‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಟ್ರೈಲರ್ ಬಿಡುಗಡೆ ತಡೆದ ಪೊಲೀಸರು

The Bengal Files: ‘ದಿ ಕಶ್ಮೀರ್ ಫೈಲ್ಸ್’, ‘ದಿ ವ್ಯಾಕ್ಸಿನ್ ವಾರ್’ ಸಿನಿಮಾಗಳನ್ನು ನಿರ್ದೇಶಿಸಿರುವ ವಿವೇಕ್ ಅಗ್ನಿಹೋತ್ರಿ, ಅದೇ ಮಾದರಿಯ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ನಿರ್ದೇಶಿಸಿದ್ದಾರೆ. ಈ ಸಿನಿಮಾ ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ಪಕ್ಷದ ಆಡಳಿತ ಮತ್ತು ಅದರಿಂದ ಆದ ನಷ್ಟದ ಬಗೆಗಿನ ಕತೆಯನ್ನು ಹೊಂದಿರುವುದಾಗಿ ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ. ಸಿನಿಮಾದ ಟ್ರೈಲರ್ ಬಿಡುಗಡೆ ಇಂದು ಕೊಲ್ಕತ್ತನಲ್ಲಿ ಆಯೋಜಿಸಲಾಗಿತ್ತು.

‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಟ್ರೈಲರ್ ಬಿಡುಗಡೆ ತಡೆದ ಪೊಲೀಸರು
The Bengal Files

Updated on: Aug 16, 2025 | 7:58 PM

‘ದಿ ಕಶ್ಮೀರ್ ಫೈಲ್ಸ್’, ‘ದಿ ವ್ಯಾಕ್ಸಿನ್ ವಾರ್’ ಸಿನಿಮಾಗಳನ್ನು ನಿರ್ದೇಶಿಸಿರುವ ವಿವೇಕ್ ಅಗ್ನಿಹೋತ್ರಿ, ಅದೇ ಮಾದರಿಯ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ನಿರ್ದೇಶಿಸಿದ್ದಾರೆ. ಈ ಸಿನಿಮಾ ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ಪಕ್ಷದ ಆಡಳಿತ ಮತ್ತು ಅದರಿಂದ ಆದ ನಷ್ಟದ ಬಗೆಗಿನ ಕತೆಯನ್ನು ಹೊಂದಿರುವುದಾಗಿ ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ. ಸಿನಿಮಾದ ಟ್ರೈಲರ್ ಬಿಡುಗಡೆ ಇಂದು ಕೊಲ್ಕತ್ತನಲ್ಲಿ ಆಯೋಜಿಸಲಾಗಿತ್ತು. ಆದರೆ ವಿವೇಕ್ ಅಗ್ನಿಹೋತ್ರಿ ಹೇಳಿರುವಂತೆ ಸ್ಥಳೀಯ ಪೊಲೀಸರು ಸಿನಿಮಾದ ಟ್ರೈಲರ್ ಬಿಡುಗಡೆಗೆ ಅವಕಾಶ ನಿರಾಕರಿಸಿದ್ದಾರೆ. ಆದರೆ ಸಿನಿಮಾದ ಟ್ರೈಲರ್ ಯೂಟ್ಯೂಬ್​​ನಲ್ಲಿ ಬಿಡುಗಡೆ ಆಗಿದೆ.

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ಕೊಲ್ಕತ್ತದ ಸ್ಟಾರ್ ಹೋಟೆಲ್​ ಐಟಿಸಿ ರಾಯಲ್​​ನಲ್ಲಿ ಆಯೋಜಿಸಲಾಗಿತ್ತು. ಆದರೆ ಎರಡು ಬಾರಿ ಟ್ರೈಲರ್ ಲಾಂಚ್ ನಿಂತು ಹೋಯ್ತಂತೆ. ಒಂದು ಬಾರಿ ತಾಂತ್ರಿಕ ಕಾರಣದಿಂದ ಟ್ರೈಲರ್ ಲಾಂಚ್ ನಿಂತಿದೆ. ಆದರೆ ಎರಡನೇ ಬಾರಿ ಪೊಲೀಸರು ಹೋಟೆಲ್ ಪ್ರವೇಶಿಸಿ ಟ್ರೈಲರ್ ಲಾಂಚ್ ಕಾರ್ಯಕ್ರಮವನ್ನು ತಡೆದಿದ್ದಾರೆ. ಈ ವೇಳೆ ವಿವೇಕ್ ಅಗ್ನಿಹೋತ್ರಿ, ಪೊಲೀಸರೊಟ್ಟಿಗೆ ಬಿರುಸಿನ ಮಾತುಕತೆ ನಡೆಸಿದ್ದು, ಅಗ್ನಿಹೋತ್ರಿಯ ಖಾಸಗಿ ಭದ್ರತಾ ಸಿಬ್ಬಂದಿ ಅವರನ್ನು ಹೋಟೆಲ್​ನಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ.

ಈ ವೇಳೆ ಮಾಧ್ಯಮಗಳ ಮುಂದೆ ಮಾತನಾಡಿದ ವಿವೇಕ್ ಅಗ್ನಿಹೋತ್ರಿ, ‘ಇದು ಪ್ರಜಾಪ್ರಭುತ್ವದ ಮೇಲೆ ಮಾಡಿರುವ ದಾಳಿ, ಬಂಗಾಳದಲ್ಲಿ ಪ್ರಜಾಪ್ರಭುತ್ವ ಯಾವ ಸ್ಥಿತಿಯಲ್ಲಿದೆ ಎಂಬುದಕ್ಕೆ ಇದು ಉದಾಹರಣೆ. ಪಶ್ಚಿಮ ಬಂಗಾಳ ಬದಲಾಗಿದೆ ಎಂಬುದಕ್ಕೆ ಇದೇ ಸಾಕ್ಷಿ. ಇಂದು ನಡೆದಿರುವ ಘಟನೆ ಬಂಗಾಳದ ಅಸ್ಮಿತೆಯ ಮೇಲಾಗಿರುವ ದಾಳಿ. ಎರಡೆರಡು ಬಾರಿ ನನ್ನ ಟ್ರೈಲರ್ ಲಾಂಚ್ ಅನ್ನು ತಡೆಯಲಾಗಿದೆ, ಮೊದಲ ಬಾರಿ ಹೋಟೆಲ್​ನ ವೈಯರ್ರುಗಳನ್ನು ಕತ್ತರಿಸಿ ನಮ್ಮ ಟ್ರೈಲರ್ ಲಾಂಚ್ ಅನ್ನು ತಡೆಯಲಾಗಿದೆ, ಆ ನಂತರ ಪೊಲೀಸರು ಬಂದು ದಬ್ಬಾಳಿಕೆಯಿಂದ ಕಾರ್ಯಕ್ರಮವನ್ನು ತಡೆದಿದ್ದಾರೆ’ ಎಂದು ವಿವೇಕ್ ಆರೋಪಿಸಿದ್ದಾರೆ.

ಇದನ್ನೂ ಓದಿ:‘ಘಾಟಿ’ ಸಿನಿಮಾ ಟ್ರೈಲರ್: ಖತರ್​ನಾಕ್ ಸ್ಮಗ್ಲರ್ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ

ಹೋಟೆಲ್ ಸಿಬ್ಬಂದಿ ಮಾಧ್ಯಮಗಳಿಗೆ ನೀಡಿರುವ ಮಾಹಿತಿಯಂತೆ. ಕಾರ್ಯಕ್ರಮ ನಡೆಸಲು ಸ್ಥಳೀಯ ಆಡಳಿತದಿಂದ ಅವರು ಅನುಮತಿ ಪಡೆದಿರಲಿಲ್ಲವಾದ್ದರಿಂದ ಪೊಲೀಸರು ಕಾರ್ಯಕ್ರಮವನ್ನು ತಡೆದಿದ್ದಾರೆ ಎಂದಿದ್ದಾರೆ. ಆದರೆ ವಿವೇಕ್ ಅಗ್ನಿಹೋತ್ರಿ, ‘ರಾಜಕೀಯ ದ್ವೇಷದಿಂದ ತಮ್ಮ ಸಿನಿಮಾ ಕಾರ್ಯಕ್ರಮವನ್ನು ತಡೆಯಲಾಗಿದೆ’ ಎಂದಿದ್ದಾರೆ.

ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿರುವ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಪ್ರೊಪಾಗಾಂಡಾ ಸಿನಿಮಾ ಎಂಬ ಆರೋಪವನ್ನು ಬಂಗಾಳದ ಆಡಳಿತ ಪಕ್ಷದ ಸದಸ್ಯರು ಆರೋಪಿಸಿದ್ದಾರೆ. ವಿವೇಕ್ ಅಗ್ನಿಹೋತ್ರಿ ಬಿಜೆಪಿ ಪರ ಜನಾಭಿಪ್ರಾಯ ಮೂಡಿಸುವ ಸಿನಿಮಾಗಳನ್ನಷ್ಟೆ ಮಾಡುತ್ತಾರೆ, ಅವರು ಬಿಜೆಪಿಯ ಏಜೆಂಟ್ ಆರೋಪವನ್ನು ಸಹ ಮಾಡಲಾಗಿದೆ. ಏನೇ ಅಡ್ಡಿ ಆದರೂ ಸಹ ಇಂದು ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾದ ಟ್ರೈಲರ್ ಯೂಟ್ಯೂಬ್​​ನಲ್ಲಿ ಬಿಡುಗಡೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ