‘ಜಗತ್ತನ್ನು ಒಂದುಗೂಡಿಸಬೇಕು, ಒಡೆಯಬಾರದು’; ‘ದಿ ಕೇರಳ ಸ್ಟೋರಿ’ ಬಗ್ಗೆ ಸ್ಟಾರ್ ನಟನ ಅಸಮಾಧಾನ

|

Updated on: May 25, 2023 | 8:05 AM

‘ನೀವು ಸಿನಿಮಾ ಒಪ್ಪಿಕೊಳ್ಳುತ್ತೀರೋ ಅಥವಾ ಇಲ್ಲವೋ, ಸಿನಿಮಾ ನಿಷೇಧ ಮಾಡುವುದು ತಪ್ಪು’ ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಟ್ವೀಟ್ ಮಾಡಿದ್ದರು. ಈ ಬಗ್ಗೆ ಬಾಲಿವುಡ್ ನಟನಿಗೆ ಪ್ರಶ್ನೆ ಮಾಡಲಾಗಿದೆ.

‘ಜಗತ್ತನ್ನು ಒಂದುಗೂಡಿಸಬೇಕು, ಒಡೆಯಬಾರದು’; ‘ದಿ ಕೇರಳ ಸ್ಟೋರಿ’ ಬಗ್ಗೆ ಸ್ಟಾರ್ ನಟನ ಅಸಮಾಧಾನ
ದಿ ಕೇರಳ ಸ್ಟೋರಿ ಪೋಸ್ಟರ್
Follow us on

‘ದಿ ಕೇರಳ ಸ್ಟೋರಿ’ ಸಿನಿಮಾ (The Kerala Story Movie) ಎಲ್ಲ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಈಗಾಗಲೇ ಬಾಕ್ಸ್ ಆಫೀಸ್​​ನಲ್ಲಿ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸುಪ್ರೀಂಕೋರ್ಟ್ ಆದೇಶದ ನಡುವೆಯೂ ಕೆಲ ರಾಜ್ಯಗಳಲ್ಲಿ ಈ ಸಿನಿಮಾ ಮೇಲಿನ ಬ್ಯಾನ್ ಮುಂದುವರಿದಿದೆ. ಈ ಎಲ್ಲಾ ಬೆಳವಣಿಗೆ ಬಗ್ಗೆ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಅವರು ಮಾತನಾಡಿದ್ದಾರೆ. ಈ ಸಿನಿಮಾ ವಿಚಾರದಲ್ಲಿ ಅವರು ತಮ್ಮ ಅಭಿಪ್ರಾಯ ಏನು ಎಂಬುದನ್ನು ತಿಳಿಸಿದ್ದಾರೆ.

‘ನೀವು ಸಿನಿಮಾ ಒಪ್ಪಿಕೊಳ್ಳುತ್ತೀರೋ ಅಥವಾ ಇಲ್ಲವೋ, ಸಿನಿಮಾ ನಿಷೇಧ ಮಾಡುವುದು ತಪ್ಪು’ ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಟ್ವೀಟ್ ಮಾಡಿದ್ದರು. ಈ ಬಗ್ಗೆ ನವಾಜುದ್ದೀನ್​ಗೆ ಪ್ರಶ್ನೆ ಮಾಡಲಾಯಿತು. ಅನುರಾಗ್ ಕಶ್ಯಪ್ ಅವರು ಆಲೋಚನೆಯನ್ನು ಅವರು ಒಪ್ಪಿದ್ದಾರೆ. ಆದರೆ, ಸಿನಿಮಾ ಅಥವಾ ಕಾದಂಬರಿ ಯಾರನ್ನಾದರೂ ನೋಯಿಸಿದರೆ ಅದು ತಪ್ಪು ಎಂದಿದ್ದಾರೆ. ‘ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆ ತರಲು ನಾವು ಸಿನಿಮಾ ಮಾಡುವುದಿಲ್ಲ’ ಎಂದು ನವಾಜುದ್ದೀನ್ ಸಿದ್ದಿಕಿ ಹೇಳಿದ್ದಾರೆ.

‘ಸಿನಿಮಾ ಯಾವಾಗಲೂ ಜನರಲ್ಲಿ ಸಾಮಾಜಿಕ ಸೌಹಾರ್ದತೆ ಮತ್ತು ಪ್ರೀತಿಯನ್ನು ಬೆಳೆಸಬೇಕು. ಅದನ್ನು ಪ್ರಚಾರ ಮಾಡುವುದು ನಮ್ಮ ಜವಾಬ್ದಾರಿ. ಒಂದು ಚಿತ್ರಕ್ಕೆ ಸಾಮಾಜಿಕ ಸಾಮರಸ್ಯವನ್ನು ಒಡೆಯುವ ಶಕ್ತಿ ಇದ್ದರೆ ಅದು ತಪ್ಪು. ನಾವು ಜಗತ್ತನ್ನು ಒಂದುಗೂಡಿಸಬೇಕೇ ಹೊರತು ವಿಭಜಿಸಬಾರದು’ ಎಂದು ನವಾಜುದ್ದೀನ್ ಸಿದ್ದಿಕಿ ಹೇಳಿದ್ದಾರೆ. ಈ ಮೂಲಕ ‘ದಿ ಕೇರಳ ಸ್ಟೋರಿ’ ಸಿನಿಮಾ ಬಗ್ಗೆ ಅವರು ಅಪಸ್ವರ ತೆಗೆದಿದ್ದಾರೆ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ ಫೋನ್​ ನಂಬರ್​ ಲೀಕ್​; ಕಿರುಕುಳ ನೀಡಿದ ಸೈಬರ್​ ಕಿಡಿಗೇಡಿ

‘ದಿ ಕೇರಳ ಸ್ಟೋರಿ’ ಸಿನಿಮಾಗೆ ಸುದೀಪ್ತೋ ಸೇನ್ ನಿರ್ದೇಶನ ಇದೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ವಾರ ಚಿತ್ರದ ಗಳಿಕೆಯಲ್ಲಿ ಕೊಂಚ ಇಳಿಕೆ ಕಂಡಿದ್ದು, ಸಿನಿಮಾ 250 ಕೋಟಿ ರೂಪಾಯಿ ಮಾಡೋದು ಅನುಮಾನ ಎನ್ನಲಾಗುತ್ತಿದೆ. ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ವಿಪುಲ್ ಶಾ ಬಂಡವಾಳ ಹೂಡಿದ್ದಾರೆ. ಕೇರಳದಲ್ಲಿ ನಡೆದಿದೆ ಎನ್ನಲಾದ ಮತಾಂತರದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ