AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

M. Balamuralikrishna Birthday : ಕಾರ್ಟೂನು, ಫೈಟಿಂಗ್ ಸೀನ್ ನೋಡೂದಂದ್ರ ಬಾಲಮುರಳಿಯವರಿಗೆ ಅಗದೀ ಜೀವ!

Cinema : ‘ಅಯ್ಯ ನೀವು ಕಾರ್ಟೂನ್ ನೋಡ್ತೀರಿ? ಅಂತ ಕೇಳಿದ್ವಿ. ಈ ಬದುಕು ಮದಲಾ ಅಳಬುರುಕು. ಖರೇ ಬದುಕಿನ್ಯಾಗ ಅನುಭವಿಸಿದ್ದು ಸಾಕಾಗೂದಿಲ್ಲೇನು? ಗಂಭೀರ, ಭಾವನಾತ್ಮಕ ಸಿನೆಮಾಗಳನ್ನ ನನಗಂತೂ ನೋಡ್ಲಿಕ್ಕೆ ಆಗೂದಿಲ್ಲವಾ. ಸಿನೆಮಾ ನೋಡಿದ ಮ್ಯಾಲೆ ಮನಸ್ಸು ಹಗೂರ ಆಗಬೇಕು. ಅದು ಬಿಟ್ಟು ಅಲ್ಲೂ ಹೋಗಿ ಅಳಬೇಕೇನು ನಾವು? ಅಂದ್ರು ಬಾಲಮುರಳೀಜಿ.’ ಸಂಗೀತಾ ಕಟ್ಟಿ

M. Balamuralikrishna Birthday : ಕಾರ್ಟೂನು, ಫೈಟಿಂಗ್ ಸೀನ್ ನೋಡೂದಂದ್ರ ಬಾಲಮುರಳಿಯವರಿಗೆ ಅಗದೀ ಜೀವ!
ಚೆನ್ನೈನ ರೆಕಾರ್ಡಿಂಗ್ ಸ್ಟುಡಿಯೋ ಒಂದರಲ್ಲಿ ಡಾ. ಎಂ. ಬಾಲಮುರಳೀಕೃಷ್ಣ ಮತ್ತು ಹಿಂದೂಸ್ತಾನಿ ಗಾಯಕಿ ಸಂಗೀತಾ ಕಟ್ಟಿ
ಶ್ರೀದೇವಿ ಕಳಸದ
|

Updated on:Jul 07, 2021 | 8:51 AM

Share

ಸ್ಪಂದನಾ ವಿನಾ ನ ಏವ ಚಲತಿ! ನಾವು ಒಬ್ಬೊಬ್ಬರೂ ಒಂದೊಂದು ರಾಗ ಇದ್ಹಂಗನ. ಆಯಾ ಮಾಹೋಲ್​ಗೆ ತಕ್ಹಂಗ ಅರಳಕೋತ ಹೋಗ್ತಿರ್ತೇವಿ. ನಮ್ಮ ನಡಿ ಎಷ್ಟ ಸರಳ, ಎಷ್ಟ ಸಂಕೀರ್ಣ ಮತ್ತ ಎಲ್ಲೆಲ್ಲಿ ಅನ್ನೂದಕ್ಕ ಅದರದ ಆದ ಕಾರಣಗಳಿರ್ತಾವು. ಇಲ್ಲೆಲ್ಲೋ ಖಾಸಾ ಪದರ ಸಿಗಲಿಕ್ಹತ್ತದ ಅನ್ನೂದು ಗೊತ್ತಾತೋ ನಮಗ ಗೊತ್ತಿಲ್ಲದನ ನಾವು ನಮ್ಮ ‘ಕಿರೀಟ’ ಬಿಚ್ಚಿಟ್ಟ ನಡಕೋತಿರ್ತೀವಿ. ಹಿಂಗ ಒಮ್ಮೆ 1996ರೊಳಗ ಧಾರವಾಡದಾಗ ಡಾ. ಎಂ. ಬಾಲಮುರಳೀಕೃಷ್ಣ ಅವರ ಸಂಗೀತ ಸಭಾ ಏರ್ಪಾಡಾಗಿತ್ತು. ಸಭಾ ಮುಗದ ಮ್ಯಾಲೆ ಆಯೋಜಕರು ಸರ್ಕ್ಯೂಟ್ ಹೌಸ್​ನೊಳಗ ಅವರಿಗೆ ಇಳಕೊಳ್ಳಲಿಕ್ಕೆ ವ್ಯವಸ್ಥಾನೂ ಮಾಡಿದ್ರು. ಆದ್ರ ಅವರು ಅಲ್ಲಿಗ ಹೋಗದ ಆಗ ಕೆಸಿಡಿ ಕ್ವಾರ್ಟರ್ಸ್​ನೊಳಗ ಇದ್ದ ನಮ್ಮ ಹಿಂದೂಸ್ತಾನಿ ಹಾಡುಗಾರ್ತಿ ಸಂಗೀತಾ ಕಟ್ಟಿ ಅವರ ಮನಿಗ ಹೋಗ್ತೀನಿ ಅಂತ ನಿಂತ್ರು. ಅಷ್ಟಕ್ಕ ಮುಗೀಲಿಲ್ಲ. ನಾ ಈವತ್ತ ಇಲ್ಲೇ ಇರ್ತೇನಿ ಅಂತನೂ ಕೂತಬಿಟ್ರು. ಆಮೇಲ್ ಏನಾತು? ಸಂಗೀತಾ ಅವರು ಹೇಳಿದ್ದನ್ನ ನೀವ ಓದ್ರಿ.  

*

ಸಂಗೀತದ ವ್ಯಕ್ತಿತ್ವ ಅಂದ್ರ ಬೇರೇನ ಅಂತ ನಾವು ಅನ್ಕೊಂಡಿರ್ತೀವಿ. ಆದ್ರ ಬಾಲಮುರಳಿಯವರು ನಮ್ಮನೀಗೆ ಬಂದಾಗ ಹಂಗಿರಲಿಲ್ಲ. ಅವರು ಲೌಕಿಕದಲ್ಲೂ ಅಗದೀ ರಸಪೂರ್ಣವಾಗಿದ್ದರು ಅಂತ ಅನ್ನಿಸ್ಕೋತ ಹೋತು. ಅವತ್ತ ಸಭಾ ಮುಗದ ಮ್ಯಾಲೆ ನಮ್ಮನಿಗೆ ಬರ್ತಾರು ಅಂತ ಸುದ್ದಿ ಬಂತು. ನಾವು ಚಹಾದ ಮಂದಿ. ಅವರ ಸಲವಾಗಿ ಕಾಫೀಪುಡಿ ತರಿಸಿ, ಕುದಿಸಿ ಹಾಲ ಹಾಕಿ ರೆಡಿ ಮಾಡಿಕೊಟ್ರ ಅವರು ಚಹಾದ ಕಪ್ ಎತ್ಕೊಂಬಿಟ್ರು. ನಾ ಈತನಕ ಚಹಾ ಕುಡದಿಲ್ಲ ಆದ್ರ ನಿಮ್ಮನಿ ಚಹಾ ಕುಡೀತೇನಿ ಅಂತ ಆ ಪರಿಮಳ, ರುಚಿ ಆಸ್ವಾದಿಸ್ಕೋತ ಕುಡದ್ರು. ಮುಂದ ನಾ ಈವತ್ತ ಇಲ್ಲೇ ಇರಾಂವಾ ಅಂತನೂ ಅಂದುಬಿಟ್ರು.

ನಮ್ಮ ಅಮ್ಮ ಮತ್ತ ತಂಗಿ ಅಡಗಿ ಮಾಡ್ಲಿಕ್ಕೆ ಒಳಗ ಹೋದ್ರು. ಅಡಗಿ ಆಗೂತನಕಾ ಜಯದೇವರ ಅಷ್ಟಪದಿ ಹೇಳಿಕೊಟ್ರು. ‘ಜೇನ ಜೇನ ಹುಯ್ದಂಗಮ್ಮಾ ನಿನ್ನ ಕಂಠ’ ಅಂತ ಅಂದ್ರು. ಅವರ ವ್ಯಕ್ತಿತ್ವಕ್ಕೆ ಒಂಥರಾ ಸ್ಟ್ರೈಕಿಂಗ್ ಕ್ವಾಲಿಟಿ ಅಂತೇವಲ್ಲ ಅದು ಇತ್ತು. ಹಾಡೂದ ಮುಗದ ಮ್ಯಾಲ, ಕಾರ್ಟೂನ್ ಫಿಲಮ್ ಅದ ಏನು ನಿಮ್ಮನಿಯೊಳಗ ಅಂತ ಕೇಳಿದ್ರು. ನಾನು ನನ್ನ ತಂಗಿ ಅವಾಕ್ಕಾದ್ವಿ. ನನ್ನ ತಂಗಿ ಸರಿತಾ, ‘ಅಯ್ಯ ಅಕ್ಕಾ ಇವರು ಕಾರ್ಟೂನ್ ನೋಡ್ತೀನಿ ಅಂತಾರಲ್ಲ’ ಅಂದ್ಲು. ನೀವು ಕಾರ್ಟೂನ್ ನೋಡ್ತೀರಿ ಅಂತ ಕೇಳೇ ಬಿಟ್ವಿ. ‘ಅಯ್ಯ ಈ ಬದುಕು ಮೊದಲ ಗೋಜಲು. ಖರೇ ಬದುಕಿನೊಳಗ ಅನುಭವಿಸಿದ್ದು ಸಾಕಾಗೂದಿಲ್ಲೇನು? ಸ್ಕ್ರೀನ್ ಮ್ಯಾಲೂ ಅದನ್ನ ನೋಡಬೇಕೇನು? ಗಂಭೀರ, ಭಾವನಾತ್ಮಕ ಸಿನೆಮಾಗಳನ್ನ ನನಗಂತೂ ನೋಡ್ಲಿಕ್ಕೆ ಆಗೂದಿಲ್ಲವಾ. ಮೊದಲ ಈ ಬದುಕು ಅನ್ನೂದೇ ಅಳಬುರುಕು. ಸಿನೆಮಾ ನೋಡಿದ ಮ್ಯಾಲೆ ಮನಸ್ಸು ಹಗೂರ ಆಗಬೇಕು. ಅದು ಬಿಟ್ಟು ಅಲ್ಲೂ ಹೋಗಿ ಅಳಬೇಕೇನು ನಾವು?’ ಅಂದ್ರು.

dr balamuralikrishna sangeeta katti

ಕ್ಯಾಸೆಟ್ ಸಮರ್ಪಣೆ.

ನಮಗ ಈ ನಮನೀ ಆಶ್ಚರ್ಯ ಆತಲ್ಲಾ ಹೇಳ್ತೇನಿ… ಅವರು ಡೊನಾಲ್ಡ್ ಡಕ್ ಸಿನೆಮಾ ಕೇಳಿದ್ರು. ನಮ್ಮನಿಯೊಳಗ ಟಾಮ್ ಅಂಡ್ ಜೆರಿ ಅಷ್ಟ ಇತ್ತು. ಹಂಗ ಮಾತಾಡ್ತಾ ಗೊತ್ತಾತು ಅವರಿಗೆ ಆ್ಯಕ್ಷನ್ ಸಿನೆಮಾ, ಕರಾಟೆ ಮತ್ತ ನಮ್ಮ ಇಂಡಿಯನ್ ಸಿನೆಮಾದೊಳಗಿನ ಸಿಲ್ಲಿ ಸಿಲ್ಲಿ ಫೈಟಿಂಗ್ ಸೀನ್​ಗಳೂ ಅಗದೀ ಸೇರ್ತಾವಂತ. ತಾಸಗಟ್ಲೆ ನೋಡ್ಕೋತ ಕೂಡ್ತಾರು ಇಂಥಾದನ್ನೆಲ್ಲ ನೋಡೂದಕ್ಕಂತನ ಅನ್ನೂ ವಿಷಯ ಅಗದೀ ಅಜೀಬಾತು.

ಮುಂದ ‘ಮಂತ್ರಾಲಯ ಮಂದಿರ’ ಕ್ಯಾಸೆಟ್ ರೆಕಾರ್ಡಿಂಗ್ ಚೆನ್ನೈನೊಳಗ ಇತ್ತು. ನಮ್ಮ ಡ್ಯಾಡಿ ಬರದಿದ್ದ ಹಾಡಗೋಳವು. ಸ್ಟುಡಿಯೋದ ಮೆಟ್ಟಲಾ ಹತ್ತಿ ಮ್ಯಾಲೆ ಬರ್ಲಿಕ್ಹತ್ತಿದ್ರು. ನನ್ನ ಮಾರೀಮ್ಯಾಗಿನ ನರ್ವಸ್​ನೆಸ್ ಕಾಣಿಸ್ತೇನೋ. ಹಗರ್ಕ ರೆಕಾರ್ಡಿಂಗ್ ರೂಮಿನೊಳಗ ಬಂದ್ರು. ಅಲ್ಲಿ ಮ್ಯೂಸಿಕ್ ಡೈರೆಕ್ಟರ್ ಇದ್ರುನೂ ನನ್ನ ಕಡೆ ಆ ಹಾಡಿನ ಟ್ಯೂನ್ ಹೇಳಿಸಿಕೊಂಡು ನನ್ನ ಬಾಜೂಕನ ನಿಂತು ಹಾಡಿ ರೆಕಾರ್ಡಿಂಗ್ ಮುಗಿಸಿದ್ರು. ಅಂದ್ರ ಮನಸ್ ಅರ್ಥ ಮಾಡ್ಕೋಳೋದು ಅವರಿಗೆ ಬ್ಹಾಳ ಛುಲೋ ಗೊತ್ತಿತ್ತು. ಗುರು ಕಿಶೋರಿತಾಯಿ ಅವರ ಜೊತಿಗಿ ಇರೂದಂದ್ರ ಸೂರ್ಯನ ಬಾಜೂಕ ಇದ್ದಹಂಗ. ಅವರ ಬೆಳಕು ಎಲ್ಲಾರಿಗೂ ಬೇಕು. ಆದ್ರ ಹತ್ರಕ್ಕ ಹೋಗೂದು ಅಸಾಧ್ಯ. ಅವರದು ಒನ್ನಮನೀ ಬ್ಯಾರೇ ವ್ಯಕ್ತಿತ್ವ. ಆದ್ರ ಬಾಲಮುರಳಿಯವರು ಹಂಗಲ್ಲ. ಎಲ್ಲರ ಜೋಡೀನೂ ಅಗದೀ ಸಜೀಕಲೇ ಬೆರೀತಿದ್ರು. ಒಂಥರಾ ತಂಪ ವ್ಯಕ್ತಿತ್ವ. ಸಂಗೀತಗಾರರು ಥಟ್ ಅಂತ ಉತ್ರಾ ಕೊಡೂದು, ಪ್ರತಿಕ್ರಿಯಾ ಕೊಡೂದು ಸಜೀಕ. ಆದ್ರ ಇವರು ಬಾಲಮುರಳಿಯವರು ಹಂಗಿರಲಿಲ್ಲ. ಏನ ಮಾತಾಡಿದ್ರೂ ಅದರೊಳಗ ಒಂದ ಸಣ್ಣ ತಮಾಷಿ ಇರೂದು. ಅದಕ್ಕೊಂದು ಇಂಟಲೆಕ್ಚುವಲ್ ಫ್ಲೇವರ್ ಇರೂದು. ಅಗದೀ ಚುರುಕು ಮನಷ್ಯಾ.

ಹಾಂ ಅವತ್ ಅಡಗಿ ಆತು. ಅವರದು ಊಟ ಆತು. ಎಲಿಯಡಕಿ ಕೊಟ್ಟು ಹೊರ ಕೂಡಿಸಿ ಬಂದು ನಾವು ಊಟಕ್ಕ ಕೂತ್ವ್ಯಾ. ವಾಪಸ್ ಡೈನಿಂಗ್ ಹಾಲ್​ ಗೆ ಬಂದವರನ ಸಾರಿನ ಚಮಚಾ, ಮೊಸರಿನ ಚಮಚಾ ಹಿಡದ ನಿಂತಬಿಟ್ರು. ‘ಯಾಕ ನಾವು ಉಣ್ಣೂವಾಗ ನೀವು ಬಡಸಿದ್ರಿ. ನೀವು ಉಣ್ಣೂವಾಗ ನಾ ಬಡಸಬಾರದೇನು?‘ ಅಂತ. ನಮಗೆಲ್ಲಾ ಒಂಥರಾ ಸಂಕೋಚ ಆತ ಖರೇ. ಆದ್ರ ಅವರ ಸ್ವಭಾವದೊಳಗ ಬ್ಹಾಳ ಆಪ್ತತಾ ಇತ್ತು.

dr balamuralikrishna sangeeta katti

ಕಾರ್ಯಕ್ರಮವೊಂದರಲ್ಲಿ ಗಾಯಕಿ ಸಂಗೀತಾ ಮತ್ತು ಬಾಲಮುರಳೀಕೃಷ್ಣ

ಕ್ಯಾಸೆಟ್ ರೆಕಾರ್ಡಿಂಗ್​ಗೆಲ್ಲಾ ನಾವು ಚೆನ್ನೈಗೆ ಆಗ ಹೋಗ್ತಿದ್ವಿ ಆರು ತಿಂಗಳಿಗೊಮ್ಮೆ. ಮುದ್ಧಾಮ ಅವರ ಮನೀಗೆ ಹೋಗಿ ಚಹಾಪಾನಿ ಮುಗಿಸಿ, ತಾಸಗಟ್ಲೇ ಅವರ ಮುಂದ ಹಾಡಿ ಬರ್ತಿದ್ನಿ. ಅದ ದೊಡ್ಡ ಖುಷಿ.

ಇದನ್ನೂ ಓದಿ : M. Balamuralikrishna Birthday : ‘ಯಾವ ಕಲಾವಿದರಿಗೂ ಅವರವರ ಪ್ರತಿಭೆಯ ಮೇಲೆ ಅವರಿಗೆ ಹತೋಟಿ ಇರುವುದೇ ಇಲ್ಲ

Published On - 7:01 pm, Tue, 6 July 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ