Leo Trailer: ‘ಲಿಯೋ’ ಟ್ರೇಲರ್ ಪ್ರಸಾರ ಮಾಡಿ ಸಂಕಷ್ಟಕ್ಕೆ ಸಿಲುಕಿದ ಥಿಯೇಟರ್ ಮಾಲೀಕರು

| Updated By: ಮದನ್​ ಕುಮಾರ್​

Updated on: Oct 10, 2023 | 3:31 PM

ಸಿನಿಮಾಟೋಗ್ರಫಿ ಆ್ಯಕ್ಟ್​ ಪ್ರಕಾರ ಸೆನ್ಸಾರ್ ಆಗದ ಕಂಟೆಂಟ್​ನ ಥಿಯೇಟರ್​ನಲ್ಲಿ ತೋರಿಸುವುದು ಅಪರಾಧ. ಇದನ್ನು ಕ್ರಿಮಿನಲ್ ಅಫೆನ್ಸ್ ಎಂದು ಪರಿಗಣಿಸಲಾಗುತ್ತದೆ. ಕೋರ್ಟ್ ಶಿಕ್ಷೆ ಕೂಡ ವಿಧಿಸಬಹುದು. ಈ ಕಾರಣಕ್ಕೆ ಥಿಯೇಟರ್ ಮಾಲೀಕರಿಗೆ ಸೆನ್ಸಾರ್ ಮಂಡಳಿ ನೋಟಿಸ್ ನೀಡಿದ್ದು, ತಕ್ಷಣಕ್ಕೆ ಉತ್ತರಿಸುವಂತೆ ಸೂಚಿಸಿದೆ.

Leo Trailer: ‘ಲಿಯೋ’ ಟ್ರೇಲರ್ ಪ್ರಸಾರ ಮಾಡಿ ಸಂಕಷ್ಟಕ್ಕೆ ಸಿಲುಕಿದ ಥಿಯೇಟರ್ ಮಾಲೀಕರು
ದಳಪತಿ ವಿಜಯ್​
Follow us on

ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ (Leo Movie) ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರಕ್ಕೆ ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಅಕ್ಟೋಬರ್ 19ರಂದು ರಿಲೀಸ್ ಆಗಲಿದೆ. ಈ ಚಿತ್ರದ ಟ್ರೇಲರ್ (Leo Trailer) ಇತ್ತೀಚೆಗೆ ರಿಲೀಸ್ ಆಗಿದೆ. ಇದನ್ನು ಪ್ರಸಾರ ಮಾಡಿದ ಥಿಯೇಟರ್​ಗಳಿಗೆ ಸಂಕಷ್ಟ ಎದುರಾಗಿದೆ. ಸೆನ್ಸಾರ್ ಸರ್ಟಿಫಿಕೇಟ್ ಇಲ್ಲದೇ ಥಿಯೇಟರ್​ಗಳಲ್ಲಿ ಇದನ್ನು ಬಿತ್ತರ ಮಾಡಲಾಗಿದೆ. ಈ ಕಾರಣಕ್ಕೆ ತೊಂದರೆ ಎದುರಾಗಿದೆ. ಥಿಯೇಟರ್ ಮಾಲೀಕರಿಗೆ ಸೆನ್ಸಾರ್ ಬೋರ್ಡ್ ನೋಟಿಸ್ ನೀಡಿದೆ. ಟ್ರೇಲರ್​ಗಳನ್ನು ಯೂಟ್ಯೂಬ್​ನಲ್ಲಿ ರಿಲೀಸ್ ಮಾಡಲು ಯಾವುದೇ ಸೆನ್ಸಾರ್ ಸರ್ಟಿಫಿಕೇಟ್ ಬೇಡ. ಆದರೆ, ಥಿಯೇಟರ್​ನಲ್ಲಿ ಸಿನಿಮಾ, ಜಾಹೀರಾತು ಹಾಗೂ ಟ್ರೇಲರ್ ಬಿತ್ತರ ಮಾಡೋದಾದರೆ ಸೆನ್ಸಾರ್ ಪ್ರಮಾಣಪತ್ರ ಅತಿ ಅಗತ್ಯ. ಆದರೆ, ಪ್ರಮಾಣ ಪತ್ರ (Censor Certificate) ಸಿಗದಿದ್ದರೂ ‘ಲಿಯೋ’ ಚಿತ್ರದ ಟ್ರೇಲರ್ ಪ್ರಸಾರ ಕಂಡಿದೆ.

ಸಿನಿಮಾಟೋಗ್ರಫಿ ಆ್ಯಕ್ಟ್​ ಪ್ರಕಾರ ಸೆನ್ಸಾರ್ ಆಗದ ಕಂಟೆಂಟ್​ನ ಥಿಯೇಟರ್​ನಲ್ಲಿ ತೋರಿಸುವುದು ಅಪರಾಧ. ಇದನ್ನು ಕ್ರಿಮಿನಲ್ ಅಫೆನ್ಸ್ ಎಂದು ಪರಿಗಣಿಸಲಾಗುತ್ತದೆ. ಕೋರ್ಟ್ ಶಿಕ್ಷೆ ಕೂಡ ವಿಧಿಸಬಹುದು. ಈ ಕಾರಣಕ್ಕೆ ಥಿಯೇಟರ್ ಮಾಲೀಕರಿಗೆ ಸೆನ್ಸಾರ್ ಮಂಡಳಿ ನೋಟಿಸ್ ನೀಡಿದ್ದು, ತಕ್ಷಣಕ್ಕೆ ಉತ್ತರಿಸುವಂತೆ ಸೂಚಿಸಿದೆ. ಈ ನೋಟಿಸ್​ನಲ್ಲಿ ಸೆನ್ಸಾರ್ ಮಂಡಳಿ ‘ಲಿಯೋ’ ಚಿತ್ರವನ್ನು ಸೆನ್ಸಾರ್ ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಸೆನ್ಸಾರ್ ಬೋರ್ಡ್​ನಲ್ಲಿ ಲಂಚಾವತಾರ; ‘ತಕ್ಷಣಕ್ಕೆ ತನಿಖೆ ಮಾಡಿ’ ಎಂದ ಕೇಂದ್ರ ಸರ್ಕಾರ

‘ಪ್ರಮಾಣೀಕರಿಸದ ಲಿಯೋನ ಟ್ರೇಲರ್‌ ನೀಡಿದ್ದು ಯಾರು ಎಂಬ ವಿಚಾರವನ್ನು ತಿಳಿಸಿ. ನಿಮ್ಮ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂಬುದಕ್ಕೆ ಕಾರಣ ನೀಡಿ ಎಂದು ಸಿಬಿಎಫ್​ಸಿ ಚೆನ್ನೈ ಥಿಯೇಟರ್​ಗಳಿಗೆ ಸೂಚಿಸಿದೆ. ಅಂದಹಾಗೆ, ‘ಲಿಯೋ’ ಚಿತ್ರಕ್ಕೆ ಸೆನ್ಸಾರ್​ ಮಂಡಳಿ ‘ಯು/ಎ’ ಸರ್ಟಿಫಿಕೇಟ್ ನೀಡಿದೆ. 13 ಕಡೆಗಳಲ್ಲಿ ಬದಲಾವಣೆ ಮಾಡಲು ಸೂಚಿಸಿದೆ. ಈ ಬದಲಾವಣೆ ಮಾಡಿಯೇ ಸಿನಿಮಾ ರಿಲೀಸ್ ಮಾಡುವ ಅನಿವಾರ್ಯತೆ ತಂಡಕ್ಕೆ ಎದುರಾಗಿದೆ.

‘ಲಿಯೋ’ ಚಿತ್ರದಲ್ಲಿ ಕಮಲ್ ಹಾಸನ್?

‘ಲಿಯೋ’ ಚಿತ್ರದಲ್ಲಿ ಕಮಲ್ ಹಾಸನ್ ಕೂಡ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಬೇರೆಯದೇ ರೀತಿಯ ಉತ್ತರ ನೀಡಿದ್ದರು. ‘ಇನ್ನು ಕೆಲವೇ ದಿನ. ಕೆಲವು ವಿಚಾರಗಳನ್ನು ಬೇಕಂತಲೇ ಹೇಳಿಲ್ಲ’ ಎಂದು ಅವರು ಹೇಳಿದ್ದರು. ಈ ಮೂಲಕ ಕಮಲ್ ಹಾಸನ್ ನಟನೆಯ ವಿಚಾರವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದರು.

ಲಿಯೋ ಟ್ರೇಲರ್‌:

ಪಾತ್ರವರ್ಗದ ಬಗ್ಗೆ:

‘ಲಿಯೋ’ ಸಿನಿಮಾದಲ್ಲಿ ದಳಪತಿ ವಿಜಯ್ ನಟಿಸಿದ್ದಾರೆ. ತ್ರಿಶಾ, ಅರ್ಜುನ್ ಸರ್ಜಾ, ಗೌತಮ್ ಮೆನನ್, ಪ್ರಿಯಾ ಆನಂದ್ ಮೊದಲಾದವರು ನಟಿಸಿದ್ದಾರೆ. ಸಂಜಯ್ ದತ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೆವೆನ್ ಸ್ಕ್ರೀನ್ ಸ್ಟುಡಿಯೋ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಅನಿರುದ್ಧ್ ರವಿಚಂದರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಹಳೆಯ ಕನೆಕ್ಷನ್:

ಲೋಕೇಶ್ ಕನಗರಾಜ್ ಅವರು ತಮ್ಮದೇ ಸಿನಿಮಾ ಯೂನಿವರ್ಸ್ ನಿರ್ಮಾಣ ಮಾಡಿಕೊಂಡಿದ್ದಾರೆ. ‘ಕೈದಿ’ ಹಾಗೂ ‘ವಿಕ್ರಮ್’ ಚಿತ್ರಕ್ಕೆ ಕನೆಕ್ಷನ್ ನೀಡಲಾಗಿತ್ತು. ಈ ಎರಡೂ ಸಿನಿಮಾಗಳ ಜೊತೆ ‘ಲಿಯೋ’ಗೆ ಕನೆಕ್ಷನ್ ಇದೆ ಎನ್ನಲಾಗಿದೆ. ಈ ವಿಚಾರವನ್ನು ಟ್ರೇಲರ್​ನಲ್ಲಿ ತಂಡ ಬಿಟ್ಟುಕೊಟ್ಟಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.