AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಧಾರಾಣಿ-ಶಿವಣ್ಣನ ಸಂಬಂಧದ ಬಗ್ಗೆ ಅಪಪ್ರಚಾರ; ಶ್ವಾನಗಳ ಮೂಲಕ ಉತ್ತರ ಕೊಟ್ಟ ನಟಿ

ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ, AI ಸೃಷ್ಟಿಯ ತಪ್ಪು ಮಾಹಿತಿಯಿಂದ ಸೆಲೆಬ್ರಿಟಿಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ನಟಿ ಸುಧಾರಾಣಿ ಕೂಡ ತಮ್ಮ ಬಗ್ಗೆ ಹರಡಿದ 'ಫೇಕ್ ನ್ಯೂಸ್' ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯೂಟ್ಯೂಬರ್​ಗಳು ವೀವ್ಸ್​ಗಾಗಿ ಸೆಲೆಬ್ರಿಟಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಕಥೆಗಳನ್ನು ಸೃಷ್ಟಿಸುತ್ತಿದ್ದು, ಇದು ಅವರ ವ್ಯಕ್ತಿತ್ವಕ್ಕೆ ಹಾನಿ ಉಂಟುಮಾಡುತ್ತಿದೆ.

ಸುಧಾರಾಣಿ-ಶಿವಣ್ಣನ ಸಂಬಂಧದ ಬಗ್ಗೆ ಅಪಪ್ರಚಾರ; ಶ್ವಾನಗಳ ಮೂಲಕ ಉತ್ತರ ಕೊಟ್ಟ ನಟಿ
ಶಿವಣ್ಣ-ಸುಧಾರಾಣಿ
ರಾಜೇಶ್ ದುಗ್ಗುಮನೆ
|

Updated on:Apr 06, 2026 | 3:07 PM

Share

ಇತ್ತೀಚೆಗೆ ಸೋಶಿಯಲ್ ಮೀಡಿಯಾದ ಬಳಕೆ ಮಿತಿಮೀರಿ ಹೆಚ್ಚಿದೆ. ಯಾವುದು ಸುಳ್ಳು-ಯಾವುದು ನಿಜ? ಯಾವುದು ಎಐ-ಯಾವುದು ನಿಜವಾಗಲೂ ನಡೆದ ಘಟನೆ ಎಂಬುದನ್ನು ಪತ್ತೆ ಹಚ್ಚಲು ಅಸಾಧ್ಯ ಎಂಬ ರೀತಿಯ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಮಧ್ಯೆ ಸೆಲೆಬ್ರಿಟಿಗಳ ಹೆಸರನ್ನು ಬಳಕೆ ಮಾಡಿಕೊಂಡು ಅನೇಕರು ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಇಲ್ಲ, ಸಲ್ಲದ್ದನ್ನು ಹೇಳಲಾಗುತ್ತದೆ. ಈಗ ನಟಿ ಸುಧಾರಾಣಿ (Sudharani) ಕೂಡ ಈ ರೀತಿಯ ಫೇಕ್​ ನ್ಯೂಸ್​​ನ ಸಂತ್ರಸ್ತೆ ಆಗಿದ್ದಾರೆ. ಅವರು ಇದಕ್ಕೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗೆ ಕೆಲ ಯೂಟ್ಯೂಬರ್​​​ಗಳು ವೀವ್ಸ್ ಪಡೆಯಲು ಹೊಸ ತಂತ್ರವೊಂದನ್ನು ಕಂಡುಹಿಡಿದ್ದಾರೆ. ಸೆಲೆಬ್ರಿಟಿಗಳು ಹೇಳದೇ ಇರುವ ವಿಷಯವನ್ನು, ‘ಇತ್ತೀಚೆಗೆ ಅವರು ಸಂದರ್ಶನದಲ್ಲಿ ಹೇಳಿದ್ದಾರೆ’ ಎಂದು ಸೇರಿಸಿ ಸೃಷ್ಟಿಸುತ್ತಿದ್ದಾರೆ. ಇದರಿಂದ ಯೂಟ್ಯೂಬರ್​​ಗಳಿಗೆ ವೀವ್ಸ್ ಆಗುತ್ತಿದೆ ನಿಜ. ಆದರೆ, ಸೆಲೆಬ್ರಿಟಿಗಳ ಹೆಸರು ಹಾಳಾಗುತ್ತಿದೆ. ಸುಧಾರಾಣಿ ಬಗ್ಗೆಯೂ ಇದೇ ರೀತಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ.

ಸುದ್ದಿಯಲ್ಲೇನಿತ್ತು?

ಯೂಟ್ಯೂಬ್ ಥಂಬ್​​ನೇಲ್ ಮಾದರಿಯ ಸ್ಕ್ರೀನ್​ಶಾಟ್ ಅನ್ನು ಸುಧಾರಾಣಿ ಹಂಚಿಕೊಂಡಿದ್ದಾರೆ. ‘ಶಿವಣ್ಣನನ್ನು ಮದುವೆಯಾಗಬೇಕೆಂದು ಆಸೆ ಪಟ್ಟಿದ್ದರು ಸುಧಾರಾಣಿ. ಆನಂದ್ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಟಿ ಸುಧಾರಾಣಿ ಅವರಿಗೆ ಶಿವರಾಜ್ ಕುವಾರ್ ಕಂಡರೆ ಭಯವಿತ್ತು. ನಂತರ ಅವರ ಮೇಲೆ ಪ್ರೀತಿ ಹುಟ್ಟಿತು ಮತ್ತು ಮದುವೆಯಾಗುವ ಆಸೆಯೂ ಇತ್ತು. ಆದರೆ ಡಾ. ರಾಜ್‌ಕುಮಾ‌ರ್ ಅವರ ಮಗ ಎಂಬ ಕಾರಣದಿಂದ ಅವರು ಇದನ್ನು ಯಾರಿಗೂ ಹೇಳದೆ ಸುಮ್ಮನಾಗಿದ್ದರು. ಈ ವಿಷಯವನ್ನು ಅವರು ಇತ್ತೀಚಿನನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ’ ಎಂದು ಬರೆಯಲಾಗಿದೆ.

ಇದನ್ನೂ ಓದಿ:  ವಿನಯ್ ರಾಜ್​​ಕುಮಾರ್, ಮೇಘನಾ ಶೆಟ್ಟಿ ಜೊತೆಗೆ ಸುಧಾರಾಣಿ ಡ್ಯಾನ್ಸ್: ವಿಡಿಯೋ

ಉತ್ತರ ಕೊಟ್ಟ ನಟಿ

ಸುಧಾರಾಣಿ ಅವರು ಇದಕ್ಕೆ ಉತ್ತರ ಕೊಟ್ಟಿದ್ದಾರೆ. ತಾವು ಮನೆಯಲ್ಲಿ ಸಾಕಿದ ಶ್ವಾನಗಳು ಈ ವಿಷಯಕ್ಕೆ ಸ್ಪಷ್ಟನೆ ಕೊಡುವ ರೀತಿಯಲ್ಲಿ ಅವರು ವಿಡಿಯೋ ಮಾಡಿದ್ದಾರೆ. ಇದು ಫೇಕ್ ನ್ಯೂಸ್ ಎಂದಿದ್ದಾರೆ. ಅಲ್ಲದೆ, ಈ ರೀತಿಯ ವಿಡಿಯೋ ಮಾಡಿದರೆ ಕೇಸ್ ದಾಖಲಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ. ಕಂಡ ಕಂಡವರೆಲ್ಲ ವಿಡಿಯೋ ಮಾಡೋಕೆ ಆರಂಭಿಸಿದರೆ ಈ ರೀತಿ ಆಗುತ್ತದೆ ಎಂದು ಕೂಡ ಸುಧಾರಾಣಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:05 pm, Mon, 6 April 26

Follow Us
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು
ಬೆಂಗಳೂರಲ್ಲಿ ಟನಲ್ ರೋಡ್‌ಗೆ ಶಂಕುಸ್ಥಾಪನೆ: ಟೋಲ್ ಫ್ರೀ ಎಂದ ಸಿಎಂ!
ಬೆಂಗಳೂರಲ್ಲಿ ಟನಲ್ ರೋಡ್‌ಗೆ ಶಂಕುಸ್ಥಾಪನೆ: ಟೋಲ್ ಫ್ರೀ ಎಂದ ಸಿಎಂ!