ಬಾಲಿವುಡ್ನಲ್ಲಿ ನಟ ರಾಜ್ಪಾಲ್ (Rajpal Yadav) ಯಾದವ್ ಅವರು ಬಹುಬೇಡಿಕೆಯ ಕಾಮಿಡಿಯನ್ ಆಗಿ ಗುರುತಿಸಿಕೊಂಡಿದ್ದಾರೆ. ಅವರ ಹಾಸ್ಯಕ್ಕೆ ನಗದೇ ಇರುವ ಪ್ರೇಕ್ಷಕರೇ ಇಲ್ಲ. ಹಲವಾರು ಸಿನಿಮಾಗಳಲ್ಲಿ ಕಾಮಿಡಿ ಪಾತ್ರ ಮಾಡುವ ಮೂಲಕ ರಾಜ್ಪಾಲ್ ಯಾದವ್ ಅವರು ಮನರಂಜನೆ ನೀಡಿದ್ದಾರೆ. ಅನೇಕ ಸ್ಟಾರ್ ಕಲಾವಿದರ ಜೊತೆ ಅವರು ತೆರೆಹಂಚಿಕೊಂಡಿದ್ದಾರೆ. 2006ರಲ್ಲಿ ತೆರೆಕಂಡ ‘ಚುಪ್ ಚುಪ್ ಕೆ’ (Chup Chup Ke) ಸಿನಿಮಾವನ್ನು ಪ್ರೇಕ್ಷಕರು ಈಗಲೂ ನೋಡಿ ಎಂಜಾಯ್ ಮಾಡುತ್ತಾರೆ. ಅಷ್ಟರಮಟ್ಟಿಗೆ ಹಾಸ್ಯಮಯವಾಗಿ ಮೂಡಿಬಂದಿತ್ತು ರಾಜ್ಪಾಲ್ ಯಾದವ್ ಅವರ ಪಾತ್ರ. ಅಚ್ಚರಿ ಎಂದರೆ ಈ ಚಿತ್ರದ ಶೂಟಿಂಗ್ ಶುರುವಾಗುವುದಕ್ಕೂ ಮುನ್ನ ಅವರು ಬರೋಬ್ಬರಿ 26 ಸಾವಿರ ರೂಪಾಯಿ ನೀಡಿ ಹೇರ್ಕಟ್ (Haircut) ಮಾಡಿಸಿಕೊಂಡಿದ್ದರು!
ಆಲಿಮ್ ಹಕೀಂ ಅವರು ಮುಂಬೈನಲ್ಲಿ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಗಿ ಫೇಮಸ್. ಯಶ್ ಕೂಡ ಅವರ ಬಳಿ ಹೇರ್ ಕಟ್ ಮಾಡಿಸಿಕೊಂಡು ಸುದ್ದಿ ಆಗಿದ್ದರು. ಹಲವು ವರ್ಷಗಳ ಹಿಂದೆ ರಾಜ್ಪಾಲ್ ಯಾದವ್ ಅವರು ಆಲಿಮ್ ಹಕೀಂ ಅವರ ಸಲೂನ್ಗೆ ಭೇಟಿ ನೀಡಿದ್ದರು. 26 ಸಾವಿರ ರೂಪಾಯಿ ನೀಡಿ ಅವರು ಸ್ಟೈಲಿಶ್ ಆಗಿ ಹೇರ್ಕಟ್ ಮಾಡಿಸಿದ್ದರು. ಆ ಸಂದರ್ಭದಲ್ಲಿ ‘ಚುಪ್ ಚುಪ್ ಕೆ’ ಸಿನಿಮಾದಲ್ಲಿ ನಟಿಸುವ ಆಫರ್ ಬಂತು. ಕೂಡಲೇ ನಿರ್ದೇಶಕ ಪ್ರಿಯದರ್ಶನ್ ಅವರನ್ನು ಭೇಟಿ ಮಾಡಲು ರಾಜ್ಪಾಲ್ ಯಾದವ್ ತೆರಳಿದರು. ಆದರೆ ಅಲ್ಲಿ ಆಗಿದ್ದೇ ಬೇರೆ.
ಇದನ್ನೂ ಓದಿ: ಕಾಮಿಡಿ ಕಿಲಾಡಿಗಳ ‘ಆನ್ಲೈನ್ ಮದುವೆ, ಆಫ್ಲೈನ್ ಶೋಭನ’
‘ಶೂಟಿಂಗ್ಗಾಗಿ ನಾನು ಗೋವಾಗೆ ತೆರಳಿದೆ. ನನ್ನ ಹೇರ್ಕಟ್ ಬಗ್ಗೆ ನನಗೆ ಬಹಳ ಆತ್ಮವಿಶ್ವಾಸ ಇತ್ತು. ಆದರೆ ನಿರ್ದೇಶಕ ಪ್ರಿಯದರ್ಶನ್ ಅವರಿಗೆ ಅದು ಕಿಂಚಿತ್ತೂ ಇಷ್ಟ ಆಗಲಿಲ್ಲ. ಸಹಾಯಕರನ್ನು ಕರೆದು ನನ್ನ ಕೂದಲು ಕಟ್ ಮಾಡಿಸಿದರು’ ಎಂದಿದ್ದಾರೆ ರಾಜ್ಪಾಲ್ ಯಾದವ್. ಅಲ್ಲಿಗೆ ಆಲಿಮ್ ಹಕೀಂ ಮಾಡಿದ್ದ ಹೇರ್ ಕಟ್ ಪೂರ್ತಿ ನೀರಲ್ಲಿ ಹೋಮ ಮಾಡಿದಂತೆ ಆಯಿತು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ
‘ಚುಪ್ ಚುಪ್ ಕೆ’ ಸಿನಿಮಾದಲ್ಲಿ ರಾಜ್ಪಾಲ್ ಯಾದವ್ ಅವರನ್ನು ನೋಡಿದ ಬಳಿಕ ಆಲಿಮ್ ಹಕೀಂ ಅವರಿಗೆ ಶಾಕ್ ಆಯಿತು. ಹಾಗಾಗಿ ಅವರು 26 ಸಾವಿರ ರೂಪಾಯಿ ತೆಗೆದುಕೊಳ್ಳಲು ನಿರಾಕರಿಸಿದರು. ರಾಜ್ಪಾಲ್ ಯಾದವ್ ಅವರು ಅನೇಕ ಬಾರಿ ಒತ್ತಾಯಿಸಿದರೂ ಕೂಡ ಆಲಿಮ್ ಹಕೀಂ ಅವರು ಹಣ ಪಡೆದುಕೊಳ್ಳಲಿಲ್ಲ. ಆ ಫನ್ನಿ ಘಟನೆಯನ್ನು ರಾಜ್ಪಾಲ್ ಯಾವದ್ ಅವರು ನೆನಪಿಸಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.