೇಟ್ ಆಗಿತ್ತು. ಆದರೆ, ಈ ಅವಾರ್ಡ್ನ ಅವರು ತಿರಸ್ಕರಿಸಿದ್ದರು. ‘ ನೈತಿಕತೆ ಇಲ್ಲದ, ಸಿನಿಮಾವಿರೋಧಿಯಾದ ಈ ಪ್ರಶಸ್ತಿತನ್ನು ನಯವಾಗಿ ತಿರಸ್ಕರಿಸುತ್ತೇನೆ. ಫಿಲ್ಮ್ಫೇರ್ನಿಂದ ನಿರ್ದೇಶಕರಿಗೆ ಘನತೆ ಬರೋದಿಲ್ಲ. ಅವಮಾನಿಸುವ ಈ ವ್ಯವಸ್ಥೆ ಅಂತ್ಯವಾಗಬೇಕು. ಹಾಗಾಗಿ ನಾನು ಇದನ್ನು ವಿರೋಧಿಸುತ್ತಿದ್ದೇನೆ’ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದರು. ಅಷ್ಟೇ ಅಲ್ಲ ಈ ಬಗ್ಗೆ ಪ್ರಸಾರವಾದ ವರದಿಯನ್ನು ಅವರು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ‘ಬೈಕಾಟ್ ಗ್ಯಾಂಗ್’ ಬಗ್ಗೆ ವಿವೇಕ್ ಅಗ್ನಿಹೋತ್ರಿಗೆ ಅನುಮಾನ; ‘ಪಠಾಣ್’ ತಂಡದ ಗಿಮಿಕ್ ಬಿಚ್ಚಿಟ್ಟ ನಿರ್ದೇಶಕ
ವಿವೇಕ್ ಅಗ್ನಿಹೋತ್ರಿ ಟ್ವೀಟ್ನ ಗುಲ್ಶನ್ ರೀಟ್ವೀಟ್ ಮಾಡಿಕೊಂಡಿದ್ದಾರೆ. ‘ಸರ್, ನನಗೆ ಸಣ್ಣ ಅನುಮಾನ ಇದೆ. ಪ್ರಶಸ್ತಿ ತಿರಸ್ಕಾರದ ಬಗ್ಗೆ ಟ್ವೀಟ್ ಮಾಡಿದ್ದೀರಿ ಮತ್ತು ಅದನ್ನು ವಾಟ್ಸಾಪ್‌ನ ಮೂಲಕ ಕಳುಹಿಸಿದ್ದೀರಿ. ಅದೃಷ್ಟವಶಾತ್ ನಾನು ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿದ್ದೇನೆ. ಹೀಗಾಗಿ ನನಗೂ ಆ ಮೆಸೇಜ್ ಬಂತು. ನಿಮ್ಮ ಮೆಸೇಜ್ನ ಸ್ವೀಕರಿಸಲು ಯಾವಾಗಲೂ ಖುಷಿ ಆಗಿತ್ತದೆ. ಆದರೆ, ಇದು ಏಕೆ? ನಿಮಗೆ ಏನು ಅನ್ನಿಸಿತೋ ಅದನ್ನು ಟ್ವೀಟ್ ಮಾಡಿ. ಆದರೆ, ಅದನ್ನು ವಾಟ್ಸ್ಪ್ ಮೂಲಕ ಏಕೆ ಕಳುಹಿಸಬೇಕು’ ಎಂದು ಪ್ರಶ್ನೆ ಮಾಡಿದ್ದಾರೆ.
Dear Good Sir,
Small doubt…
You tweeted your polite refusal & sent it to your contact list on WhatsApp. Fortunately sir…I’m on your list, so I too got it.
Thank you ? …always thrilled to receive your texts but why ? No no sir…… I mean …you please tweet anything as you… https://t.co/pGetAaVVLf— “SuperGullu” (@gulshandevaiah) April 27, 2023
ಈ ಬಗ್ಗೆ ಚರ್ಚೆ ನಡೆದಿದೆ. ಈ ವಿಚಾರದಲ್ಲಿ ವಿವೇಕ್ ಅಗ್ನಿಹೋತ್ರಿಯನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ. ಅವರು ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ಇನ್ನೂ ಕೆಲವರೂ ಗುಲ್ಶನ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ‘ವಾಟ್ಸಾಪ್ ವಿಚಾರವನ್ನು ಅಲ್ಲಿಗೇ ಸೀಮಿತ ಮಾಡಬೇಕು. ಅದನ್ನು ಟ್ವಿಟರ್ಗೆ ಏಕೆ ತಂದಿರಿ’ ಎಂದು ಕೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ