ಕ್ಯಾನ್ಸರ್​ ಪೀಡಿತ ಬಾಲಿವುಡ್​ ನಟಿಗೆ ಮಗನ ಮದುವೆ ಚಿಂತೆ

ಸಿಖಂದರ್ ಖೇರ್ ಬುಧವಾರ (ಜೂ.2) ರಾತ್ರಿ ಇನ್​ಸ್ಟಾಗ್ರಾಂನಲ್ಲಿ ಲೈವ್​ ಬಂದಿದ್ದರು. ಈ ವೇಳೆ ಅವರು ಅಮ್ಮನ ಆರೋಗ್ಯದ ಬಗ್ಗೆ ವಿವರಣೆ ನೀಡಿದ್ದಾರೆ.

ಕ್ಯಾನ್ಸರ್​ ಪೀಡಿತ ಬಾಲಿವುಡ್​ ನಟಿಗೆ ಮಗನ ಮದುವೆ ಚಿಂತೆ
ಕಿರಣ್​-ಸಿಖಂದರ್​
Edited By:

Updated on: Jun 03, 2021 | 5:07 PM

ಬಾಲಿವುಡ್​ ನಟ ಅನುಪಮ್​ ಖೇರ್​ ಅವರ ಪತ್ನಿ, ನಟಿ ಕಿರಣ್​ ಖೇರ್ ರಕ್ತದ ಕ್ಯಾನ್ಸರ್​ನಿಂದ ಬಳುತ್ತಿದ್ದಾರೆ. ಈ ವಿಚಾರವನ್ನು ಅನುಪಮ್​ ಖೇರ್​ ಇತ್ತೀಚೆಗೆ ಹೇಳಿಕೊಂಡಿದ್ದರು. ಈಗ ಅವರ ಮಗ ಸಿಖಂದರ್ ಖೇರ್​ ಇನ್​ಸ್ಟಾಗ್ರಾಂ ಲೈವ್​ನಲ್ಲಿ ಬಂದಿದ್ದು, ಅದರಲ್ಲಿ ಕಿರಣ್​ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಮಗನಿಗೆ ಮದುವೆ ಆಗುವಂತೆ ಮನವಿ ಮಾಡಿದ್ದಾರೆ.

ಸಿಖಂದರ್ ಖೇರ್ ಬುಧವಾರ (ಜೂ.2) ರಾತ್ರಿ ಇನ್​ಸ್ಟಾಗ್ರಾಂನಲ್ಲಿ ಲೈವ್​ ಬಂದಿದ್ದರು. ಈ ವೇಳೆ ಅವರು ಅಮ್ಮನ ಆರೋಗ್ಯದ ಬಗ್ಗೆ ವಿವರಣೆ ನೀಡಿದ್ದಾರೆ. ನನ್ನ ಅಮ್ಮ ಆರೋಗ್ಯವಾಗಿದ್ದಾರೆ. ನಿಮ್ಮ ಹಾರೈಕೆಗೆ ಧನ್ಯವಾದಗಳು ಎಂದಿದ್ದಾರೆ. ಈ ವಿಡಿಯೋದಲ್ಲಿ ಕಿರಣ್​ ಸಾಕಷ್ಟು ಖುಷಿಯಾಗಿದ್ದರು.

ನಿಮ್ಮ ಹಾರೈಕೆಗೆ ಧನ್ಯವಾದಗಳು. ನನ್ನ ತಾಯಿ ಇಲ್ಲಿದ್ದಾರೆ. ನಿಮ್ಮ ಹಾರೈಕೆಯಿಂದ ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಸಿಖಂದರ್. ಈ ವಿಡಿಯೋದಲ್ಲಿ ಅನುಪಮ್​ ಖೇರ್​ ಕೂಡ ಇದ್ದಾರೆ. ಇನ್ನು, ಈ ವಿಡಿಯೋದಲ್ಲಿ ಮಾತನಾಡಿರುವ ಕಿರಣ್​, ನಿನಗೆ ಸದ್ಯದಲ್ಲೇ 41 ವರ್ಷ ಆಗಲಿದೆ. ಹೀಗಾಗಿ, ಬೇಗ ಮದುವೆ ಆಗು ಎಂದು ಮನವಿ ಮಾಡಿಕೊಂಡಿದ್ದಾರೆ​.

ಕಿರಣ್​ ಮೃತಪಟ್ಟಿದ್ದರು ಎನ್ನುವ ವದಂತಿ ಇತ್ತೀಚೆಗೆ ಹರಿದಾಡಿತ್ತು. ‘ಕಿರಣ್​ ಆರೋಗ್ಯ ಬಗ್ಗೆ ವದಂತಿ ಹರಿದಾಡುತ್ತಿದೆ. ಅದೆಲ್ಲವೂ ಸುಳ್ಳು. ಅವರು ಕ್ಷೇಮವಾಗಿದ್ದಾರೆ. ಇಂದು ಮಧ್ಯಾಹ್ನ ಅವರು ಕೊವಿಡ್​​ಗೆ 2ನೇ ಡೋಸ್​ ವ್ಯಾಕ್ಸಿನ್​ ಪಡೆದುಕೊಂಡಿದ್ದಾರೆ. ನೆಗೆಟಿವ್​ ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಜನರಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಎಲ್ಲರೂ ಸೇಫ್​ ಆಗಿರಿ’ ಎಂದು ಅನುಪಮ್​ ಖೇರ್​ ಅವರು ಸೋಶಿಯಲ್​ ಮೀಡಿಯಾ ಮೂಲಕ ತಿಳಿಸಿದ್ದರು.

ಇದನ್ನೂ ಓದಿ:

 Kirron Kher: ಅನುಪಮ್​ ಖೇರ್​ ಪತ್ನಿ, ಖ್ಯಾತ ನಟಿ ಕಿರಣ್​ ಖೇರ್​ ನಿಧನದ ವದಂತಿಗೆ ಬ್ರೇಕ್​

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us