AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಣಿ ಜಯರಾಮ್​ ಅವರದ್ದು ಆಕಸ್ಮಿಕ ಸಾವಲ್ಲ, ಕೊಲೆ? ಅನುಮಾನ ಮೂಡಿಸಿದ ಗಾಯಗಳು

ಪೊಲೀಸರು ಬಂದು ಬಾಗಿಲು ಒಡೆದಿದ್ದಾರೆ. ಅಲ್ಲಿ ವಾಣಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವಾಣಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ವಾಣಿ ಜಯರಾಮ್​ ಅವರದ್ದು ಆಕಸ್ಮಿಕ ಸಾವಲ್ಲ, ಕೊಲೆ? ಅನುಮಾನ ಮೂಡಿಸಿದ ಗಾಯಗಳು
ರಾಜೇಶ್ ದುಗ್ಗುಮನೆ
|

Updated on:Feb 04, 2023 | 6:09 PM

Share

ಕನ್ನಡ ಸೇರಿ ಹಲವು ಭಾಷೆಗಳಲ್ಲಿ 10 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದ ನಟಿ ವಾಣಿ ಜಯರಾಮ್ (Vani Jayaram)  ಅವರು ಇಂದು (ಫೆಬ್ರವರಿ 4) ಚೆನ್ನೈನಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ಹಣೆಗೆ ಪೆಟ್ಟಾಗಿದ್ದು ಅವರ ಸಾವಿಗೆ ಕಾರಣ ಆಗಿದೆ. ಸದ್ಯ ಅವರ ಸಾವು ಸಾಕಷ್ಟು ಅನುಮಾನ ಮೂಡಿಸಿದೆ. ಇದು ಆಕಸ್ಮಿಕ ಸಾವಲ್ಲ ಕೊಲೆ ಎನ್ನುವ ಅನುಮಾನ ಮೂಡಿದೆ.

ಚೆನ್ನೈನಲ್ಲಿರುವ ನುಂಗಬಾಕಂ ಮನೆಯಲ್ಲಿ ವಾಣಿ ಅವರು ವಾಸವಾಗಿದ್ದರು. ಅವರ ಹಣೆಗೆ ಪೆಟ್ಟು ಬಿದ್ದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಇಂದು ಎಂದಿನಂತೆ ಮನೆ ಕೆಲಸದವಳು ವಾಣಿ ಮನೆಗೆ ತೆರಳಿದ್ದರು. ಡೋರ್ ಲಾಕ್ ಆದ ಕಾರಣ ಕಾಲಿಂಗ್ ಬೆಲ್ ಒತ್ತಿದ್ದಾರೆ. ಆದರೆ, ಒಳಗಡೆ ಇಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಕಾರಣಕ್ಕೆ ಮನೆ ಕೆಲಸದವಳು ಪತಿಯ ಮೊಬೈಲ್​ನಿಂದ ವಾಣಿ ಅವರಿಗೆ ಕರೆ ಮಾಡಿದ್ದಾರೆ. ಆದರೂ ಅವರ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ.

ಇದರಿಂದ ಅನುಮಾನಗೊಂಡ ಮನೆಕೆಲಸದವಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ಒಡೆದಿದ್ದಾರೆ. ಅಲ್ಲಿ ವಾಣಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವಾಣಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ವಾಣಿ ಹಣೆಯ ಮೇಲೆ ದೊಡ್ಡ ಗಾಯ ಆಗಿದೆ. ಮುಖದ ಮೇಲೂ ಗಾಯಗಳು ಇವೆ. ಹೀಗಾಗಿ, ಯಾರಾದರೂ ಅವರನ್ನು ಹೊಡೆದು ಸಾಯಿಸಿದರೇ ಎನ್ನುವ ಅನುಮಾನ ಮೂಡಿದೆ. ಸದ್ಯ ಮನೆ ಕೆಲಸದವಳ ಹೇಳಿಕೆ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ
Image
Singer Vani Jairam Birthday : ಮೂಲೆಯಲ್ಲಿ ಕುಳಿತಿದ್ದ ವಾಣಿಯವರನ್ನು ಯಾರೂ ಗುರುತು ಹಿಡಿದಿರಲಿಲ್ಲ!
Image
Singer Vani Jairam Birthday : ಹಾಡು ಹಳೆಯದಾದರೇನು, ಜೀವನವೆಲ್ಲಾ ಸುಂದರ ಬೆಸುಗೆ, ಭಾವವೆಂಬ ಹೂವು ಅರಳಿ…

ವಾಣಿ ಮುಖಕ್ಕೆ ಬಿದ್ದಿದ್ದರಿಂದಲೂ ಗಾಯ ಆಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಕೆಲಸದವಳು ಹೇಳುವ ಪ್ರಕಾರ ವಾಣಿ ಆರೋಗ್ಯವಾಗಿಯೇ ಇದ್ದರು. ವಾಣಿ ಅವರು ಜನವರಿ 26ರಂದು ಪದ್ಮ ಭೂಷಣ ಅವಾರ್ಡ್​​ ಸ್ವೀಕರಿಸಿದ್ದರು. ಇದಕ್ಕಾಗಿ ಅನೇಕರು ಅವರಿಗೆ ವಿಶ್ ಮಾಡುತ್ತಿದ್ದರು.

ಇದನ್ನೂ ಓದಿ: ಗಾನ ನಿಲ್ಲಿಸಿದ ಕೋಗಿಲೆ, ಪದ್ಮ ಭೂಷಣ ವಾಣಿ ಜಯರಾಂ ಇನ್ನಿಲ್ಲ

‘ಪದ್ಮಭೂಷಣ ಬಂದಿರೋದಕ್ಕೆ ಅವರಿಗೆ ಖುಷಿ ಇತ್ತು. ಅನೇಕರು ಕರೆ ಮಾಡಿ ವಿಶ್ ಮಾಡುತ್ತಿದ್ದರು. ಇಡೀ ದಿನ ಅವರಿಗೆ ಕಾಲ್​ಗಳು ಬರುತ್ತಲೇ ಇತ್ತು. ಅವರು ಒಂಟಿಯಾಗಿ ವಾಸವಾಗಿದ್ದರು’ ಎಂದು ಕೆಲಸದಾಕೆ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 5:55 pm, Sat, 4 February 23

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್