ತಾಯಿ ಆಗಲಿರುವ ಸಮಂತಾರನ್ನು ಮನೆಗೆ ಕರೆದು ಸತ್ಕರಿಸಿದ ಚಿರಂಜೀವಿ ದಂಪತಿ

Megastar Chiranjeevi: ಪ್ರೇಕ್ಷಕರು ಮಾತ್ರವೇ ಕೆಲ ಸಿನಿಮಾ ಸೆಲೆಬ್ರಿಟಿಗಳು ಸಹ ‘ಮಾ ಇಂಟಿ ಬಂಗಾರಂ’ ಸಿನಿಮಾವನ್ನು ಮೆಚ್ಚಿಕೊಂಡಿದ್ದು, ಅವರಲ್ಲಿ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಚಿರಂಜೀವಿ ಸಹ ಒಬ್ಬರು. ಸಿನಿಮಾ ನೋಡಿ ಮೆಚ್ಚಿಕೊಂಡ ಮೆಗಾಸ್ಟಾರ್ ಚಿರಂಜೀವಿ, ಇಡೀ ಕುಟುಂಬವನ್ನು ಮನೆಗೆ ಆದರಿಸಿ ಸತ್ಕರಿಸಿದ್ದಾರೆ. ಜೊತೆಗೆ ತಾಯಿ ಆಗಲಿರುವ ಸಮಂತಾ ಅವರಿಗೆ ವಿಶೇಷ ಉಡುಗೊರೆಗಳನ್ನು ಸಹ ನೀಡಿ ಆಶೀರ್ವದಿಸಿದ್ದಾರೆ.

ತಾಯಿ ಆಗಲಿರುವ ಸಮಂತಾರನ್ನು ಮನೆಗೆ ಕರೆದು ಸತ್ಕರಿಸಿದ ಚಿರಂಜೀವಿ ದಂಪತಿ
Maa Inti Bangaram

Updated on: Jun 23, 2026 | 12:45 PM

ಸಮಂತಾ ಋತ್ ಪ್ರಭು (Samantha Ruth Prabhu) ನಟನೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿದ್ದು, ಈ ಫ್ಯಾಮಿಲಿ ಆಕ್ಷನ್ ಡ್ರಾಮಾ ಹಿಟ್ ಎನಿಸಿಕೊಂಡಿದೆ. ಕುಟುಂಬಗಳು ವಿಶೇಷವಾಗಿ ಮಹಿಳೆಯರು ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಪ್ರೇಕ್ಷಕರು ಮಾತ್ರವೇ ಕೆಲ ಸಿನಿಮಾ ಸೆಲೆಬ್ರಿಟಿಗಳು ಸಹ ‘ಮಾ ಇಂಟಿ ಬಂಗಾರಂ’ ಸಿನಿಮಾವನ್ನು ಮೆಚ್ಚಿಕೊಂಡಿದ್ದು, ಅವರಲ್ಲಿ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಚಿರಂಜೀವಿ ಸಹ ಒಬ್ಬರು. ಸಿನಿಮಾ ನೋಡಿ ಮೆಚ್ಚಿಕೊಂಡ ಮೆಗಾಸ್ಟಾರ್ ಚಿರಂಜೀವಿ, ಇಡೀ ಕುಟುಂಬವನ್ನು ಮನೆಗೆ ಆದರಿಸಿ ಸತ್ಕರಿಸಿದ್ದಾರೆ. ಜೊತೆಗೆ ತಾಯಿ ಆಗಲಿರುವ ಸಮಂತಾ ಅವರಿಗೆ ವಿಶೇಷ ಉಡುಗೊರೆಗಳನ್ನು ಸಹ ನೀಡಿ ಆಶೀರ್ವದಿಸಿದ್ದಾರೆ.

‘ಮಾ ಇಂಟಿ ಬಂಗಾರಂ’ ಸಿನಿಮಾದ ತಂಡವನ್ನು ಮನೆಗೆ ಆಹ್ವಾನಿಸಿದ್ದ ಚಿರಂಜೀವಿ, ತಾಯಿ ಆಗುತ್ತಿರುವ ಸಮಂತಾ ಅವರಿಗೆ ಸೀರೆ ಇನ್ನಿತರೆ ಪವಿತ್ರ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಮಂತಾ ಅವರಿಗೆ ಶಂಖವೊಂದನ್ನು ಸಹ ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ ನೀಡಿದ್ದಾರೆ. ಚಿತ್ರಗಳನ್ನು ಖುದ್ದು ಚಿರಂಜೀವಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಮಂತಾಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

‘ಮಾ ಇಂಟಿ ಬಂಗಾರಂ’ ಸಿನಿಮಾ ಬಹಳ ಆಸಕ್ತಿಕರ ಎನಿಸಿತು. ಕೌಟುಂಬಿಕೆ ಕತೆಯನ್ನು ಆಕ್ಷನ್, ಭಾವನೆಗಳು, ಸ್ತ್ರೀಪರ ನಿಲುವುಗಳನ್ನು ಹಾಸ್ಯದ ಲೇಪನದೊಂದಿಗೆ ನಿರ್ದೇಶಕಿ ನಂದಿನಿ ರೆಡ್ಡಿ ಅವರು ತೆರೆಗೆ ತಂದಿದ್ದಾರೆ. ಸಮಂತಾ ನಟನೆ ಚೆನ್ನಾಗಿದೆ, ಮುಖ್ಯವಾಗಿ ಅವರು ಸೀರೆಯುಟ್ಟು ಮಾಡುವ ಆಕ್ಷನ್ ದೃಶ್ಯಗಳು ಅದ್ಭುತವಾಗಿವೆ. ಈ ರೀತಿಯ ವೈವಿಧ್ಯಮಯ ಸ್ತ್ರೀ ಪ್ರಧಾನ ಸಿನಿಮಾಗಳು ತೆಲುಗು ಚಿತ್ರರಂಗಕ್ಕೆ ಅವಶ್ಯಕ. ಈ ಸಿನಿಮಾದ ಗೆಲುವಿಗೆ ಸಮಂತಾ, ನಂದಿನಿ, ರಾಜ್ ಇನ್ನೂ ಕೆಲ ಪ್ರಮುಖರಿಗೆ ಅಭಿನಂದನೆಗಳು. ಹಾಗೆಯೇ ಜೀವನದಲ್ಲಿ ಹೊಸ ಅಧ್ಯಾಯಕ್ಕೆ ಕಾಲಿರಿಸುತ್ತಿರುವ ಸಮಂತಾ ಮತ್ತು ರಾಜ್ ದಂಪತಿಗಳಿಗೆ ಅಭಿನಂದನೆಗಳು’ ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:3 ದಿನಕ್ಕೆ ಸಮಂತಾ ಚಿತ್ರದ ಕಲೆಕ್ಷನ್ 43 ಕೋಟಿ ರೂ.!

ಚಿತ್ರರಂಗದ ಹಿರಿಯರಾಗಿ, ಚಿರಂಜೀವಿ ಅವರ ಈ ಪ್ರೀತಿ ಪೂರ್ವಕ ನಡೆಯನ್ನು ಅಭಿಮಾನಿಗಳು ಪ್ರಶಂಸಿಸಿದ್ದಾರೆ. ಒಳ್ಳೆಯ ಸಿನಿಮಾಗಳನ್ನು ಚಿರಂಜೀವಿ ಬೆಂಬಲಿಸುತ್ತಿರುವ ರೀತಿಗೆ ನೆಟ್ಟಿಗರು ಭೇಷ್ ಎಂದಿದ್ದಾರೆ. ಯಾವುದೇ ಒಳ್ಳೆಯ ಸಿನಿಮಾಗಳು ಬಂದಾಗಲೂ ಸಹ ಚಿರಂಜೀವಿ ಅವರು ಖುದ್ದು ಆ ಸಿನಿಮಾ ನೋಡಿ, ತಂಡವನ್ನು ಮನೆಗೆ ಆಹ್ವಾನಿಸಿ ಸತ್ಕರಿಸುವ ಪದ್ಧತಿ ಇರಿಸಿಕೊಂಡಿದ್ದಾರೆ. ವಿಶೇಷವಾಗಿ ಸಣ್ಣ ಸಿನಿಮಾಗಳಿಗೆ ಚಿರಂಜೀವಿ ಈ ರೀತಿಯ ಬೆಂಬಲ ನೀಡುತ್ತಾ ಬಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us