
ರಶ್ಮಿಕಾ ಮಂದಣ್ಣ (Rashmika Mandanna), ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ನಟಿಸಿರುವ ‘ಕಾಕ್ಟೇಲ್ 2’ ಹಿಂದಿ ಸಿನಿಮಾ ಇಂದು (ಜೂನ್ 19) ಬಿಡುಗಡೆ ಆಗಿದೆ. ಭಾರಿ ಬಜೆಟ್ನಲ್ಲಿ ನಿರ್ಮಿಸಿ, ಭಾರಿ ಪ್ರಚಾರದೊಂದಿಗೆ ಸಿನಿಮಾ ಬಿಡುಗಡೆ ಆಗಿದೆ. ಆದರೆ ಮೊದಲ ದಿನವೇ ಸಿನಿಮಾಕ್ಕೆ ಭರಪೂರ ಋಣಾತ್ಮಕ ವಿಮರ್ಶೆಗಳು ಎದುರಾಗಿವೆ. ಸಿನಿಮಾನಲ್ಲಿ ಗ್ಲಾಮರ್ ಹೊರತಾಗಿ ಇನ್ನೇನೂ ಇಲ್ಲ ಎಂದು ನೆಟ್ಟಿಗರು ಟೀಕೆ ಮಾಡಿದ್ದಾರೆ. ಕೆಲವರಂತೂ ಇದೊಂದು ‘ಅನವಶ್ಯಕ’ ಸೀಕ್ವೆಲ್ ಎಂದು ಸಹ ಕರೆದಿದ್ದಾರೆ.
#Cocktail2Review : ⭐️✨#Cocktail2 is an absolute nightmare and the perfect example of a soulless sequel. I started watching this hoping for a vibrant, modern relationship drama, but it proved to be a thoroughly painful, hollow, and utterly frustrating experience.
The… pic.twitter.com/2yg2g1PP6S
— Vishwajit Patil (@_PatilVishwajit) June 19, 2026
ಸಿನಿಮಾ ನೋಡಿದ ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ಬಹುತೇಕರು ಸಿನಿಮಾ ಚೆನ್ನಾಗಿಲ್ಲವೆಂದೇ ಹೇಳಿದ್ದಾರೆ. ಅದರಲ್ಲೂ ರಶ್ಮಿಕಾ ನಟನೆ ನಿರೀಕ್ಷಿತ ಮಟ್ಟದಲ್ಲಿಲ್ಲವೆಂದು, ರಶ್ಮಿಕಾರನ್ನು ತಪ್ಪು ಪಾತ್ರಕ್ಕೆ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ. ವಿಶ್ವಜಿತ್ ಪಟೇಲ್ ಎಂಬುವರು ಟ್ವೀಟ್ ಮಾಡಿ, ‘ಈ ಸಿನಿಮಾ ಒಂದು ಕೆಟ್ಟ ಕನಸಿನಂತಿದೆ. ಆತ್ಮವೇ ಇಲ್ಲದ ಸೀಕ್ವೆಲ್ (ಎರಡನೇ ಭಾಗ)ಕ್ಕೆ ಇದೊಂದು ಒಳ್ಳೆಯ ಉದಾಹರಣೆ. ಇದೊಂದು ಬೋರು ಹೊಡೆಸುವ, ಟೊಳ್ಳಾದ ಅನುಭವ ನೀಡುವ ಸಿನಿಮಾ ಎಂದಿದ್ದಾರೆ. ರಶ್ಮಿಕಾ ನಟನೆಯನ್ನು ಟೀಕಿಸಿರುವ ವಿಶ್ವಜಿತ್, ರಶ್ಮಿಕಾರ ಹಿಂದಿ ಸಹ ಬಲು ಕೆಟ್ಟದಾಗಿದೆ’ ಎಂದಿದ್ದಾರೆ.
#Cocktail2 Review – 3.5 ⭐⭐⭐✨
First of all Why is this movie rated ‘A’? Have I seen another print !
~ POSITIVES~
– Stunning Sicily visuals & cinematography make it a visual treat.
– Kriti Sanon is the soul of the film – best performance & full charm.
– Pritam’s music… pic.twitter.com/V3ZtrVdpoa
— Mr SP (@Lonely_prabh) June 19, 2026
ಮಿಸ್ಟರ್ ಎಸ್ಪಿ ಎಂಬುವರು ಟ್ವೀಟ್ ಮಾಡಿ ಸಿನಿಮಾ ಚೆನ್ನಾಗಿದೆ ಎಂದಿದ್ದಾರಾದರೂ ರಶ್ಮಿಕಾರ ನಟನೆ ಕೆಟ್ಟದಾಗಿದೆ ಎಂದಿದ್ದಾರೆ. ಸಿನಿಮಾ ಸ್ಟೈಲಿಷ್ ಆಗಿದೆ, ದೃಶ್ಯಗಳು ರಿಚ್ ಆಗಿವೆ. ಹಾಡುಗಳು, ಸಂಗೀತ ಚೆನ್ನಾಗಿದೆ. ಕೆಲವು ಕಡೆ ಮೆಲೋಡ್ರಾಮಾ ಚೆನ್ನಾಗಿದೆ ಎಂದಿದ್ದಾರೆ. ಆದರೆ ರಶ್ಮಿಕಾ ನಟನೆ ಚೆನ್ನಾಗಿಲ್ಲ, ಅವರ ಪಾತ್ರ ಪೋಷಣೆ ಚೆನ್ನಾಗಿಲ್ಲ. ಅವರ ಸಂಭಾಷಣೆ ಬಲು ನಾಟಕೀಯವಾಗಿದೆ ಎಂದಿದ್ದಾರೆ.
They literally picked up the loyalty test sub-plot from #TJMM and made it into an entire film with unnecessary fillers and stretched scenes. The second half tests your patience.
Full Review in a While.
— Nishit Shaw (@NishitShawHere) June 19, 2026
ನಿತೀಷ್ ಶಾ ಎಂಬುವರು ಟ್ವೀಟ್ ಮಾಡಿ, ‘ತು ಜೂಟಿ ಮೇ ಮಕ್ಕಾರ್’ ಸಿನಿಮಾದ ಒಂದು ದೃಶ್ಯವನ್ನು ಇರಿಸಿಕೊಂಡು ಪೂರ್ತಿ ಸಿನಿಮಾವನ್ನು ಮಾಡಿದಂತೆ ‘ಕಾಕ್ಟೇಲ್ 2’ ಭಾಸವಾಗುತ್ತದೆ. ಸಿನಿಮಾದ ತುಂಬ ಬಹಳ ಅನವಶ್ಯಕ ದೃಶ್ಯಗಳು ಇವೆ. ಸಿನಿಮಾದ ಎರಡನೇ ಅರ್ಧವಂತೂ ಪ್ರೇಕ್ಷಕನ ತಾಳ್ಮೆಯನ್ನು ಪರೀಕ್ಷೆ ಮಾಡುತ್ತದೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ