ಕದ್ದುಮುಚ್ಚಿ ‘ಜನ ನಾಯಗನ್’ ನೋಡಲು ಚಿತ್ರಮಂದಿರಕ್ಕೆ ಬಂದ ವಿಜಯ್ ಪತ್ನಿ ಸಂಗೀತಾ?

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಬಿಡುಗಡೆ ಆಗಿ ಅಭಿಮಾನಿಗಳನ್ನು ರಂಜಿಸುತ್ತಿದೆ. ಇದು ವಿಜಯ್ ಅವರ ಕೊನೆಯ ಸಿನಿಮಾ ಆದ್ದರಿಂದ ಭಾರೀ ಕ್ರೇಜ್ ಸೃಷ್ಟಿ ಮಾಡಿದೆ. ಈ ಸಿನಿಮಾವನ್ನು ವಿಜಯ್ ಪತ್ನಿ ಸಂಗೀತಾ ಕೂಡ ವೀಕ್ಷಿಸಿದ್ದಾರೆ ಎಂದು ಕೆಲವರು ವದಂತಿ ಹಬ್ಬಿಸಿದ್ದಾರೆ.

ಕದ್ದುಮುಚ್ಚಿ ‘ಜನ ನಾಯಗನ್’ ನೋಡಲು ಚಿತ್ರಮಂದಿರಕ್ಕೆ ಬಂದ ವಿಜಯ್ ಪತ್ನಿ ಸಂಗೀತಾ?
Sangeetha Sornalingam, CM Vijay

Updated on: Jul 24, 2026 | 6:10 PM

ಮುಖ್ಯಾಂಶಗಳು

  • ಜುಲೈ 23ರಂದು ಅದ್ದೂರಿಯಾಗಿ ಬಿಡುಗಡೆ ಆಗಿದೆ ‘ಜನ ನಾಯಗನ್’ ಸಿನಿಮಾ.
  • ಚಿತ್ರಮಂದಿರಗಳ ಎದುರು ದಳಪತಿ ವಿಜಯ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
  • ಇದೇ ಸಂದರ್ಭದಲ್ಲಿ ವಿಜಯ್ ಪತ್ನಿ ಸಂಗೀತಾ ಅವರ ವಿಡಿಯೋ ವೈರಲ್ ಆಗಿದೆ.

ತಮಿಳುನಾಡು ಮುಖ್ಯಮಂತ್ರಿ ಹಾಗೂ ಪ್ರಸಿದ್ಧ ನಟ ವಿಜಯ್ (CM Vijay) ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’ (Jana Nayagan) ಜುಲೈ 23ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ತಿಂಗಳುಗಳ ಕಾಲ ಸೆನ್ಸಾರ್ ಮಂಡಳಿಯ ತೊಡಕುಗಳಿಂದ ವಿಳಂಬವಾಗಿದ್ದ ಈ ಸಿನಿಮಾ ಕೊನೆಗೂ ತೆರೆಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಸಿನಿಮಾ ರಿಲೀಸ್ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಮ್ (Sangeetha Sornalingam) ಅವರ ವೀಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಂಗೀತಾ ಅವರು ‘ಜನ ನಾಯಗನ್’ ಸಿನಿಮಾ ವೀಕ್ಷಿಸಲು ಥಿಯೇಟರ್‌ಗೆ ಆಗಮಿಸಿದ್ದಾರೆ ಎಂಬ ಕ್ಯಾಪ್ಷನ್​ನೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿತ್ತು.

ವೈರಲ್ ವೀಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ವೀಡಿಯೋ ಕ್ಲಿಪ್‌ನಲ್ಲಿ ಸಂಗೀತಾ ಅವರು ಸಾಂಪ್ರದಾಯಿಕ ಉಡುಪಿನಲ್ಲಿ, ಮಾಸ್ಕ್ ಧರಿಸಿ ಕಾರಿನಿಂದ ಕೆಳಗಿಳಿಯುವುದು ಕಂಡುಬಂದಿದೆ. ವಿಜಯ್ ಅವರ ಕೊನೆಯ ಚಿತ್ರವನ್ನು ವೀಕ್ಷಿಸಲು ಸಂಗೀತಾ ಥಿಯೇಟರ್‌ಗೆ ಬಂದಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ. ಸಂಗೀತಾ ಅವರು ಮಾಸ್ಕ್ ಧರಿಸಿರಿ ಕದ್ದು ಮುಚ್ಚಿ ಬಂದಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಆದರೆ ಅದು ನಿಜವಲ್ಲ.

ಈ ವೀಡಿಯೋದ ಅಸಲಿ ಸತ್ಯಾಂಶವೇನು?

ವಿಡಿಯೋದ ಅಸಲಿ ವಿಷಯ ಬೇರೆಯೇ ಇದೆ. ಫ್ಯಾಕ್ಟ್ ಚೆಕ್ ಪ್ರಕಾರ, ಈ ವೀಡಿಯೋ ಹಳೆಯದಾಗಿದ್ದು, ‘ಜನ ನಾಯಗನ್’ ಸಿನಿಮಾ ಬಿಡುಗಡೆಗೂ ಮುನ್ನದ್ದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹಳೆಯ ವೀಡಿಯೋವನ್ನು ಹಾಗೂ ‘ಜನ ನಾಯಗನ್’ ಬಿಡುಗಡೆಯಾದ ಥಿಯೇಟರ್‌ನ ಇತ್ತೀಚಿನ ದೃಶ್ಯಗಳೊಂದಿಗೆ ಎಡಿಟ್ ಮಾಡಿ ಶೇರ್ ಮಾಡಿದ್ದಾರೆ. ಸಂಗೀತಾ ಅವರು ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಿಸಿದ್ದಾರೆ ಎಂಬುದಕ್ಕೆ ಯಾವುದೇ ಅಧಿಕೃತ ಆಧಾರಗಳಿಲ್ಲ.

ಇದನ್ನೂ ಓದಿ: ಕುಟುಂಬದ ಜೊತೆ ‘ಜನ ನಾಯಗನ್’ ಸಿನಿಮಾ ನೋಡಿ ಎಂಜಾಯ್ ಮಾಡಿದ ತ್ರಿಷಾ ಕೃಷ್ಣನ್

ಸಂಗೀತಾ-ವಿಜಯ್ ವಿಚ್ಛೇದನದ ವದಂತಿಗಳು:

1999ರ ಆಗಸ್ಟ್ 25ರಂದು ವಿವಾಹವಾಗಿದ್ದ ವಿಜಯ್ ಮತ್ತು ಸಂಗೀತಾ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಆದರೆ, ಸುಮಾರು 30 ವರ್ಷಗಳ ದಾಂಪತ್ಯ ಜೀವನದ ನಂತರ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮೇ 10ರಂದು ನಡೆದ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪತ್ನಿ ಸಂಗೀತಾ ಮತ್ತು ಮಕ್ಕಳು ಭಾಗವಹಿಸಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us