ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ನ ಒಂಬತ್ತನೇ ಸೀಸನ್ ಫೆ. 18 ರಂದು ಪ್ರಾರಂಭವಾಗಲಿದೆ. ಈ ವರ್ಷದ ಪಂದ್ಯವಳಿಯಲ್ಲಿ ಒಟ್ಟು 8 ತಂಡುಗಳು ಸೆಣಸಾಡಲಿವೆ. ಮೊದಲು 8 ತಂಡಗಳು ಮುಖಾಮುಖಿಯಾಗಲಿದ್ದು, ಬಳಿಕ ಸೆಮಿಫೈನಲ್ಗೆ ನಾಲ್ಕು
ತಂಡಗಳು ಅರ್ಹತೆ ಪಡೆಯುತ್ತವೆ. 8 ತಂಡಗಳ ಮಧ್ಯೆ ಒಟ್ಟು 16 ಪಂದ್ಯಗಳು ನಡೆಯಲಿವೆ. ಕೊನೆಯ ಪಂದ್ಯ ಮಾರ್ಚ್ 19ರಂದು ಹೈದರಾಬಾದ್ನಲ್ಲಿ ನಡೆಯಲಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕತ್ವವನ್ನು ಕಿಚ್ಚ ಸುದೀಪ್ ಅವರು
ವಹಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಮುಂಬೈ ತಂಡದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ನಟ ವೆಂಕಟೇಶ್ ತೆಲುಗು ತಂಡದ ಮೆಂಟರ್ ಆಗಿದ್ದಾರೆ. ಬೋನಿ ಕಪೂರ್ ಬಂಗಾಳ ತಂಡದ ಮತ್ತು ಸೊಹೈಲ್ ಖಾನ್ ಮುಂಬೈ ತಂಡದ ಮಾಲೀಕರಾಗಿದ್ದಾರೆ.
ತಂಡಗಳ ಹೆಸರು ಹೀಗಿವೆ:
ಬೆಂಗಾಲ್ ಟೈಗರ್ಸ್: ಜಿಶು ಸೆಂಗುಪ್ತ, ಮುಂಬೈ ಹೀರೋಸ್: ರಿತೇಶ್ ದೇಶಮುಖ್, ಪಂಜಾಬ್ ಡಿ ಶೇರ್: ಸೋನು ಸೂದ್, ಕರ್ನಾಟಕ ಬುಲ್ಡೋಜರ್ಸ್: ಕಿಚ್ಚ ಸುದೀಪ್, ಭೋಜ್‌ಪುರಿ ದಬಾಂಗ್ಸ್: ಮನೋಜ್ ತಿವಾರಿ, ತೆಲುಗು ವಾರಿಯರ್ಸ್: ಅಖಿಲ್ ಅಕ್ಕಿನೇನಿ, ಕೇರಳ ಸ್ಟ್ರೈಕರ್ಸ್: ಕುಂಚಾಕೊ ಬೋಬನ್ ಮತ್ತು ಚೆನ್ನೈ ರೈನೋಸ್: ಆರ್ಯ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:31 pm, Sat, 4 February 23