ಹೊರ ನಗರ, ರಾಜ್ಯಗಳಿಗೆ ತೆರಳಲು ದರ್ಶನ್, ಪವಿತ್ರಾ ಗೌಡಗೆ ನ್ಯಾಯಾಲಯ ಅನುಮತಿ

|

Updated on: Jan 10, 2025 | 3:48 PM

Darshan Thoogudeepa: ದರ್ಶನ್ ತೂಗುದೀಪ, ಪವಿತ್ರಾ ಗೌಡ ಮತ್ತು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಹುತೇಕ ಎಲ್ಲ ಆರೋಪಿಗಳು ಇಂದು (ಜನವರಿ 10) ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ದರ್ಶನ್ ಮತ್ತು ಪವಿತ್ರಾ ಅವರುಗಳು ನ್ಯಾಯಾಲಯದ ಮುಂದೆ ಪ್ರತ್ಯೇಕ ಮನವಿಗಳನ್ನು ಇರಿಸಿದ್ದರು, ನ್ಯಾಯಾಲಯ ಇಬ್ಬರಿಗೂ ಅನುಮತಿಗಳನ್ನು ನೀಡಿದೆ.

ಹೊರ ನಗರ, ರಾಜ್ಯಗಳಿಗೆ ತೆರಳಲು ದರ್ಶನ್, ಪವಿತ್ರಾ ಗೌಡಗೆ ನ್ಯಾಯಾಲಯ ಅನುಮತಿ
Darshan Thoogudeepa Movie
Follow us on

ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ರೇಣುಕಾ ಸ್ವಾಮಿ ಕೊಲೆಯ ಎಲ್ಲ ಆರೋಪಿಗಳು ಇಂದು (ಜನವರಿ 10) ಬೆಂಗಳೂರಿನ ಸಿಸಿಎಚ್ 57 ಕೋರ್ಟ್‌ಗೆ ಹಾಜರಾಗಿದ್ದರು. ರೇಣುಕಾ ಸ್ವಾಮಿ ಬಂಧನದ ಬಳಿಕ ಇದೇ ಮೊದಲ ಬಾರಿಗೆ ದರ್ಶನ್ ಹಾಗೂ ಪವಿತ್ರಾ ಗೌಡ ಸಾರ್ವಜನಿಕವಾಗಿ ಮುಖಾ ಮುಖಿ ಆಗಿದ್ದರು. ಎಲ್ಲ ಆರೋಪಿಗಳ ಹಾಜರಿ ಪಡೆದ ನ್ಯಾಯಾಧೀಶರು ಆ ನಂತರ ಪ್ರಕರಣವನ್ನು ಫೆಬ್ರವರಿ 25ಕ್ಕೆ ಮುಂದೂಡಿದರು. ಈ ನಡುವೆ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರುಗಳು ಪ್ರತ್ಯೇಕವಾಗಿ ನ್ಯಾಯಾಧೀಶರ ಬಳಿ ಬೆಂಗಳೂರು ಬಿಟ್ಟು ಹೊರಗೆ ಪ್ರಯಾಣಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದರು.

ನಟ ದರ್ಶನ್, ಮೈಸೂರಿಗೆ ತೆರಳಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದರು. ಅದರಂತೆ ನಟಿ ಪವಿತ್ರಾ ಗೌಡ ಕರ್ನಾಟಕ ಬಿಟ್ಟು ಹೊರರಾಜ್ಯಕ್ಕೆ ತೆರಳಲು ಅನುಮತಿ ಕೋರಿದ್ದರು. ಇಬ್ಬರಿಗೂ ನ್ಯಾಯಾಲಯ ಅನುಮತಿ ನೀಡಿದೆ. ದರ್ಶನ್, ಐದು ದಿನಗಳ ಕಾಲ ಮೈಸೂರಿಗೆ ತೆರಳಬಹುದಾಗಿದೆ. ಜನವರಿ 12 ರಿಂದ 17ರವರೆಗೆ ದರ್ಶನ್ ಮೈಸೂರಿನಲ್ಲಿ ಇರಬಹುದಾಗಿದೆ. ಅದಾದ ಬಳಿಕ ಮತ್ತೆ ಬೆಂಗಳೂರಿಗೆ ವಾಪಸ್ ಬರಬೇಕಿದೆ.

ಇದನ್ನೂ ಓದಿ:ತಿಂಗಳುಗಳ ಬಳಿಕ ದರ್ಶನ್, ಪವಿತ್ರಾ ಭೇಟಿ, ಕೋರ್ಟ್​ನಲ್ಲಿ ನಡೆದಿದ್ದೇನು?

ಇನ್ನು ಪವಿತ್ರಾ ಗೌಡ, ತಾವು ದೇವಾಲಯಕ್ಕೆ ತೆರಳಲು ಹಾಗೂ ತಮ್ಮ ವಸ್ತ್ರವಿನ್ಯಾಸದ ಬುಟಿಕ್​ಗಾಗಿ ಕೆಲ ವಸ್ತುಗಳನ್ನು ಖರೀದಿ ಮಾಡಲು ವ್ಯಾವಹಾರಿಕ ಕಾರಣಗಳಿಗಾಗಿ ಹೊರ ರಾಜ್ಯಗಳಿಗೆ ತೆರಳಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದರು. ಅದರಂತೆ ನ್ಯಾಯಾಧೀಶರು ಪವಿತ್ರಾ ಗೌಡಗೆ ಸಹ ಅನುಮತಿ ನೀಡಿದ್ದಾರೆ. ಪವಿತ್ರಾ ಗೌಡ ಹೊರ ರಾಜ್ಯಗಳಿಗೆ ದೇವಾಲಯಕ್ಕೆ ತೆರಳು ಸಾಧ್ಯತೆ ಇದೆ.

ದರ್ಶನ್, ‘ಡೆವಿಲ್’ ಸಿನಿಮಾದ ಚಿತ್ರೀಕರಣ ಶುರು ಮಾಡುವ ಆಲೋಚನೆಯಲ್ಲಿದ್ದು, ಇದೇ ಕಾರಣಕ್ಕೆ ಮೈಸೂರಿಗೆ ತೆರಳಲು ಅನುಮತಿ ಕೋರಿದ್ದರು ಎನ್ನಲಾಗುತ್ತಿದೆ. ಆದರೆ ನ್ಯಾಯಾಲಯವು ಕೇವಲ ಐದು ದಿನಗಳ ಕಾಲವಷ್ಟೆ ಬೆಂಗಳೂರಿಗೆ ಹೋಗಲು ಅನುಮತಿ ನೀಡಿದೆ. ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 25ಕ್ಕೆ ಮುಂದೂಡಲಾಗಿದ್ದು, ಆಗ ಚಿತ್ರೀಕರಣಕ್ಕೆ ವಿಶೇಷ ಅನುಮತಿಯನ್ನು ದರ್ಶನ್ ಕೇಳುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ