ಚಿರಂಜೀವಿ ಮಾಡಿದ ಒಳ್ಳೆಯ ಕೆಲಸಕ್ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ; ನಟನ ಕೊಂಡಾಡಿದ ಫ್ಯಾನ್ಸ್

|

Updated on: Jul 10, 2023 | 10:57 AM

ಎಲ್ಲರ ಬಳಿಯೂ ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳುವಷ್ಟು ಹಣ ಇರುವುದಿಲ್ಲ. ಈ ಕಾರಣದಿಂದಲೇ ಚಿರಂಜೀವಿ ಅವರು ಉಚಿತ ಕ್ಯಾನ್ಸರ್ ಚಿಕಿತ್ಸೆ ಪರೀಕ್ಷೆ ಶಿಬಿರ ಆರಂಭಿಸಿದ್ದಾರೆ.

ಚಿರಂಜೀವಿ ಮಾಡಿದ ಒಳ್ಳೆಯ ಕೆಲಸಕ್ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ; ನಟನ ಕೊಂಡಾಡಿದ ಫ್ಯಾನ್ಸ್
ಚಿರಂಜೀವಿ
Follow us on

ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಸಿನಿಮಾ ಕೆಲಸಗಳ ಜೊತೆ ಹಲವು ಸಾಮಾಜಿಕ ಕೆಲಸದ ಕೆಲಸಗಳನ್ನು ಮಾಡಿ ಅವರು ಗುರುತಿಸಿಕೊಂಡಿದ್ದಾರೆ. ಈಗ ಚಿರಂಜೀವಿ ಮತ್ತೊಂದು ಒಳ್ಳೆಯ ಕೆಲಸಕ್ಕೆ ಕೈ ಹಾಕಿದ್ದಾರೆ. ಸಾರ್ವಜನಿಕರಿಗಾಗಿ ಉಚಿತ ಕ್ಯಾನ್ಸರ್ ತಪಾಸಣೆ  ಆರಂಭಿಸಿದ್ದಾರೆ. ಇದರ ಮೊದಲ ಶಿಬಿರ ಭಾನುವಾರ ಹೈದರಾಬಾದ್​ನಲ್ಲಿ (ಜುಲೈ 9) ನಡೆದಿದೆ. ಈ ವೇಳೆ ಎರಡು ಸಾವಿರಕ್ಕೂ ಅಧಿಕ ಮಂದಿ ತಪಾಸಣೆಗೆ ಒಳಗಾಗಿದ್ದಾರೆ. ನಟನ ಕೆಲಸಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇತ್ತೀಚೆಗೆ ಚಿರಂಜೀವಿ ಅವರು ಕ್ಯಾನ್ಸರ್​ ಸೆಂಟರ್​ ಉದ್ಘಾಟನೆ ಮಾಡಿದ್ದರು. ಈ ವೇಳೆ ಕ್ಯಾನ್ಸರ್ ಬಗ್ಗೆ​ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಕ್ಯಾನ್ಸರ್ ತಡೆಗಟ್ಟುವುದು ಹೇಗೆ ಎಂಬುದನ್ನು ವಿವರಿಸಿದ್ದರು. ಚಿರಂಜೀವಿ ಅವರಿಗೆ ಈ ಮೊದಲು ಕ್ಯಾನ್ಸರಸ್​ ಅಲ್ಲದ ಊತ ಕಾಣಿಸಿತ್ತು. ವೈದ್ಯರ ಬಳಿ ಇದನ್ನು ತಪಾಸಣೆ ಮಾಡಿಸಲಾಯಿತು. ಒಂದೊಮ್ಮೆ ಅದನ್ನು ತೆಗೆಯದೇ ಇದ್ದಿದ್ದರೆ ಅದು ಕ್ಯಾನ್ಸರ್​ ಆಗಿ ಬದಲಾಗುವ ಸಾಧ್ಯತೆ ಇತ್ತು. ಈ ಕಾರಣದಿಂದಲೇ ಚಿರಂಜೀವಿ ಅವರು ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅಭಿಮಾನಿಗಳ ಬಳಿ ಕೋರಿದ್ದರು.

ಎಲ್ಲರ ಬಳಿಯೂ ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳುವಷ್ಟು ಹಣ ಇರುವುದಿಲ್ಲ. ಈ ಕಾರಣದಿಂದಲೇ ಚಿರಂಜೀವಿ ಅವರು ಉಚಿತ ಕ್ಯಾನ್ಸರ್ ಚಿಕಿತ್ಸೆ ಪರೀಕ್ಷೆ ಶಿಬಿರ ಆರಂಭಿಸಿದ್ದಾರೆ. ಭಾನುವಾರ ಹೈದರಾಬಾದ್​ನ ಜುಬಿಲಿ ಹಿಲ್ಸ್​​ನಲ್ಲಿರುವ ಚಿರಂಜೀವಿ ಬ್ಲಡ್ ಬ್ಯಾಂಕ್‌ನಲ್ಲಿ ಕ್ಯಾನ್ಸರ್ ಪರೀಕ್ಷೆ ನಡೆದಿದೆ. ಚಿತ್ರರಂಗದ ಕಾರ್ಮಿಕರು, ಅಭಿಮಾನಿಗಳು ಮತ್ತು ಸಿನಿಮಾ ಪತ್ರಕರ್ತರು ಭಾಗವಹಿಸಿ ಉಚಿತ ಕ್ಯಾನ್ಸರ್ ತಪಾಸಣೆ ಪರೀಕ್ಷೆಗೆ ಒಳಗಾದರು. ಚಿರಂಜೀವಿ ಸದ್ಯ ವಿದೇಶಿ ಪ್ರವಾಸದಲ್ಲಿದ್ದಾರೆ. ಹೀಗಾಗಿ ಅವರ ಸಹೋದರ ನಾಗ ಬಾಬು ಅವರು ಇದರ ಮೇಲುಸ್ತುವಾರಿ ವಹಿಸಿಕೊಂಡಿದ್ದರು.

‘ಚಿರಂಜೀವಿ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ಇಂಥ ಕಾರ್ಯಕ್ರಮ ಆಯೋಜಿಸುತ್ತಿರುವುದು ನಿಜಕ್ಕೂ ನಮಗೆ ಹೆಮ್ಮೆ. ಶೀಘ್ರದಲ್ಲೇ ಕರೀಂನಗರ ಸೇರಿ ಸುಮಾರು 15 ನಗರಗಳಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ನಡೆಸಲಾಗುವುದು. ಈ ಸೇವೆಗಳನ್ನು ಎಲ್ಲರೂ ಬಳಸಿಕೊಳ್ಳಬೇಕು’ ಎಂದು ನಾಗಬಾಬು ಕೋರಿದರು.

ಇದನ್ನೂ ಓದಿ: ಕ್ಯಾನ್ಸರ್​ ಸುದ್ದಿ ಹಬ್ಬಿದ್ದಕ್ಕೆ ಚಿರಂಜೀವಿ ಅಭಿಮಾನಿಗಳಲ್ಲಿ ಆತಂಕ; ತಮ್ಮ ಹೆಲ್ತ್​ ಅಪ್​ಡೇಟ್​ ನೀಡಿದ ‘ಮೆಗಾ ಸ್ಟಾರ್​’

ಕೆಲವು ದಿನಗಳ ಹಿಂದೆ ಚಿರಂಜೀವಿ ಉಚಿತ ಕ್ಯಾನ್ಸರ್ ಪರೀಕ್ಷೆಗಳ ಬಗ್ಗೆ ಘೋಷಣೆ ಮಾಡಿದ್ದರು. ಅವರು ಹೇಳಿದ ಮಾತನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಚಿರಂಜೀವಿಗೆ ಕ್ಯಾನ್ಸರ್ ಇದೆ ಎಂಬ ಸುದ್ದಿ ಹರಡಿಸಿದ್ದರು. ಇದರಿಂದ ಅವರಿಗೆ ಬೇಸರ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 10:30 am, Mon, 10 July 23