AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karan Johar: ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಕರಣ್​ ಜೋಹರ್​; ವಿಶೇಷ ವಿಡಿಯೋ ಮೂಲಕ ಸಂಭ್ರಮ

Rocky Aur Rani Ki Prem Kahani: ಮೇ 25ರಂದು ಕರಣ್​ ಜೋಹರ್​ ಅವರ ಬರ್ತ್​ಡೇ. ಆ ಪ್ರಯುಕ್ತ ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆ ಮಾಡಲಿದ್ದಾರೆ.

Karan Johar: ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಕರಣ್​ ಜೋಹರ್​; ವಿಶೇಷ ವಿಡಿಯೋ ಮೂಲಕ ಸಂಭ್ರಮ
ಕರಣ್ ಜೋಹರ್
ಮದನ್​ ಕುಮಾರ್​
|

Updated on: May 24, 2023 | 9:56 PM

Share

ಹಿಂದಿ ಚಿತ್ರರಂಗದಲ್ಲಿ ಕರಣ್​ ಜೋಹರ್​ (Karan Johar) ಅವರು ಪ್ರಭಾವಿ ವ್ಯಕ್ತಿಯಾಗಿ ಬೆಳೆದು ನಿಂತಿದ್ದಾರೆ. ನಿರ್ದೇಶಕನಾಗಿ, ನಿರ್ಮಾಪಕನಾಗಿ ಹಾಗೂ ನಿರೂಪಕನಾಗಿ ಅವರು ಫೇಮಸ್​ ಆಗಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿರುವ ಅವರು ಅನೇಕರಿಗೆ ಅವಕಾಶ ನೀಡಿದ್ದಾರೆ. ಅವರ ಮೇಲೆ ಇರುವ ಆರೋಪಗಳು ಕೂಡ ಹಲವು. ನೆಪೋಟಿಸಂ ಕಾರಣಕ್ಕೆ ಅವರು ಆಗಾಗ ಟೀಕೆಗೆ ಒಳಗಾಗುತ್ತಾರೆ. ಕರಣ್​ ಜೋಹರ್​ ಅವರು ಬಾಲಿವುಡ್​ನಲ್ಲಿ (Bollywood) ನಿರ್ದೇಶಕನಾಗಿ 25 ವರ್ಷಗಳನ್ನು ಪೂರೈಸಿದ್ದಾರೆ. ಆ ಖುಷಿಯನ್ನು ಒಂದು ವಿಶೇಷವಾದ ವಿಡಿಯೋ ಮೂಲಕ ಅವರು ಸಂಭ್ರಮಿಸಿದ್ದಾರೆ. ತಮಗೆ ಆಪ್ತವಾದ ಎಲ್ಲ ಸಿನಿಮಾಗಳ ದೃಶ್ಯ ತುಣುಕುಗಳು ಮತ್ತು ಮೇಕಿಂಗ್​ ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ. ಪ್ರಸ್ತುತ ಅವರು ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ (Rocky Aur Rani Ki Prem Kahani) ಸಿನಿಮಾದ ಬಿಡುಗಡೆಯ ತಯಾರಿಯಲ್ಲಿ ಇದ್ದಾರೆ.

ಮೇ 25ರಂದು ಕರಣ್​ ಜೋಹರ್​ ಅವರ ಬರ್ತ್​ಡೇ. ಆ ಪ್ರಯುಕ್ತ ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆ ಮಾಡಲಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. ಇದರಲ್ಲಿ ಅಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ಜೋಡಿಯಾಗಿ ನಟಿಸಿದ್ದಾರೆ. ಜುಲೈ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

View this post on Instagram

A post shared by Karan Johar (@karanjohar)

‘ಪ್ರೀತಿಯ ಜೊತೆ ಸಂಘರ್ಷಗಳು ಮತ್ತು ಸವಾಲುಗಳು ಕೂಡ ಇರುತ್ತವೆ. ಆದರೆ ಇದು ವಿಶ್ವದ ಅತ್ಯಂತ ಸುಂದರವಾದ ಭಾವನೆ. ನಾನು ಫಿಲ್ಮ್​ ಮೇಕರ್​ ಆಗಿ 25 ವರ್ಷಗಳ ನನ್ನ ಪ್ರಯಾಣವನ್ನು ಹಿಂತಿರುಗಿ ನೋಡಿದಾಗ, ನಾನು ಸಾಕಷ್ಟು ವಿಚಾರಗಳಿಗೆ ಕೃತಜ್ಞನಾಗಿದ್ದೇನೆ. ನನ್ನೊಳಗೆ ಪ್ರತಿಧ್ವನಿಸಿದ ಪ್ರೀತಿ, ಸ್ನೇಹ ಮತ್ತು ಕುಟುಂಬದ ಕಥೆಗಳನ್ನು ಹಂಚಿಕೊಳ್ಳುವ ಸಣ್ಣ ಪ್ರಯತ್ನವಾಗಿ ನನ್ನ ಸಿನಿಮಾ ಪಯಣ ಪ್ರಾರಂಭವಾಯಿತು’ ಎಂದು ತಮ್ಮ ಜರ್ನಿಯನ್ನು ಕರಣ್​ ಜೋಹರ್​ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: ತಬ್ಬಿಕೊಂಡು ರಾಜಿಯಾದ ಪ್ರಿಯಾಂಕಾ-ಕರಣ್​ ಜೋಹರ್​; ಮಧ್ಯ ಮಾತಾಡಿ ನಿಷ್ಠುರವಾಗಿದ್ದು ಕಂಗನಾ

ಕರಣ್​ ಜೋಹರ್​ ಅವರಿಗೆ ಬಾಲಿವುಡ್​ನಲ್ಲಿ ಅನೇಕರ ಜೊತೆ ಆಪ್ತತೆ ಇದೆ. ಶಾರುಖ್​ ಖಾನ್​, ಕಾಜೋಲ್​, ದೀಪಿಕಾ ಪಡುಕೋಣೆ, ಸಲ್ಮಾನ್​ ಖಾನ್​, ರಾಣಿ ಮುಖರ್ಜಿ ಮುಂತಾದವರ ಕುಟುಂಬಗಳಿಗೆ ಕರಣ್​ ಜೋಹರ್​ ಆಪ್ತರಾಗಿದ್ದಾರೆ. ‘ಕಾಫಿ ವಿತ್​ ಕರಣ್​’ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ವಿವಾದಗಳ ಕಾರಣಕ್ಕೂ ಈ ಕಾರ್ಯಕ್ರಮ ಸುದ್ದಿ ಆಗುತ್ತದೆ. ಕರಣ್​ ಜೋಹರ್​ ಜೊತೆಗಿನ ಸ್ನೇಹಕ್ಕಾಗಿಯೇ ಅನೇಕ ಸೆಲೆಬ್ರಿಟಿಗಳು ಈ ಶೋನಲ್ಲಿ ಭಾಗಿ ಆಗುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್