‘ಧುರಂಧರ್ 2’ ಟಿಕೆಟ್ ಬೆಲೆ, ಯಾವ ನಗರದಲ್ಲಿ ಹೆಚ್ಚು? ಎಲ್ಲಿ ಕಡಿಮೆ?

Dhurandhar 2 movie: ‘ಧುರಂಧರ್ 2’ ಸಿನಿಮಾದ ಪ್ರೀಮಿಯರ್ ಶೋನ ಟಿಕೆಟ್​​ಗಳ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದ್ದು, ಭಾರತದ ಹಲವು ಪ್ರಮುಖ ನಗರಗಳಲ್ಲಿ ಮಾರ್ಚ್ 18ರ ಸಂಜೆಯೇ ಸಿನಿಮಾದ ಪ್ರೀಮಿಯರ್ ಶೋಗಳ ಪ್ರದರ್ಶನ ಆಗಲಿದೆ. ಭಾರಿ ದುಬಾರಿ ಬೆಲೆಯಲ್ಲಿ ‘ಧುರಂಧರ್ 2’ ಸಿನಿಮಾ ಪ್ರೀಮಿಯರ್ ಶೋ ಟಿಕೆಟ್​​ಗಳಿಗೆ ನಿಗದಿಪಡಿಸಲಾಗಿದೆ. ಅಷ್ಟಕ್ಕೂ ಯಾವ ನಗರದಲ್ಲಿ ‘ಧುರಂಧರ್ 2’ ಸಿನಿಮಾದ ಟಿಕೆಟ್ ಬೆಲೆ ಎಷ್ಟಿದೆ? ಎಲ್ಲಿ ದುಬಾರಿ? ಎಲ್ಲಿ ಕಡಿಮೆ?

‘ಧುರಂಧರ್ 2’ ಟಿಕೆಟ್ ಬೆಲೆ, ಯಾವ ನಗರದಲ್ಲಿ ಹೆಚ್ಚು? ಎಲ್ಲಿ ಕಡಿಮೆ?
ರಣವೀರ್ ಸಿಂಗ್

Updated on: Mar 10, 2026 | 1:04 PM

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ‘ಟಾಕ್ಸಿಕ್’ ಸಿನಿಮಾ ರೇಸಿನಿಂದ ಹಿಂದೆ ಸರಿದಿರುವ ಕಾರಣ ‘ಧುರಂಧರ್ 2’ ಸಿನಿಮಾಕ್ಕೆ ಎದುರಾಳಿಗಳೇ ಇಲ್ಲದಾಗಿದೆ. ಸಿನಿಮಾದ ಪ್ರೀಮಿಯರ್ ಶೋನ ಟಿಕೆಟ್​​ಗಳ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದ್ದು, ಭಾರತದ ಹಲವು ಪ್ರಮುಖ ನಗರಗಳಲ್ಲಿ ಮಾರ್ಚ್ 18ರ ಸಂಜೆಯೇ ಸಿನಿಮಾದ ಪ್ರೀಮಿಯರ್ ಶೋಗಳ ಪ್ರದರ್ಶನ ಆಗಲಿದೆ. ಭಾರಿ ದುಬಾರಿ ಬೆಲೆಯಲ್ಲಿ ‘ಧುರಂಧರ್ 2’ ಸಿನಿಮಾ ಪ್ರೀಮಿಯರ್ ಶೋ ಟಿಕೆಟ್​​ಗಳಿಗೆ ನಿಗದಿಪಡಿಸಲಾಗಿದೆ. ಅಷ್ಟಕ್ಕೂ ಯಾವ ನಗರದಲ್ಲಿ ‘ಧುರಂಧರ್ 2’ ಸಿನಿಮಾದ ಟಿಕೆಟ್ ಬೆಲೆ ಎಷ್ಟಿದೆ? ಎಲ್ಲಿ ದುಬಾರಿ? ಎಲ್ಲಿ ಕಡಿಮೆ?

‘ಧುರಂಧರ್ 2’ ಸಿನಿಮಾದ ಪ್ರೀಮಿಯರ್ ಶೋಗಳು, ದೆಹಲಿ, ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ, ಕೊಚ್ಚಿ, ಪುಣೆ ಇನ್ನೂ ಹಲವಾರು ಪ್ರಮುಖ ನಗರಗಳಲ್ಲಿ ಆಯೋಜಿಸಲಾಗಿದೆ. ಇಷ್ಟರಲ್ಲಿ ಅತಿ ಹೆಚ್ಚು ಬೆಲೆ ದಾಖಲಾಗಿರುವುದು ಮುಂಬೈನಲ್ಲಿ. ಮುಂಬೈನ ಒಂದು ಮಲ್ಟಿಪ್ಲೆಕ್ಸ್​​ನಲ್ಲಿ ಒಂದು ಟಿಕೆಟ್ 3200 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇತರೆ ನಗರಗಳಲ್ಲಿಯೂ ಸಹ ಟಿಕೆಟ್ ಬೆಲೆ ಕಡಿಮೆ ಇಲ್ಲ. ಬೆಂಗಳೂರಿನ ರೆಕ್ಸ್​​ನಲ್ಲಿ ಟಿಕೆಟ್ ಬೆಲೆ 2000 ರೂಪಾಯಿಗಳಿದ್ದು, ಈಗಾಗಲೇ ಎಲ್ಲ ಸೋಲ್ಡ್ ಔಟ್ ಆಗಿವೆ.

ಇನ್ನು ದೆಹಲಿಯಲ್ಲೂ ಸಹ ದೊಡ್ಡ ಮೊತ್ತಕ್ಕೆ ಟಿಕೆಟ್​​ಗಳು ಮಾರಾಟವಾಗುತ್ತಿದೆ. ದೆಹಲಿಯ ಒಂದು ಮಲ್ಟಿಪ್ಲೆಕ್ಸ್​​ನಲ್ಲಿ 2200 ರೂಪಾಯಿಗೆ ಟಿಕೆಟ್ ಮಾರಾಟ ಆಗುತ್ತಿದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಸಿನಿಮಾ ನೋಡಬಹುದೆಂದರೆ ಅದು ಚೆನ್ನೈನಲ್ಲಿ. ‘ಧುರಂಧರ್ 2’ ಸಿನಿಮಾದ ಪ್ರೀಮಿಯರ್ ಶೋ ನ ಟಿಕೆಟ್ ಚೆನ್ನೈನಲ್ಲಿ ಗರಿಷ್ಟ 190 ರೂಪಾಯಿಗಳು ಕನಿಷ್ಟ ಕೇವಲ 54 ರೂಪಾಯಿಗಳಿವೆ. ಹೈದರಾಬಾದ್​​ನಲ್ಲಿಯೂ ಸಹ ಟಿಕೆಟ್ ಬೆಲೆ ಕಡಿಮೆಯೇ ಇದೆ. ಅಲ್ಲಿನ ಗರಿಷ್ಟ ಬೆಲೆ 350 ಆಗಿದ್ದು, ಕನಿಷ್ಟ ಬೆಲೆ 150 ರೂಪಾಯಿಗಳಾಗಿವೆ.

ಇದನ್ನೂ ಓದಿ:ಮತ್ತೆ ಬಂತು ಬೆದರಿಕೆ: ರಣ್ವೀರ್ ಸಿಂಗ್-ದೀಪಿಕಾಗೆ ಭದ್ರತೆ ಹೆಚ್ಚಳ

ಕೇರಳದ ಕೊಚ್ಚಿಯಲ್ಲಿ ಭಿನ್ನ-ಭಿನ್ನ ಬೆಲೆಗಳನ್ನು ನಿಗದಿಪಡಿಸಲಾಗಿದೆ. ಲಕ್ಷುರಿ ಮಲ್ಟಿಪ್ಲೆಕ್ಸ್​​ಗಳಲ್ಲಿ 1200 ರೂಪಾಯಿಗಳಿದ್ದರೆ ಸಾಮಾನ್ಯ ಚಿತ್ರಮಂದಿರಗಳಲ್ಲಿ ಕೇವಲ 150 ರೂಪಾಯಿಗಳಿವೆ. ಒಟ್ಟಾರೆಯಾಗಿ ನೋಡುವುದಾದರೆ ‘ಧುರಂಧರ್ 2’ ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್ ಬೆಲೆಗಳು ಅತಿ ಹೆಚ್ಚಿರುವುದು ಮುಂಬೈ, ದೆಹಲಿ ಮತ್ತು ಬೆಂಗಳೂರಿನಲ್ಲಿಯೇ ಹೆಚ್ಚು. ಈ ನಗರಗಳಲ್ಲಿ 500ಕ್ಕೆ ಕಡಿಮೆ ಟಿಕೆಟ್ಗಳೇ ಇಲ್ಲ ಎನ್ನಬಹುದು. ಇದ್ದರೂ ಕೇವಲ ಒಂದೆರಡು ಚಿತ್ರಮಂದಿರಗಳಲ್ಲಿ ಮಾತ್ರ.

‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಂಈಯರ್ ಶೋ ಮಾರ್ಚ್ 18ರಂದು ಸಂಜೆಯಿಂದ ಪ್ರದರ್ಶನಗೊಳ್ಳಲಿದೆ. ಸಿನಿಮಾನಲ್ಲಿ ರಣ್ವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಆರ್ ಮಾಧವನ್ ಅವರುಗಳು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us