Singer Vani Jairam Birthday : ಮೂಲೆಯಲ್ಲಿ ಕುಳಿತಿದ್ದ ವಾಣಿಯವರನ್ನು ಯಾರೂ ಗುರುತು ಹಿಡಿದಿರಲಿಲ್ಲ!
Music Therapy for Cancer : ‘ಆ ದಿನ ವಾಣಿಯವರು ಮಾತಾಡಿದ್ದೆಲ್ಲವೂ ಸಂಗೀತ ಚಿಕಿತ್ಸೆ ಬಗ್ಗೆ. ಆಗ ಈ ವಿಷಯದ ಕುರಿತು ಅವರು ಸಂಶೋಧನೆ ಮಾಡುತ್ತಿದ್ದರು. ಮುಂದೆ ಕ್ಯಾನ್ಸರ್ ರೋಗಿಗಳ ನೋವು ಉಪಶಮನಕ್ಕೆ ಕೇಂದ್ರ ಆರಂಭಿಸಿದರು. ನನಗೆ ಅವರ ಈ ಸಾಮಾಜಿಕ ಸೇವೆಯ ಕುರಿತು ಬೆಳಕು ಚೆಲ್ಲಬೇಕು ಎನ್ನಿಸಿತು.’ ಎನ್. ಎಸ್. ಶ್ರೀಧರಮೂರ್ತಿ
Singer Vani Jairam Birthday : ವಾಣಿಯವರು ಎಷ್ಟು ದೊಡ್ಡ ಸಾಧಕರೋ ಅಷ್ಟೇ ಸುಲಭ ಲಭ್ಯರು. ಚೆನ್ನೈನ ಅವರ ಮನೆಯಲ್ಲಿ ಒಮ್ಮೆ ‘ಅಮ್ಮ, ನನಗಾಗಿ ಭಾವವೆಂಬ ಹೂವು ಅರಳಿ ಹಾಡ್ತೀರಾ’ ಎಂದು ಕೇಳಿದರೆ ಕೊಂಚವೂ ಯೋಚಿಸದೆ ಹಾಡನ್ನು ಒಮ್ಮೆ ಕೇಳಿ ಲಿರಿಕ್ಸ್ ಬರೆದುಕೊಂಡು ನನಗೊಬ್ಬನಿಗೆ ಈ ಹಾಡು ಹೇಳಿ ನನ್ನ ಜನ್ಮವನ್ನು ಸಾರ್ಥಕಗೊಳಿಸಿದ್ದರು. ಎಷ್ಟೋ ಸಲ ಅವರು ವಹಿಸಿದ ಜವಾಬ್ದಾರಿಯನ್ನು ನಾನು ನಿರ್ವಹಿಸದೆ ಹೋಗಿದ್ದೂ ಇದೆ. ಇತ್ತೀಚೆಗೆ ಕೆ.ಎಸ್.ಎಲ್.ಸ್ವಾಮಿ (ರವೀ) ನಿರ್ದೇಶಿಸಿ ಅಪೂರ್ಣವಾಗಿ ನಿಂತಿದ್ದ ‘ಪ್ರಬೋಧಚಂದ್ರಿಕೆ’ಗೆ ನಾನು ಹಾಡಿದ್ದ ಹಾಡು ಬೇಕು ಅಂದರು. ನನಗೆ ಇದುವರೆಗೂ ಒದಗಿಸಲು ಆಗಿಲ್ಲ. ಅದನ್ನು ಅವರು ಇನ್ನೊಮ್ಮೆ ಕೇಳಿಯೂ ಇಲ್ಲ. ಎನ್. ಎಸ್. ಶ್ರೀಧರ ಮೂರ್ತಿ, ಪತ್ರಕರ್ತರು
ವಾಣಿ ಜಯರಾಮ್ ದೇಶ ಕಂಡ ಅಪರೂಪದ ಗಾಯಕಿ. ಅಷ್ಟು ದೊಡ್ಡ ಸಾಧಕರಾಗಿದ್ದರೂ ಅಷ್ಟೇ ಸರಳರು. ಆರ್.ಎನ್. ಜಯಗೋಪಾಲ್ ಅವರ ಕುರಿತು ವಾಣಿ ಅವರಿಗೆ ಅಪಾರ ಗೌರವ. ‘ಕೆಸರಿನ ಕಮಲ’ ಚಿತ್ರದ ಮೂಲಕ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆ ತಂದವರು ಜಯಗೋಪಾಲ್ ಅವರೇ. ನಾವು ಬೆಂಗಳೂರಿನಲ್ಲಿ ಜಯಗೋಪಾಲ್ ಅವರ 70 ನೆಯ ವರ್ಷದ ಕಾರ್ಯಕ್ರಮ ಮಾಡುವಾಗ ವಾಣಿ ಜಯರಾಮ್ ಅವರು ‘ನಾನು ಬರ‍್ತೀನಿ’ ಎಂದು ಯಾವ ಬಿಗುಮಾನ ಕೂಡ ಇಲ್ಲದೆ ಹೇಳಿದರು. ಪತಿ ಜಯರಾಮ್ ಅವರ ಜೊತೆಗೆ ಬಂದಿದ್ದರು. ಪ್ರಧಾನ ಕಾರ್ಯಕ್ರಮ ಇದ್ದಿದ್ದು ರವೀಂದ್ರ ಕಲಾಕ್ಷೇತ್ರದಲ್ಲಿ.
ಹಿಂದಿನ ದಿನ ಸುರಾನಾ ಕಾಲೇಜಿನಲ್ಲಿ ವಿಚಾರ ಸಂಕಿರಣ. ವಾಣಿ ಮೇಡಂ ವಿಚಾರ ಸಂಕಿರಣಕ್ಕೆ ಬಂದರು. ಒಂದು ಮೂಲೆಯಲ್ಲಿ ಕುಳಿತು ಎಲ್ಲರ ಮಾತುಗಳನ್ನೂ ಕೇಳಿಸಿಕೊಂಡರು. ಅವರನ್ನು ಯಾರೂ ಗುರುತು ಹಿಡಿಯಲಿಲ್ಲ. ಸಂಜೆ ಯುವ ಗಾಯಕರ ಸಂಗೀತ ಕಾರ್ಯಕ್ರಮ. ಎಲ್ಲರ ಹಾಡುಗಳನ್ನೂ ಕೇಳಿಸಿಕೊಂಡರು. ನಾನೇ ಕೊನೆಗೆ ವಾಣಿ ಜಯರಾಮ್ ಅವರು ಇದ್ದಾರೆ ಎಂದು ಅನೌನ್ಸ್ ಮಾಡಿದೆ. ಆಗ ಯುವಗಾಯಕರ ಕಣ್ಣಿನಲ್ಲಿನ ಹೊಳಪನ್ನು ನೋಡ ಬೇಕಿತ್ತು. ಈ ಸಂದರ್ಭದಲ್ಲಿ ಅವರ ಜೊತೆಗೆ ಸಾಕಷ್ಟು ಮಾತಾಡುವ ಅವಕಾಶ ಸಿಕ್ಕಿತು. ಅವರು ಮಾತಾಡಿದ್ದೆಲ್ಲವೂ ಸಂಗೀತ ಚಿಕಿತ್ಸೆ ಬಗ್ಗೆ. ಆಗ ಈ ವಿಷಯದ ಕುರಿತು ಅವರು ಸಂಶೋಧನೆ ಮಾಡ್ತಾ ಇದ್ದರು. ಮುಂದೆ ಕ್ಯಾನ್ಸರ್ ರೋಗಿಗಳ ನೋವು ಉಪಶಮನಕ್ಕೆ ಕೇಂದ್ರ ಆರಂಭಿಸಿದರು. ನನಗೆ ಅವರ ಈ ಸಾಮಾಜಿಕ ಸೇವೆಯ ಕುರಿತು ಬೆಳಕು ಚೆಲ್ಲಬೇಕು ಎನ್ನುವ ಆಸೆ ಇತ್ತು. ನಾನು ‘ವಿಜಯವಾಣಿ’ ಯಲ್ಲಿ ಇದ್ದಾಗ ಈ ಕುರಿತು ಒಂದು ಲೇಖನ ಕೊಡ್ತೀರಾ ಎಂದು ಕೇಳಿದೆ. ಎರಡೇ ದಿನಕ್ಕೆ ಸೊಗಸಾದ ಲೇಖನವನ್ನು ಕಳುಹಿಸಿದರು. ಅದರಲ್ಲಿ ತಮ್ಮ ಬಗ್ಗೆ ಒಂದು ಪದ ಕೂಡ ಬರೆದುಕೊಂಡಿರಲಿಲ್ಲ. ಇಡೀ ಲೇಖನ ಪರಿಕಲ್ಪನೆ ಕುರಿತಾಗಿ ಇತ್ತು. ಎಷ್ಟು ಸೊಗಸಾದ ಇಂಗ್ಲಿಷ್ ಎಂದರೆ ನಾನು ಅನುವಾದಿಸುವಾಗ ಇಪ್ಪತ್ತು ಸಲ ಅವರಿಗೆ ಫೋನ್ ಮಾಡಬೇಕಾಯಿತು. ಕೊಂಚವೂ ಬೇಸರಿಸದೆ ಸ್ಪಷ್ಟೀಕರಣ ಕೊಡ್ತಾ ಇದ್ದರು. ಅದು ಅವರ ದೊಡ್ಡ ಗುಣ.
ಅಮ್ಮ ಎಷ್ಟು ದೊಡ್ಡ ಸಾಧಕರೋ ಅಷ್ಟೇ ಸುಲಭ ಲಭ್ಯರು. ಚೆನ್ನೈನ ಅವರ ಮನೆಯಲ್ಲಿ ಒಮ್ಮೆ ‘ಅಮ್ಮ ನನಗಾಗಿ ಭಾವವೆಂಬ ಹೂವು ಅರಳಿ ಹಾಡ್ತೀರಾ’ ಎಂದು ಕೇಳಿದರೆ ಕೊಂಚವೂ ಯೋಚಿಸದೆ ಹಾಡನ್ನು ಒಮ್ಮೆ ಕೇಳಿ ಲಿರಿಕ್ಸ್ ಬರೆದುಕೊಂಡು ನನಗೊಬ್ಬನಿಗೆ ಈ ಹಾಡು ಹೇಳಿ ನನ್ನ ಜನ್ಮವನ್ನು ಸಾರ್ಥಕಗೊಳಿಸಿದ್ದರು. ಎಷ್ಟೋ ಸಲ ಅವರು ವಹಿಸಿದ ಜವಾಬ್ದಾರಿಯನ್ನು ನಾನು ನಿರ್ವಹಿಸದೆ ಹೋಗಿದ್ದೂ ಇದೆ. ಇತ್ತೀಚೆಗೆ ಕೆ.ಎಸ್.ಎಲ್.ಸ್ವಾಮಿ (ರವೀ) ನಿರ್ದೇಶಿಸಿ ಅಪೂರ್ಣವಾಗಿ ನಿಂತಿದ್ದ ‘ಪ್ರಬೋಧಚಂದ್ರಿಕೆ’ಗೆ ನಾನು ಹಾಡಿದ್ದ ಹಾಡು ಬೇಕು ಅಂದರು. ನನಗೆ ಇದುವರೆಗೂ ಒದಗಿಸಲು ಆಗಿಲ್ಲ. ಅದನ್ನು ಅವರು ಇನ್ನೊಮ್ಮೆ ಕೇಳಿಯೂ ಇಲ್ಲ.
ಅಮ್ಮ ನೀವು ನೂರು ವರ್ಷ ಇರಬೇಕು, ಅದನ್ನು ನೋಡಿ ನಾವು ಸಂಭ್ರಮ ಪಡಬೇಕು.
ಸಂಗೀತಾ ಕಟ್ಟಿ ವಾಣಿಯವರ ಕುರಿತು : Singer Vani Jairam Birthday : ಹಾಡು ಹಳೆಯದಾದರೇನು, ಜೀವನವೆಲ್ಲಾ ಸುಂದರ ಬೆಸುಗೆ, ಭಾವವೆಂಬ ಹೂವು ಅರಳಿ
Published On - 12:52 pm, Tue, 30 November 21