Singer Vani Jairam Birthday : ಹಾಡು ಹಳೆಯದಾದರೇನು, ಜೀವನವೆಲ್ಲಾ ಸುಂದರ ಬೆಸುಗೆ, ಭಾವವೆಂಬ ಹೂವು ಅರಳಿ…

Indian Playback Singers : ‘ಆಗ ಭಾಷಾಭೇದ ಎನ್ನುವುದು ಇರಲೇ ಇಲ್ಲ ನೋಡಿ. ಎಲ್ಲರೂ ಎಲ್ಲ ಭಾಷೆಗಳಲ್ಲೂ ಹಾಡುತ್ತಿದ್ದರು. ಅದಕ್ಕೇ ಯಾವ ಭಾಷೆಯ ಸಂಗೀತ ಕಲಾವಿದರೂ ಪ್ರತಿಭೆಯಿಂದ ಇಡೀ ಭಾರತಕ್ಕೇ ಸುಪರಿಚಿತರಾಗಿರುತ್ತಿದ್ದರು. ಅದರಲ್ಲೂ ವಾಣಿಯವರ Range, diction ಮತ್ತು ಸುಲಲಿತವಾಗಿ ಹಾಡುವಂಥ ರೀತಿ ಅದ್ಭುತ!’ ಸಂಗೀತಾ ಕಟ್ಟಿ​

Singer Vani Jairam Birthday : ಹಾಡು ಹಳೆಯದಾದರೇನು, ಜೀವನವೆಲ್ಲಾ ಸುಂದರ ಬೆಸುಗೆ, ಭಾವವೆಂಬ ಹೂವು ಅರಳಿ...
ಖ್ಯಾತ ಗಾಯಕಿ ವಾಣಿ ಜೈರಾಮ್
Follow us
ಶ್ರೀದೇವಿ ಕಳಸದ
|

Updated on:Nov 30, 2021 | 2:28 PM

Singer Vani Jayaram Birthday : ಸಂಗೀತದಲ್ಲಿ ಮೆಹನತ್ ಅನ್ನುವುದು ಬಹಳ ಮುಖ್ಯ. ಎಸ್​. ಜಾನಕಿ, ಪಿ. ಸುಶೀಲಾ, ಎಲ್​. ಆರ್. ಈಶ್ವರಿ ಮತ್ತು ವಾಣಿ ಇವರೆಲ್ಲರೂ ಆಗಿನ ಕಾಲದಲ್ಲಿ ಮುಂಬೈ, ಮದ್ರಾಸಿನಲ್ಲಿದ್ದುಕೊಂಡು ಒಂದೊಂದು ಹಾಡನ್ನು ಎರಡು ತಿಂಗಳುಗಳತನಕ ಅಭ್ಯಾಸ ಮಾಡಿ ಒಮ್ಮೆಲೇ ಲೈವ್ ರೆಕಾರ್ಡಿಂಗ್​ನಲ್ಲಿ ಹಾಡಿಬಿಡುತ್ತಿದ್ದರು. ಈಗಿನಂತೆ ಯಾವ ತಾಂತ್ರಿಕ ಸೌಲಭ್ಯಗಳೂ ಇಲ್ಲದ ಕಾಲದಲ್ಲಿ ಹಾಡಿದ ಅವರುಗಳು ನಿಜಕ್ಕೂ ಸ್ಟಾರ್​ ಸಿಂಗರ್ಸ್​. ಮತ್ತೆ ಆಗ ಭಾಷಾಬೇಧ ಎನ್ನುವುದು ಇರಲೇ ಇಲ್ಲ. ಎಲ್ಲರೂ ಎಲ್ಲ ಭಾಷೆಗಳಲ್ಲೂ ಹಾಡುತ್ತಿದ್ದರು. ಅದರಲ್ಲೂ ವಾಣಿಯವರ Range, diction and easy singing style ಅದ್ಭುತ! ಸಂಗೀತಾ ಕಟ್ಟಿ, ಹಿಂದೂಸ್ತಾನಿ ಗಾಯಕಿ​

ನಿರ್ದೇಶಕ ಕೆ. ಎಸ್. ಎಲ್. ರವಿ ನಿರ್ದೇಶನದ ಸಂಸ್ಕೃತ ಸಿನೆಮಾಕ್ಕೆ ಹಾಡುಗಳ ರೆಕಾರ್ಡಿಂಗ್ ಬೆಂಗಳೂರಿನ ಅರವಿಂದ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ನನ್ನ ಹಾಡಿನ ರೆಕಾರ್ಡ್​ ಹಿಂದಿನ ದಿನವೇ ಮುಗಿದಿದ್ದರೂ ಮರುದಿನ ವಾಣಿ ಜಯರಾಮ್ ಅವರನ್ನು ನೋಡಲೆಂದೇ ಸ್ಟುಡಿಯೋಕ್ಕೆ ಬಂದು ಕಾಯುತ್ತಿದ್ದೆ. ಕರ್ನಾಟಕ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ ಸುಮಧುರ ಶಾರೀರ ತೇಲಿಬರುತ್ತಿತ್ತು. ಅದು ವಾಣಿಯವರದೇ ಎಂದು ಮನಸ್ಸು ಗ್ರಹಿಸಿತು. ಆ ದಿನ ನನ್ನ ನಾಲ್ಕು ವರ್ಷದ ಮಗಳು ಸಾನ್ವಿ ನನ್ನೊಂದಿಗೆ ಬೆನ್ನಿಗೆ ಬೀಳಲು ಕಾರಣ ವಾಣಿಯಮ್ಮನೇ! ಏಕೆಂದರೆ, ಬೋಲೇರೇ ಪಪಿಹರಾ, ಹಮ್ ಕೋ ಮನ್​ ಕೆ ಶಕ್ತಿ ದೇ ಯಾವ ಮೂಲೆಯಿಂದ ಕೇಳಿದರೂ ಸಾನ್ವಿ ಓಡಿ ಬಂದುಬಿಡುತ್ತಿದ್ದಳು. ಹಾಗಾಗಿ ಅವರನ್ನು ನಾನೂ ನೋಡಲೇಬೇಕು ಎಂದು ಬಂದಿದ್ದಳು. ವಾಣಿಯವರು ರೆಕಾರ್ಡಿಂಗ್ ಚೆಕ್ ಮಾಡಿದವರೇ ಹೊರಗೆ ಬಂದರು. ನನ್ನನ್ನು ಪರಿಚಯಿಸಿಕೊಂಡೆ. ನಿಮ್ಮ ಹಾಡು ಕೇಳುತ್ತಲೇ ನಾನು ನನ್ನ ಮಗಳು ಬೆಳೀತಿದ್ದೀವಿ ಅಂದೆ. ತಕ್ಷಣವೇ, ‘ಸಂಗೀತಾ ಕಟ್ಟಿ! ಹಾಂ ಗೊತ್ತು ಗೊತ್ತು ಈ ಟಿವಿಯಲ್ಲಿ ಆಗಾಗ ಬೆಳಗಿನ ಆರೂವರೆಗೆ ನಿಮ್ಮ ವಚನಗಳನ್ನು ಕೇಳ್ತಿರ್ತೀನಿ. ಹಿಂದೂಸ್ತಾನಿಗೆ ಪಕ್ಕಾದ ಶಾರೀರ. ಬಹಳ ಚೆನ್ನಾಗಿ ಹಾಡುತ್ತೀರಿ’ ಕನ್ನಡದಲ್ಲೇ ಮಾತನಾಡಿದರು. ಎಂಥಾ ಅಚ್ಚರಿ ನನಗಾಗ ಅದು. ನನಗಿನ್ನೇನು ಬೇಕು! ಅಂಥವರು ನನ್ನ ಹಾಡು ಕೇಳುತ್ತಿರುತ್ತಾರೆಂದರೆ…

ಸಂಗೀತದಲ್ಲಿ ಮೆಹನತ್ ಅನ್ನುವುದು ಬಹಳ ಮುಖ್ಯ. ಎಸ್​. ಜಾನಕಿ, ಪಿ. ಸುಶೀಲಾ, ಎಲ್​. ಆರ್. ಈಶ್ವರಿ ಮತ್ತು ವಾಣಿ ಇವರೆಲ್ಲರೂ ಆಗಿನ ಕಾಲದಲ್ಲಿ ಮುಂಬೈ, ಮದ್ರಾಸಿನಲ್ಲಿದ್ದುಕೊಂಡು ಒಂದೊಂದು ಹಾಡನ್ನು ಎರಡು ತಿಂಗಳುಗಳತನಕ ಅಭ್ಯಾಸ ಮಾಡಿ ಒಮ್ಮೆಲೇ ಲೈವ್ ರೆಕಾರ್ಡಿಂಗ್​ನಲ್ಲಿ ಹಾಡುತ್ತಿದ್ದರು. ಈಗಿನಂತೆ ಯಾವ ತಾಂತ್ರಿಕ ಸೌಲಭ್ಯಗಳೂ ಇಲ್ಲದ ಕಾಲದಲ್ಲಿ ಹಾಡಿದ ಅವರುಗಳು ನಿಜಕ್ಕೂ ಸ್ಟಾರ್​ ಸಿಂಗರ್ಸ್​. ಹಾಗಂತ ನಮ್ಮಲ್ಲಿ ಈಗಲೂ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಆದರೆ ತಂತ್ರಜ್ಞಾನದ ಸಹಾಯವಿಲ್ಲದೆ ಹಾಡುತ್ತಿದ್ದವರೆಲ್ಲ ನಿಜಕ್ಕೂ ಘಟಾನುಘಟಿಗಳೇ. ಮತ್ತೆ ಆಗ ಭಾಷಾಭೇದ ಎನ್ನುವುದು ಇರಲೇ ಇಲ್ಲ ನೋಡಿ. ಎಲ್ಲರೂ ಎಲ್ಲ ಭಾಷೆಗಳಲ್ಲೂ ಹಾಡುತ್ತಿದ್ದರು. ಯಾವ ಭಾಷೆಯ ಸಂಗೀತ ಕಲಾವಿದರೂ ಪ್ರತಿಭೆಯಿಂದ ಇಡೀ ಭಾರತಕ್ಕೇ ಸುಪರಿಚಿತರಾಗಿರುತ್ತಿದ್ದರು. ಅದರಲ್ಲೂ ವಾಣಿಯವರ Range, diction ಮತ್ತು ಸುಲಲಿತವಾಗಿ ಹಾಡುವಂಥ ರೀತಿ ಅದ್ಭುತ! ​

Indian Playback singer Vani Jairam Birthday special memories by singer sangeeta Katti

ಸಂಗೀತಾ ಕಟ್ಟಿ

ಹಾಡು ಹಳೆಯದಾದರೇನು, ಜೀವನವೆಲ್ಲಾ ಸುಂದರ ಬೆಸುಗೆ, ಭಾವವೆಂಬ ಹೂವು ಅರಳಿ… ಈ ಹಾಡುಗಳನ್ನು ಕೇಳುತ್ತಿದ್ದರೆ ಈಗಲೂ ಮನಸ್ಸು ಹೂವಾಗುತ್ತದೆ. ಕುಮಾರಗಂಧರ್ವರೊಂದಿಗೆ ಹಾಡಿದ ‘ಋಣಾನುಬಂಧಾಚ್ಯಾ’ ಎಂಥವರನ್ನೂ ಆರ್ದ್ರಗೊಳಿಸಿಬಿಡುತ್ತದೆ.

*

ಸಂಗೀತಾ ಕಟ್ಟಿಯವರು ಬಾಲಮುರಳಿಯವರ ನೆನಪುಗಳನ್ನು ಮೆಲುಕು ಹಾಕಿದ್ದು ಇಲ್ಲಿದೆ : M. Balamuralikrishna Birthday : ಕಾರ್ಟೂನು, ಫೈಟಿಂಗ್ ಸೀನ್ ನೋಡೂದಂದ್ರ ಬಾಲಮುರಳಿಯವರಿಗೆ ಅಗದೀ ಜೀವ

Published On - 12:00 pm, Tue, 30 November 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್