ಕರಾವಳಿಗೆ ಸೀಮಿತವಾಗಿರುವ ತುಳು ಸಿನಿಮಾಗಳು ಸದ್ಯ ರಾಜ್ಯದಲ್ಲಿ ಮಾತ್ರವಲ್ಲದೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದು ಮಾಡಲು ಆರಂಭಿಸಿವೆ. ಆದರೆ, ತುಳು ಸಿನಿಮಾ ಒಂದು ರೀತಿ ಡಿಫರೆಂಟ್ ಕಣ್ರೀ.. ಸಾಮಾನ್ಯವಾಗಿ ಕನ್ನಡ ಅಥವಾ ಬೇರೆ ಯಾವುದೇ ಭಾಷೆಗಳಲ್ಲಿನ ಸಿನಿಮಾಗಳನ್ನು ನೋಡಿದರೆ ಹೀರೋ ಫಸ್ಟ್, ಇತರರು ನೆಕ್ಸ್ಟ್. ಆದರೆ, ತುಳು ಸಿನಿಮಾದಲ್ಲಿ ಕಾಮಿಡಿಯನ್ಸ್ ಫಸ್ಟ್, ಹೀರೋ ನೆಕ್ಸ್ಟ್. ಇದು ಯಾಕೆ ಹೀಗೆ ಎಂಬುದನ್ನು ತಿಳಿಯೋಣ. ಭಾರತದಲ್ಲಿ ರಂಗಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ನಾಟಕಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಈ ನಾಟಕ ಕ್ಷೇತ್ರದಲ್ಲಿ ಕಲಾವಿದರು ಪಾತ್ರಕ್ಕೆ ತಕ್ಕಂತೆ ಬಣ್ಣ ಹಚ್ಚಿ ಅಭಿನಯಿಸಿ ಪ್ರೇಕ್ಷಕರನ್ನು ಮನರಂಜಿಸುತ್ತಾರೆ. ಇಂತಹ ನಾಟಕ ರಂಗ ಸಿನಿಮಾ ರಂಗಕ್ಕೆ ಅನೇಕ ನಟರನ್ನು ನೀಡಿದೆ ಎಂಬ ವಿಚಾರ ಎಲ್ಲರಿಗೂ ತಿಳಿದೆ. ಡಾ.ರಾಜ್ಕುಮಾರ್ ಅವರು ಕನ್ನಡ ಸಿನಿಮಾಗಳಲ್ಲಿ ಖ್ಯಾತಿ ಪಡೆದು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಆದರೆ, ಇವರು ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ರಂಗಭೂಮಿಯ ಮೇರುನಟರಾಗಿ ಗುರುತಿಸಿಕೊಂಡಿದ್ದರು. ಹೀಗೆ ಅನೇಕ ನಟರು ನಾಟಕಗಳಲ್ಲಿ ಅಭಿನಯಿಸಿ ಸಿನಿಮಾ ಕ್ಷೇತ್ರಗಳಲ್ಲೂ ನಟಿಸಿ ಮಿಂಚಿದ್ದಾರೆ. ಅದೇ ರೀತಿ ಕರ್ನಾಟಕದಲ್ಲಿರುವ ಮತ್ತೊಂದು ಸಿನಿಮಾ ರಂಗ ಕೋಸ್ಟಲ್ವುಡ್ನಲ್ಲೂ (ತುಳು ಸಿನಿಮಾ) ಬಹುತೇಕ ನಟರು ನಾಟಕ ರಂಗದಲ್ಲಿ ಪಳಗಿದವರಾಗಿದ್ದಾರೆ. ಆದರೆ, ಸ್ಯಾಂಡಲ್ವುಡ್, ಬಾಲಿವುಡ್, ಟಾಲಿವುಡ್ ಸಿನಿಮಾಗಳಲ್ಲಿ ಹೀರೋಗೆ ಹೆಚ್ಚು ಪ್ರಾಮುಖ್ಯತೆ ನೀಡಿದಂತೆ ತುಳು ಸಿನಿಮಾಗಳಲ್ಲಿ ಹೀರೋಗಳಿಗೆ ಪ್ರಾಮುಖ್ಯತೆ ಇರುವುದಿಲ್ಲ. ಯಾಕೆ ಎಂಬುದರ ಬಗ್ಗೆ ಅನೇಕ ನಾಟಕಗಳಿಗೆ ಸಾಹಿತ್ಯ ಮತ್ತು ಸಂಭಾಷಣೆ ಬರೆದಿರುವ ನಿರ್ದೇಶಕ, ನಟ ವಿಜಯ್ ಕುಮಾರ್ ಕೊಡಿಯಾಲ್ಬೈಲ್ ಅವರು ಟಿವಿ9 ಪ್ರೀಮಿಯಂ ನ್ಯೂಸ್ ಆ್ಯಪ್ಗೆ ತಿಳಿಸಿದ್ದಾರೆ. ಅದೇ ರೀತಿ,...
Published On - 11:49 am, Mon, 8 April 24