ಐಶ್ವರ್ಯಾ ಕೋರಿಕೆ ಮೇರೆಗೆ ‘ವಿಚ್ಛೇದನ’ ಪೋಸ್ಟ್​ನ ಲೈಕ್ ಮಾಡಿದ್ದ ಅಭಿಷೇಕ್

ಇತ್ತೀಚೆಗೆ ಹೀನಾ ಖಂಡೇವಾಲ ಅವರು ವಿಚ್ಛೇದನದ ಬಗ್ಗೆ ಲೇಖನ ಬರೆದಿದ್ದರು. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಈ ಪೋಸ್ಟ್​ನ ಐಶ್ವರ್ಯಾ ರೈ ಬಚ್ಚನ್ ಅವರು ಲೈಕ್ ಮಾಡಿದ್ದರು. ಇವರು ವಿಚ್ಛೇದನ ಪಡೆಯುತ್ತಿರುವುದರಿಂದಲೇ ಈ ರೀತಿಯಲ್ಲಿ ಲೈಕ್ ಒತ್ತಿದ್ದಾರೆ ಎಂದು ಅನೇಕರು ಮಾತನಾಡಿಕೊಂಡಿದ್ದರು.

ಐಶ್ವರ್ಯಾ ಕೋರಿಕೆ ಮೇರೆಗೆ ‘ವಿಚ್ಛೇದನ’ ಪೋಸ್ಟ್​ನ ಲೈಕ್ ಮಾಡಿದ್ದ ಅಭಿಷೇಕ್
ಐಶ್ವರ್ಯಾ ಕೋರಿಕೆ ಮೇರೆಗೆ ‘ವಿಚ್ಛೇದನ’ ಪೋಸ್ಟ್​ನ ಲೈಕ್ ಮಾಡಿದ್ದ ಅಭಿಷೇಕ್

Updated on: Jul 23, 2024 | 9:34 AM

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಮದುವೆಗೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಬೇರೆ ಬೇರೆ ಆಗಿ ಬಂದಾಗಿನಿಂದಲೂ ಇವರ ವಿಚ್ಛೇದನ ವಿಚಾರ ಚರ್ಚೆಯಲ್ಲಿ ಇದೆ. ಹೀಗಿರುವಾಗಲೇ ಅಭಿಷೇಕ್ ಬಚ್ಚನ್ ಅವರು ‘ವಿಚ್ಛೇದನ ಯಾರಿಗೂ ಸುಲಭವಲ್ಲ’ ಎನ್ನುವ ಪೋಸ್ಟ್​ನ ಲೈಕ್ ಮಾಡಿದ್ದರು. ಇದು ಸಾಕಷ್ಟು ಚರ್ಚೆ ಆಗಿತ್ತು. ವಿಚ್ಛೇದನ ವಿಚಾರ ಚರ್ಚೆಯಲ್ಲಿರುವುದಕ್ಕೂ ಅಭಿಷೇಕ್ ಈ ಫೋಟೋ ಲೈಕ್ ಮಾಡಿರುವದಕ್ಕೂ ನಂಟು ಕಲ್ಪಿಸಲಾಗಿತ್ತು. ಇದಕ್ಕೆ ಕಾರಣ ರಿವೀಲ್ ಆಗಿದೆ.

ಇತ್ತೀಚೆಗೆ ಹೀನಾ ಖಂಡೇವಾಲ ಅವರು ಲೇಖನ ಒಂದನ್ನು ಬರೆದಿದ್ದರು. ಈ ಲೇಖನ ವಿಚ್ಛೇದನದ ಬಗ್ಗೆ ಇತ್ತು. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಈ ಪೋಸ್ಟ್​ನ ಐಶ್ವರ್ಯಾ ರೈ ಬಚ್ಚನ್ ಅವರು ಲೈಕ್ ಮಾಡಿದ್ದರು. ಇವರು ವಿಚ್ಛೇದನ ಪಡೆಯುತ್ತಿರುವುದರಿಂದಲೇ ಈ ರೀತಿಯಲ್ಲಿ ಲೈಕ್ ಒತ್ತಿದ್ದಾರೆ ಎಂದು ಅನೇಕರು ಮಾತನಾಡಿಕೊಂಡಿದ್ದರು. ಆದರೆ, ಅಸಲಿ ವಿಚಾರ ಬೇರೆಯದೇ ಇದೆ. ಐಶ್ವರ್ಯಾ ಅವರ ಫ್ರೆಂಡ್ ಝೈರತ್ ಮಾರ್ಕರ್ ಅವರು ಈ ಆರ್ಟಿಕಲ್​ಗೆ ಕೊಡುಗೆ ನೀಡಿದ್ದಾರೆ. ಪತ್ನಿಯ ಗೆಳೆಯನಿಗೆ ಸಹಾಯ ಆಗಲಿ ಎನ್ನುವ ಕಾರಣಕ್ಕೆ ಅವರು ಲೈಕ್ ಒತ್ತಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ‘ಪತ್ನಿಗೆ ಸಹಾಯ ಆಗಲಿ ಎಂದು ಅಭಿಷೇಕ್ ಬಚ್ಚನ್ ಪೋಸ್ಟ್​ಗೆ ಲೈಕ್ ಒತ್ತಿದ್ದಾರೆ. ಆದರೆ, ಇದನ್ನು ಬೇರೆ ರೀತಿಯೇ ಬಣ್ಣಿಸಲಾಗಿದೆ. ಈಗ ಟ್ವಿಸ್ಟ್ ಹೇಗಿದೆ’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ನಡೆಯುತ್ತಿದೆ.

ತಮ್ಮ ಪೋಸ್ಟ್ ಈ ರೀತಿಯಲ್ಲಿ ವೈರಲ್ ಆಗಿರುವುದಕ್ಕೆ ಹೀನಾ ಖಂಡೇವಾಲ ಅವರು ಅಸಮಾಧಾನ ಹೊರಹಾಕಿದ್ದಾರೆ. ‘ನನಗೆ ಆ ವ್ಯಕ್ತಿ (ಅಭಿಷೇಕ್ ಬಚ್ಚನ್) ಜೊತೆ ಅಷ್ಟಾಗಿ ಪರಿಚಯ ಇಲ್ಲ. ಆದರೆ, ಒಂದು ಲೈಕ್ ಎಲ್ಲವನ್ನೂ ಬದಲಿಸಿತು. ಅವರಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ನನ್ನ ಅಗತ್ಯ ಇಲ್ಲ. ಆದರೆ, ನನ್ನ ಪೋಸ್ಟ್ ಈ ರೀತಿಯಲ್ಲಿ ಹೈಲೈಟ್ ಆಯಿತಲ್ಲ ಎನ್ನುವ ಬೇಸರ ನನಗೆ ಇದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಉಚಿತ ಟೀ, ಸಮೋಸಾ ಕೊಡ್ತೀವಿ, ಸಿನಿಮಾ ನೋಡೋಕೆ ಬನ್ನಿ’: ಅಕ್ಷಯ್​ ಕುಮಾರ್​ ಚಿತ್ರಕ್ಕೆ ಹೀನಾಯ ಸ್ಥಿತಿ

‘ಈ ಫೋಟೋಗೆ ಸಾಲಕಷ್ಟು ಲೈಕ್ಸ್​ಗಳು ಸಿಕ್ಕಿವೆ. ಈ ಫೋಟೋನ ಲೈಕ್ ಮಾಡದೆ ಇದ್ದವರು ಕೂಡ ನನ್ನ ಬಳಿ ಬಂದು ಲೇಖನದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ’ ಎಂದು ಹೀನಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us