
ಮಂಗಳೂರು ಮೂಲದ ಧ್ರುವಂತ್ ಅವರು ದೊಡ್ಮನೆಗೆ ಬಂದಿದ್ದಾರೆ. ಅವರು ಈ ಮೊದಲು ವಿವಾದದ ಮೂಲಕ ಸುದ್ದಿ ಆಗಿದ್ದರು. ಆದರೆ, ಆ ವಿವಾದದ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಈಗ ಅವರು ಬಿಗ್ ಬಾಸ್ ವೇದಿಕೆ ಏರುವಾಗ ಕಾಂಟ್ರವರ್ಸಿ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಅವರು ಈ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.
‘ನಾನು ಹುಟ್ಟಿದ್ದು ಮಂಗಳೂರು. ಬೆಳೆದಿದ್ದು ಕೊಡಗಿನಲ್ಲಿ. ಐಟಿ ಕಂಪನಿ ಜಾಬ್ ಮಾಡಿದೆ. ಇಲ್ಲಿಗೆ ಸೇರಿದವವನು ಅಲ್ಲ ಅಂತ ಅನಿಸಿತು. ಕಲೆ ಬಗ್ಗೆ ಆಸಕ್ತಿ ಮೂಡಿತು. ಹೀಗೆ ಬಣ್ಣದ ಲೋಕಕ್ಕೆ ಬಂದು ಕಲಾ ಸೇವೆ ಮಾಡುತ್ತಿದ್ದೇನೆ. ಏನೇ ಬಂದರೂ ಹೆದರಲ್ಲ’ ಎಂದು ಹೇಳಿದ್ದಾರೆ.
‘ಮುದ್ದು ಲಕ್ಷ್ಮೀ’ ಧಾರಾವಾಹಿಯಲ್ಲಿ ನಟಿಸಿದ ಇವರು, ವಿವಾದದ ಮೂಲಕ ಸುದ್ದಿ ಆಗಿದ್ದರು. ಈ ಬಗ್ಗೆ ಸುದೀಪ್ ಅವರು ವೇದಿಕೆ ಮೇಲೆ ಚರ್ಚೆ ಮಾಡಿದರು. ‘ನೀವು ಹೊರಗೆ ವಿವಾದದ ಮೂಲಕ ಸುದ್ದಿ ಆದಿರಿ. ಈಗ ಒಳಗಡೆ ಬೇರೆ ರೀತಿಯ ವಿವಾದ ಆಗಬಹುದು. ಅದನ್ನು ಹೇಗೆ ಮ್ಯಾನೇಜ್ ಮಾಡ್ತೀರಾ’ ಎಂದು ಕೇಳಿದರು ಸುದೀಪ್. ‘ಹೊರಗೆ ವಿವಾದವನ್ನು ಹೇಗೋ ಮ್ಯಾನೇಜ್ ಮಾಡಬಹುದು. ಒಳಗಿನ ವಿವಾದವನ್ನು ಮ್ಯಾನೇಜ್ ಮಾಡೋದು ಕಷ್ಟ ಆಗಬಹುದು’ ಎಂದು ಧ್ರುವಂತ್ ಹೇಳಿದ್ದಾರೆ.
ಇದನ್ನೂ ಓದಿ: ‘ನಂಗೆ ಈ ರೀತಿಯಲ್ಲಿ ಬಿಗ್ ಬಾಸ್ ಆರಂಭಿಸೋಕೆ ಇಷ್ಟ ಇಲ್ಲ’; ನೇರವಾಗಿ ಹೇಳಿದ ಸುದೀಪ್
ಧ್ರುವಂತ್ ಅವರು 2024ರ ಡಿಸೆಂಬರ್ನಲ್ಲಿ ಸುದ್ದಿ ಆದರು. ಅವರು 29 ವರ್ಷದ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸಿದರು. ಈ ಪ್ರಕರಣದಲ್ಲಿ ಅವರು ಅರೆಸ್ಟ್ ಕೂಡ ಆದರು. ಈ ಆರೋಪವನ್ನು ಅವರು ತಳ್ಳಿ ಹಾಕಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.