ಕನ್ನಡದಲ್ಲೂ ಬಂತು ‘ದೇವರ’ ಚಿತ್ರದ ಸಾಂಗ್; ಜೂ. ಎನ್​ಟಿಆರ್​-ಜಾನ್ವಿ ಸಖತ್ ರೊಮ್ಯಾಂಟಿಕ್

‘ದೇವರ’ ಸಿನಿಮಾದಲ್ಲಿ ಜೂನಿಯರ್ ಎನ್​ಟಿಆರ್​ಗೆ ಜಾನ್ವಿ ಕಪೂರ್ ಅವರು ಜೊತೆಯಾಗಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್​ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 27ರಂದು ರಿಲೀಸ್ ಆಗಲಿದೆ. ಅದಕ್ಕೂ ಮೊದಲು ‘ಸ್ವಾತಿಮುತ್ತೇ ಸಿಕ್ಕಂಗೈತೆ..’ ರೊಮ್ಯಾಂಟಿಕ್‌ ಹಾಡು ಎಲ್ಲರ ಗಮನ ಸೆಳೆಯುತ್ತಿದೆ.

ಕನ್ನಡದಲ್ಲೂ ಬಂತು ‘ದೇವರ’ ಚಿತ್ರದ ಸಾಂಗ್; ಜೂ. ಎನ್​ಟಿಆರ್​-ಜಾನ್ವಿ ಸಖತ್ ರೊಮ್ಯಾಂಟಿಕ್
ಜೂ. ಎನ್​​ಟಿಆರ್​-ಜಾನ್ವಿ

Updated on: Aug 06, 2024 | 7:02 AM

ಟಾಲಿವುಡ್ ನಟ ಜೂನಿಯರ್ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ರಿಲೀಸ್​ಗೆ ಬಾಕಿ ಇರೋದು ಇನ್ನು ಕೆಲವೇ ವಾರಗಳು ಮಾತ್ರ. ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅದ್ಧೂರಿ ಬಜೆಟ್‌ನ ಈ ಪ್ಯಾನ್‌ ಇಂಡಿಯಾ ಸಿನಿಮಾಗೆ ಈಗ ಪ್ರಚಾರ ಆರಂಭಿಸಲಾಗಿದೆ. ಈ ಚಿತ್ರದ ಎರಡನೇ ಹಾಡನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಗಿದೆ. ಈ ಹಾಡು ಕನ್ನಡದಲ್ಲೂ ಇದ್ದು ಕೇಳುಗರಿಗೆ ಇಷ್ಟವಾಗಿದೆ. ಜೂನಿಯರ್ ಎನ್​ಟಿಆರ್​ ಹಾಗೂ ಜಾನ್ವಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.

‘ದೇವರ’ ಸಿನಿಮಾಗೆ ಖ್ಯಾತ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈಗಾಗಲೇ ‘ದೇವರ’ ತಂಡದಿಂದ ‘ಫಿಯರ್‌..’ ಹಾಡು ಬಿಡುಗಡೆಯಾಗಿದೆ. ಆ ಹಾಡಿನ ಮೂಲಕ ಪ್ರಚಾರ ಕೆಲಸ ಆರಂಭಿಸಿದ್ದ ಚಿತ್ರತಂಡ ಇದೀಗ ಎರಡನೇ ಹಾಡು ಬಿಡುಗಡೆ ಮಾಡಿದೆ. ಶಿಲ್ಪಾ ರಾವ್ ಕಂಠಸಿರಿಯಲ್ಲಿ ‘ಸ್ವಾತಿಮುತ್ತೇ ಸಿಕ್ಕಂಗೈತೆ..’ ರೊಮ್ಯಾಂಟಿಕ್‌ ಹಾಡು ಎಲ್ಲರ ಗಮನ ಸೆಳೆಯುತ್ತಿದೆ.
YouTube video player

ಈ ಹಾಡಿನಲ್ಲಿ ಜಾನ್ವಿ ಕಪೂರ್‌ ಗ್ಲಾಮರಸ್‌ ಅವತಾರದಲ್ಲಿ ಕಣ್ಮನ ಸೆಳೆದಿದ್ದಾರೆ. ಎನ್‌ಟಿಆರ್ ಮತ್ತು ಜಾನ್ವಿ ಜೋಡಿಯ ಕೆಮಿಸ್ಟ್ರಿಯೂ ನೋಡುಗರಿಗೆ ಇಷ್ಟ ಆಗಿದೆ. ವರದರಾಜ್‌ ಚಿಕ್ಕಬಳ್ಳಾಪುರ ಸಾಹಿತ್ಯ ಇರುವ ಈ ಹಾಡಿಗೆ ಬಾಸ್ಕೋ ಮಾರ್ಟಿಸ್ ಅವರ ನೃತ್ಯ ಸಂಯೋಜನೆ ಮಾಡಿದ್ದಾರೆ.

ಇದನ್ನೂ ಓದಿ: ‘ದೇವರ’ ಚಿತ್ರದಲ್ಲಿ ಹೇಗಿದೆ ನೋಡಿ ಜೂ. ಎನ್​ಟಿಆರ್- ಜಾನ್ವಿ ಕಪೂರ್ ಕೆಮಿಸ್ಟ್ರಿ

‘ದೇವರ’ ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್‌ ಆಗಲಿದೆ. ಮೊದಲ ಭಾಗ ಸೆಪ್ಟೆಂಬರ್ 27ರಂದು ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್‌ ಆಗಲಿದೆ. ಯುವಸುಧಾ ಆರ್ಟ್ಸ್‌ ಬ್ಯಾನರ್‌ ಅಡಿಯಲ್ಲಿ ಮಿಕ್ಕಿಲಿನೇನಿ ಸುಧಾಕರ್ ಹಾಗೂ ಹರಿಕೃಷ್ಣ ಕೆ. ‘ದೇವರ’ ಚಿತ್ರವನ್ನು ನಿರ್ಮಿಸಿದ್ದಾರೆ. ಬಾಲಿವುಡ್‌ ನಟಿ ಜಾನ್ವಿ ಕಪೂರ್‌ ಈ ಚಿತ್ರದ ಮೂಲಕ ದಕ್ಷಿಣಕ್ಕೆ ಕಾಲಿಡುತ್ತಿದ್ದಾರೆ. ಖಳ ನಟನಾಗಿ ಸೈಫ್‌ ಅಲಿಖಾನ್‌ ಚಿತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೊ, ನರೇನ್ ಸೇರಿ ಅನೇಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಕರ್ ಪ್ರಸಾದ್ ಸಂಕಲನ, ಆರ್. ರತ್ನವೇಲು ಛಾಯಾಗ್ರಹಣ, ಸಾಬು ಸಿರಿಲ್ ಪ್ರೊಡಕ್ಷನ್‌ ಡಿಸೈನ್‌ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:02 am, Tue, 6 August 24

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us