ಪ್ರತಿ ವರ್ಷ ‘ಸಿನಿಮಾ ಲವರ್ಸ್ ಡೇ’ (Cinema Lovers Day) ಆಚರಣೆ ಮಾಡಲಾಗುತ್ತದೆ. ಮೇ 31ರಂದು ಶುಕ್ರವಾರ ಸಿನಿಪ್ರಿಯರ ಪಾಲಿಗೆ ಸಖತ್ ಸ್ಪೆಷಲ್ ಆಗಿರಲಿದೆ. ಭಾರತದ ಬಹುತೇಕ ಮಲ್ಟಿಪ್ಲೆಕ್ಸ್ಗಳಲ್ಲಿ ಮೇ 31ರಂದು ಯಾವುದೇ ಸಿನಿಮಾ ನೋಡಿದರೂ ಟಿಕೆಟ್ ಬೆಲೆ ಕೇವಲ 99 ರೂಪಾಯಿ ಆಗಿರಲಿದೆ. ಭಾರತದ ಮಲ್ಟಿಪ್ಲೆಕ್ಸ್ ಒಕ್ಕೂಟವು (Multiplex Association of India) ಈ ಬಗ್ಗೆ ಪ್ರಕಟಣೆ ನೀಡಿದೆ. ಪಿವಿಆರ್ ಐನಾಕ್ಸ್, ಸಿನಿಪೊಲಿಸ್ ಮುಂತಾದ ಮಲ್ಟಿಪ್ಲೆಕ್ಸ್ಗಳಲ್ಲಿ (Multiplex) ಈ ಆಫರ್ ನೀಡಲಾಗುತ್ತಿದೆ. ಈ ವಾರ (ಮೇ 31) ಬಿಡುಗಡೆ ಆಗಲಿರುವ ಸಿನಿಮಾಗಳನ್ನು ನೋಡುವ ಪ್ರೇಕ್ಷಕರಿಗೆ ಈ ಆಫರ್ನಿಂದ ಸಖತ್ ಖುಷಿ ಆಗಲಿದೆ.
ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವವರ ಸಂಖ್ಯೆ ಕಡಿಮೆ ಆಗಿದೆ. ಅದಕ್ಕೆ ಒಂದು ಮುಖ್ಯ ಕಾರಣ ಏನೆಂದರೆ ಟಿಕೆಟ್ಗಳ ದುಬಾರಿ ದರ. ಅದರಲ್ಲೂ ಮಲ್ಟಿಪ್ಲೆಕ್ಸ್ಗಳಲ್ಲಿ ಎಲ್ಲ ಸಿನಿಮಾಗಳ ಟಿಕೆಟ್ ಬೆಲೆ ಜಾಸ್ತಿ ಇರುತ್ತದೆ. ವಿಶೇಷ ದಿನಗಳಲ್ಲಿ ಬರೀ 99 ರೂಪಾಯಿಗೆ ಸಿನಿಮಾ ಟಿಕೆಟ್ಗಳನ್ನು ಮಾರಾಟ ಮಾಡಿದಾಗ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಬಂದು ಸಿನಿಮಾ ನೋಡುತ್ತಾರೆ. ಅದಕ್ಕಾಗಿ ‘ಸಿನಿಮಾ ಲವರ್ಸ್ ಡೇ’ ಆಚರಿಸಲಾಗುತ್ತದೆ.
ಇದನ್ನೂ ಓದಿ: ಕಾವೇರಿ ಥಿಯೇಟರ್ ನೆಲಸಮ; ಏಕಪರದೆ ಚಿತ್ರಮಂದಿರಗಳ ಅಂತ್ಯದಿಂದ ಪ್ರೇಕ್ಷಕರ ಜೇಬಿಗೆ ಕತ್ತರಿ
ಕೊರೊನಾ ವೈರಸ್ ಹಾವಳಿ ಶುರುವಾದ ನಂತರ ಮಲ್ಟಿಪ್ಲೆಕ್ಸ್ ಮತ್ತು ಏಕಪರದೆ ಚಿತ್ರಮಂದಿರಗಳಲ್ಲಿ ಬಂದು ಸಿನಿಮಾ ನೋಡುವವರು ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಮತ್ತೆ ಪ್ರೇಕ್ಷಕರನ್ನು ಸೆಳೆಯಲು ಮಲ್ಟಿಪ್ಲೆಕ್ಸ್ಗಳ ಹೊಸ ತಂತ್ರ ರೂಪಿಸಿದವು. ‘ಸಿನಿಮಾ ಲವರ್ಸ್ ಡೇ’ ಹೆಸರಲ್ಲಿ ಆಫರ್ ಬೆಲೆಗೆ ಟಿಕೆಟ್ಗಳನ್ನು ನೀಡುವ ಮೂಲಕ ಜನರನ್ನು ಸೆಳೆಯಲಾಯಿತು. ಈ ವರ್ಷ ಮೇ 31ರಂದು ‘ಸಿನಿಮಾ ಲವರ್ಸ್ ಡೇ’ ಸೆಲೆಬ್ರೇಟ್ ಮಾಡಲಾಗುತ್ತಿದೆ.
Blockbuster thrills at an unbelievable price! 🎥✨ This Cinema Lovers’ Day, enjoy any of these latest movies for just ₹99. 🎫 Hurry up! The offer is valid only for May 31.
Note: Recliners and premium formats are not included.
Book your tickets now: https://t.co/WyiWtS0CBM… pic.twitter.com/qnULttf2C4
— P V R C i n e m a s (@_PVRCinemas) May 29, 2024
ಪಿವಿಆರ್ ಐನಾಕ್ಸ್, ಸಿನಿಪೊಲಿಸ್, ಮಿರಾಜ್, ಸಿಟಿ ಪ್ರೈಡ್, ಏಷ್ಯನ್ ಸಿನಿಮಾಸ್, ಮೂವೀ ಟೈಮ್, ಮೂವೀ ಮ್ಯಾಕ್ಸ್ ಮುಂತಾದ ಮಲ್ಟಿಪ್ಲೆಕ್ಸ್ಗಳು ‘ಸಿನಿಮಾ ಲವರ್ಸ್ ಡೇ’ ಆಚರಿಸುತ್ತಿವೆ. ಈ ವಾರ ಬಿಡುಗಡೆ ಆಗಲಿರುವ ‘ಮಿಸ್ಟರ್ ಆ್ಯಂಡ್ ಮಿಸೆಸ್ ಮಾಹಿ’, ‘ಫಾಸ್ಟ್ ಚಾರ್ಲಿ’, ‘ಸವಿ’, ‘ಸ್ಟ್ರೇಂಜರ್ಸ್’ ಮುಂತಾದ ಸಿನಿಮಾಗಳನ್ನು ಕೂಡ ಕೇವಲ 99 ರೂಪಾಯಿಗೆ ನೋಡುವ ಅವಕಾಶ ಸಿನಿಪ್ರಿಯರಿಗೆ ಸಿಗಲಿದೆ. ಈ ಆಫರ್ ಕೇವಲ ಒಂದು ದಿನ ಇರಲಿದೆ. ಐಷಾರಾಮಿ ಆಸನಗಳಿಗೆ ಈ ಆಫರ್ ಅನ್ವಯ ಆಗುವುದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.