ಮತ್ತೆ ರಿಲೀಸ್ ಆದ ‘ಜಿಂದಗಿ ನ ಮಿಲೇಗಿ ದುಬಾರಾ’ ಸಿನಿಮಾ

ಜೋಯಾ ಅಖ್ತರ್ ಅವರು 2009ರಲ್ಲಿ ‘ಲಕ್ ಬೈ ಚಾನ್ಸ್’ ಸಿನಿಮಾ ಮೂಲಕ ನಿರ್ದೇಶನಕ್ಕೆ ಇಳಿದರು. ಫರ್ಹಾನ್ ಅಖ್ತರ್, ಕೊಂಕಣ್ ಸೇನ್ ಶರ್ಮಾ ಇದರಲ್ಲಿ ನಟಿಸಿದ್ದರು. ಈ ಸಿನಿಮಾದ ಬಳಿಕ ಅವರು ‘ಜಿಂದಗಿ ನ ಮಿಲೇಗಿ ದುಬಾರಾ’ ಸಿನಿಮಾ ಮೂಲಕ ಗಮನ ಸಳೆದರು.

 ಮತ್ತೆ ರಿಲೀಸ್ ಆದ ‘ಜಿಂದಗಿ ನ ಮಿಲೇಗಿ ದುಬಾರಾ’ ಸಿನಿಮಾ
ಜಿಂದಗಿ ನಾ ಮಿಲೇಗಿ ದೋಬಾರ

Updated on: Jun 07, 2024 | 2:27 PM

ಇತ್ತೀಚೆಗೆ ಕನ್ನಡದಲ್ಲಿ ಹಲವು ಸಿನಿಮಾಗಳು ರೀ-ರಿಲೀಸ್ ಆಗಿವೆ. ಈಗ ಹಿಂದಿ ಚಿತ್ರರಂಗದ ಸರದಿ. ಪಿವಿಆರ್​​ ಐನಾಕ್ಸ್ ಸಿನಿಮಾಸ್​  ಕಡೆಯಿಂದ ‘ಜಿಂದಿಗಿ ನ ಮಿಲೇಗಿ ದುಬಾರಾ’ (Zindagi Na Milegi Dobara) ಸಿನಿಮಾ ರೀ-ರಿಲೀಸ್ ಮಾಡುವ ಘೋಷಣೆ ಆಗಿದೆ. ಈ ಚಿತ್ರ ರಿಲೀಸ್ ಆಗಿ 13 ವರ್ಷಗಳು ಕಳೆಯುತ್ತಾ ಬಂದಿವೆ. ಈ ಚಿತ್ರದ ನಿರ್ದೇಶಕಿ ಜೋಯಾ ಅಖ್ತರ್ ಸಿನಿ ಜರ್ನಿಗೆ 15 ವರ್ಷ. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಸಿನಿಮಾ ರಿಲೀಸ್ ಮಾಡಲಾಗಿದೆ. ಇದರ ಜೊತೆಗೆ ಜೋಯಾ ಅಖ್ತರ್ ಅವರ ನಿರ್ದೇಶನದ ಇತರ ಸಿನಿಮಾಗಳು ರಿಲೀಸ್ ಆಗಿವೆ.

ಜೋಯಾ ಅಖ್ತರ್ ಅವರು 2009ರಲ್ಲಿ ‘ಲಕ್ ಬೈ ಚಾನ್ಸ್’ ಸಿನಿಮಾ ಮೂಲಕ ನಿರ್ದೇಶನಕ್ಕೆ ಇಳಿದರು. ಫರ್ಹಾನ್ ಅಖ್ತರ್, ಕೊಂಕಣ್ ಸೇನ್ ಶರ್ಮಾ ಇದರಲ್ಲಿ ನಟಿಸಿದ್ದರು. ಈ ಸಿನಿಮಾದ ಬಳಿಕ ಅವರು ‘ಜಿಂದಗಿ ನ ಮಿಲೇಗಿ ದುಬಾರಾ’ ಸಿನಿಮಾ ಮೂಲಕ ಗಮನ ಸಳೆದರು. ಅಲ್ಲಿಂದ ಇಲ್ಲಿಯವರೆಗೆ ಜೋಯಾ ಅವರು ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

‘ಜಿಂದಗಿ ನ ಮಿಲೇಗಿ ದುಬಾರಾ’ ಸಿನಿಮಾದಲ್ಲಿ ಹೃತಿಕ್ ರೋಷನ್, ಕತ್ರಿನಾ ಕೈಫ್, ಫರ್ಹಾನ್ ಅಖ್ತರ್, ಅಭಯ್ ಡಿಯೋಲ್, ಕಲ್ಕಿ ಕೋಕ್ಲಿನ್ ಸೇರಿ ಅನೇಕರು ನಟಿಸಿದ್ದರು. ಜೀವನದ ಜರ್ನಿ ಬಗ್ಗೆ ಈ ಚಿತ್ರ ಇತ್ತು. ಹಾಸ್ಯ, ಮೋಜು ಮಸ್ತಿಯಲ್ಲಿ ಸಾಗುವ ಸಿನಿಮಾದ ಕಥೆ ಅಭಿಮಾನಿಗಳಿಗೆ ಸಖತ್ ಇಷ್ಟ ಆಗಿತ್ತು.

ಇದನ್ನೂ ಓದಿ: ಕ್ಷಣಾರ್ಧದಲ್ಲಿ ನೆಲಕ್ಕುರುಳಿತು ಬೃಹತ್​ ವೇದಿಕೆ: ಫರ್ಹಾನ್​ ಅಖ್ತರ್​ ಸಂಗೀತ ಕಾರ್ಯಕ್ರಮ ರದ್ದು

ಬೆಂಗಳೂರಿನಲ್ಲಿ ಕೋರಮಂಗಲ, ಮೈಸೂರು​ ರಸ್ತೆ ಹಾಗೂ ಡೈರೆಕ್ಟರ್ಸ್ ಕಟ್ ಫೋರಂ ರೆಕ್ಸ್ ವಾಕ್​ನಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ.  ಇವುಗಳ ಜೊತೆಗೆ ‘ತಲಾಶ್’, ‘ಗಲ್ಲಿಬಾಯ್’, ‘ದಿಲ್ ದಡಕ್​ನೇದೋ’ ಸಿನಿಮಾಗಳು ಕೂಡ ಪಿವಿಆರ್​ನಲ್ಲಿ ಪ್ರದರ್ಶನ ಕಾಣಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:05 am, Fri, 7 June 24

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us