ವಿವೇಕ್ ಒಬೆರಾಯ್ ಅವರಿಗೆ ಈಗ ಮೊದಲಿನಷ್ಟು ಬೇಡಿಕೆ ಇಲ್ಲ. ಹಾಗಂತ ಅವರು ಬಾಲಿವುಡ್ನ ತೊರೆದು ಹೋಗಿಲ್ಲ. ಐಶ್ವರ್ಯಾ ರೈ ಸಹವಾಸಕ್ಕೆ ಹೋದ ವಿವೇಕ್ ಸಾಕಷ್ಟು ನಷ್ಟ ಅನುಭವಿಸಿದರು. ಅವರಿಗೆ ಸಲ್ಮಾನ್ ಖಾನ್ ಕಡೆಯಿಂದ ಬೆದರಿಕೆ ಇತ್ತು. ಇದೆಲ್ಲವನ್ನು ಮೆಟ್ಟಿ ನಿಂತಿದ್ದಾರೆ. ಅವರಿಗೆ ಅಂಡರ್ವರ್ಲ್ಡ್ನಿಂದಲೂ ಬೆದರಿಕೆ ಬಂದಿತ್ತಂತೆ. ಈ ವಿಚಾರವನ್ನು ಅವರು ಓಪನ್ ಆಗಿ ಹೇಳಿಕೊಂಡಿದ್ದಾರೆ.
ವಿವೇಕ್ ಅವರು ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಅದರಲ್ಲಿ ಅವರು ಎಲ್ಲವನ್ನೂ ಓಪನ್ ಆಗಿ ಹೇಳಿಕೊಂಡಿಲ್ಲ. ‘ನಾನು ನನ್ನ ಕರಿಯರ್ನಲ್ಲಿ ಕಿತ್ತಾಟದ ಹಂತಕ್ಕೆ ಹೋಗಿದ್ದೆ. ನಾನು ಅದರಿಂದ ಆರ್ಥಿಕವಾಗಿ ಸಮಸ್ಯೆ ಎದುರಿಸಿದೆ. ನಾನು ಒತ್ತಡಕ್ಕೆ ಒಳಗಾದೆ. ನನಗೆ ಅಂಡರ್ವರ್ಲ್ಡ್ನಿಂದ ಕರೆಗಳು ಬರುತ್ತಿದ್ದವು. ನನಗೆ ಬೆದರಿಕೆಗಳು ಬರುತ್ತಿದ್ದವು. ನನ್ನ ಜೀವನದಲ್ಲಿ ಆ ರೀತಿಯನದ್ದನ್ನು ಅನುಭವಿಸಿರಲಿಲ್ಲ. ಆದರೆ, ಎಲ್ಲವೂ ಒಟ್ಟೊಟ್ಟಿಗೆ ಬಂತು’ ಎಂದಿದ್ದಾರೆ ಅವರು.
ಇದನ್ನೂ ಓದಿ:ಬಾಬಾ ಸಿದ್ದಿಕಿಗೂ ಮುನ್ನ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಶೂಟರ್ಸ್
ಸಲ್ಮಾನ್ ಖಾನ್ ಜೊತೆ ಆದ ಕಿತ್ತಾಟದ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾನು ಭಾವನಾತ್ಮಕ ಜೀವಿ. ನನ್ನಿಂದ ಆದ ಆ್ಯಕ್ಷನ್ಗೆ ನಾನು ಪರಿಣಾಮ ಎದುರಿಸಲು ರೆಡಿ ಇದ್ದೆ. ಆದರೆ,ನನ್ನ ಕುಟುಂಬಕ್ಕೂ ಬೆದರಿಕೆ ಬಂತು. ನನ್ನ ತಂದೆ ಫೋನ್ ಎತ್ತಿದಾಗ ಯಾರೋ ಅವರಿಗೆ ಬೆದರಿಕೆ ಹಾಕಿದರು. ನನ್ನ ತಾಯಿಗೂ ಜೀವ ಬೆದರಿಕೆ ಬಂತು. ನನ್ನ ಸಹೋದರಿಯ ಬಗ್ಗೆಯೂ ನನಗೆ ಭಯ ಆಯಿತು. ಇದೆಲ್ಲ ಪ್ರ್ಯಾಂಕ್ ಕಾಲ್ ಎಂದುಕೊಂಡಿದ್ದೆ. ಆದರೆ, ಇದೆಲ್ಲ ನಿಜ ಎಂದು ಪೊಲೀಸರೇ ಖಚಿತಪಡಿಸಿದರು’ ಎಂದಿದ್ದಾರೆ ವಿವೇಕ್.
‘ಈ ಮಧ್ಯೆ ಅನೇಕರು ನನಗೆ ಸಾಕಷ್ಟು ಪ್ರೀತಿ ತೋರಿಸಿದ್ದಾರೆ. ಅವರು ಸಣ್ಣ ಬೆಂಬಲ ನೀಡಿದ್ದರೂ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ ಅವರು. ವಿವೇಕ್ ವಿರುದ್ಧ ಬೈಕಾಟ್ ಟ್ರೆಂಡ್ ಆರಂಭ ಆಗಿತ್ತು. ಆದರೆ, ಇದಕ್ಕೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಸದ್ಯ ಸಿನಿಮಾ ವಿಚಾರಕ್ಕೆ ಬರೋದಾದರೆ ‘ಮಸ್ತಿ 4’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಅವರ ಬಳಿ ಇನ್ನೂ ಎರಡು ಸಿನಿಮಾಗಳು ಇವೆ. ಇತ್ತೀಚೆಗೆ ಅವರು ರೋಲ್ಸ್ ರಾಯ್ಸ್ ಖರೀದಿ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ