ಕರೀನಾ ಕಪೂರ್​ ಸೀತೆ ಪಾತ್ರ ಮಾಡುವಂತಿಲ್ಲ; ಇದಕ್ಕೂ ಸೈಫ್​ ಅಲಿ ಖಾನ್​ಗೂ ಏನು ಸಂಬಂಧ?

Kareena Kapoor Khan: ಮುಸ್ಲಿಂ ವ್ಯಕ್ತಿಯ ಜೊತೆ ಮದುವೆ ಆಗಿರುವ ಕರೀನಾ ಕಪೂರ್​ ಖಾನ್ ಅವರು ಸೀತೆ ಪಾತ್ರ ಮಾಡಿದರೆ ಹಿಂದುಗಳ ಭಾವನೆಗೆ ಧಕ್ಕೆ ಆಗುತ್ತದೆ ಎಂದು ಹಲವರು ಟ್ವಿಟರ್​ನಲ್ಲಿ ವಾದ ಮಂಡಿಸಿದ್ದಾರೆ.

ಕರೀನಾ ಕಪೂರ್​ ಸೀತೆ ಪಾತ್ರ ಮಾಡುವಂತಿಲ್ಲ; ಇದಕ್ಕೂ ಸೈಫ್​ ಅಲಿ ಖಾನ್​ಗೂ ಏನು ಸಂಬಂಧ?
ಕರೀನಾ ಕಪೂರ್​ ಖಾನ್​
Edited By:

Updated on: Jun 12, 2021 | 4:27 PM

ನಟಿ ಕರೀನಾ ಕಪೂರ್​ ಖಾನ್ ಅನೇಕರಿಂದ ವಿರೋಧ ಎದುರಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಒಂದು ವರ್ಗದ ಜನರು ಕರೀನಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಾಮಾಯಣದ ಸೀತೆಯ ಪಾತ್ರವನ್ನು ಕರೀನಾ ಮಾಡಲಿದ್ದಾರೆ ಎಂಬ ಗಾಳಿಸುದ್ದಿಯೇ ಇಷ್ಟಕ್ಕೆಲ್ಲ ಕಾರಣ. ಈ ವಿವಾದದಲ್ಲಿ ಅವರ ಪತಿ ಸೈಫ್​ ಅಲಿ ಖಾನ್​ ಮತ್ತು ಪುತ್ರ ತೈಮೂರ್​ ಅಲಿ ಖಾನ್​ ಹೆಸರುಗಳನ್ನೂ ಎಳೆದು ತರಲಾಗಿದೆ. #BoycottKareenaKhan ಎಂದು ನೂರಾರು ಮಂದಿ ಟ್ವೀಟ್​ ಮಾಡುತ್ತಿದ್ದಾರೆ.

ಬಾಲಿವುಡ್​ನಲ್ಲಿ ರಾಮಾಯಣ ಆಧರಿಸಿ ಒಂದು ಬಿಗ್​ ಬಜೆಟ್​ ಸಿನಿಮಾ ಮಾಡಲು ತಯಾರಿ ನಡೆದಿದೆ. ‘ದಂಗಲ್​’ ಖ್ಯಾತಿಯ ನಿತೇಶ್​ ತಿವಾರಿ ಅವರು ಆ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಆದರೆ ಮುಖ್ಯ ಪಾತ್ರಗಳಲ್ಲಿ ಯಾರು ನಟಿಸುತ್ತಾರೆ ಎಂಬುದು ಇನ್ನೂ ನಿರ್ಧಾರ ಆಗಿಲ್ಲ. ಅಷ್ಟರಲ್ಲಾಗಲೇ ಅನೇಕ ನಟ-ನಟಿಯರ ಹೆಸರುಗಳು ಹರಿದಾಡುತ್ತಿವೆ. ಸೀತೆ ಪಾತ್ರಕ್ಕೆ ಕರೀನಾ ಕಪೂರ್​ ಆಯ್ಕೆ ಆಗುವ ಸಾಧ್ಯತೆ ಇದೆ ಎಂಬ ಗಾಸಿಪ್​ ಇತ್ತೀಚೆಗೆ ಕೇಳಿಬಂದಿತ್ತು.

ಹರಿದಾಡಿದ ಸುದ್ದಿ ನಿಜವೋ ಸುಳ್ಳೋ ಎಂಬುದನ್ನು ಖಚಿತ ಮಾಡಿಕೊಳ್ಳುವ ಮೊದಲೇ ಅನೇಕರು ಕರೀನಾ ಕಪೂರ್​ ಖಾನ್​ ವಿರುದ್ಧ ಹರಿಹಾಯುತ್ತಿದ್ದಾರೆ. ಮುಸ್ಲಿಂ ವ್ಯಕ್ತಿಯ ಜೊತೆ ಮದುವೆ ಆಗಿರುವ ಅವರು ಸೀತೆ ಪಾತ್ರ ಮಾಡಿದರೆ ಹಿಂದುಗಳ ಭಾವನೆಗೆ ಧಕ್ಕೆ ಆಗುತ್ತದೆ ಎಂದು ಹಲವರು ಟ್ವಿಟರ್​ನಲ್ಲಿ ವಾದ ಮಂಡಿಸಿದ್ದಾರೆ. ‘ಸೈಫ್​ ಅಲಿ ಖಾನ್​ ನಟನೆಯ ತಾಂಡವ್​ ವೆಬ್​ ಸರಣಿಯಲ್ಲಿ ಹಿಂದುಗಳಿಗೆ ಅವಮಾನ ಮಾಡುವಂತಹ ದೃಶ್ಯ ಇತ್ತು. ಈಗ ಕರೀನಾ ಕೈಯಿಂದಲೂ ಅದನ್ನೇ ಮಾಡಿಸುವುದು ಬೇಡ’ ಎಂದು ಕೆಲವರು ಕಿಡಿಕಾರಿದ್ದಾರೆ.

‘ಹಿಂದುತ್ವದ ಮೇಲೆ ನಂಬಿಕೆ ಇಲ್ಲದ ಯಾವುದೇ ನಟಿಯೂ ಸೀತೆಯ ಪಾತ್ರವನ್ನು ಮಾಡುವಂತಿಲ್ಲ. ಬಾಲಿವುಡ್​ನ ಫಿಲ್ಮ್​ ಮಾಫಿಯಾವು ಹಿಂದು ಧರ್ಮಕ್ಕೆ ವಿಷ ಹರಡುತ್ತದೆ. ಈ ರೀತಿ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಎಲ್ಲ ನಟ-ನಟಿಯರನ್ನು ನಾವು ಬಹಿಷ್ಕರಿಸಬೇಕು’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ.

ಈ ಪಾತ್ರಕ್ಕಾಗಿ ಕರೀನಾ 12 ಕೋಟಿ ರೂ. ಸಂಭಾವನೆ ಡಿಮ್ಯಾಂಡ್​ ಮಾಡಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಆದರೆ ಮೂಲಗಳ ಪ್ರಕಾರ, ಕರೀನಾಗೆ ಯಾರೂ ಈ ಪಾತ್ರವನ್ನು ಆಫರ್​ ಮಾಡಿಲ್ಲ. ಸೀತೆ ಪಾತ್ರಕ್ಕೆ ಯಾವುದೇ ಕಾರಣಕ್ಕೂ ಅವರು ಸೂಕ್ತ ಆಗುವುದಿಲ್ಲ ಎಂದು ಚಿತ್ರತಂಡದ ಮೂಲಗಳ ಹೇಳಿರುವ ಬಗ್ಗೆ ಕೆಲವೆಡೆ ವರದಿ ಆಗಿತ್ತು. ಇಷ್ಟೆಲ್ಲ ಅಂಕೆ-ಕಂತೆಗಳು ಹರಿದಾಡುತ್ತಿದ್ದರೂ ಕೂಡ ಕರೀನಾ ಕಪೂರ್​ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಅವರು ಎರಡನೇ ಮಗುವಿನ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ಆಮೀರ್​ ಖಾನ್​ ಜೊತೆ ಅವರು ನಟಿಸಿರುವ ‘ಲಾಲ್​ ಸಿಂಗ್ ಚಡ್ಡಾ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.

ಇದನ್ನೂ ಓದಿ:

ಕರೀನಾ ತೊಟ್ಟ ಮಾಸ್ಕ್​ ಬೆಲೆ ಇಷ್ಟೊಂದಾ? ಐಟಿ ಮಂದಿಯ ವೇತನವೂ ಇಷ್ಟಿರಲ್ಲ ಎಂದ ಫ್ಯಾನ್ಸ್​​

Published On - 3:50 pm, Sat, 12 June 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us