AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದಲ್ಲ, ಎರಡಲ್ಲ 9 ವಿಭಾಗಗಳಲ್ಲಿ ಗ್ರ್ಯಾಮಿ ಸ್ಪರ್ಧೆಗೆ ಸಜ್ಜಾದ ‘ಧುರಂಧರ್ 2’ ಆಲ್ಬಮ್

ಆದಿತ್ಯ ಧರ್ ನಿರ್ದೇಶನದ ಧುರಂಧರ್ 2 ಸಿನಿಮಾದ ಸಂಗೀತವು 69ನೇ ಗ್ರಾಮಿ ಪ್ರಶಸ್ತಿಗಾಗಿ ಒಂಭತ್ತು ವಿಭಾಗಗಳಲ್ಲಿ ಸಲ್ಲಿಕೆಯಾಗಿದೆ. ಶಾಶ್ವತ್ ಸಚ್‌ದೇವ್ ಸಂಗೀತ ಸಂಯೋಜನೆ ಮಾಡಿರುವ ಈ ಹಾಡುಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿವೆ. ಕೇವಲ ಹನ್ನೊಂದು ದಿನಗಳಲ್ಲಿ ಹದಿನಾಲ್ಕು ಹಾಡುಗಳನ್ನು ಸಿದ್ಧಪಡಿಸುವ ಮೂಲಕ ಸಂಗೀತ ನಿರ್ದೇಶಕರು ಹೊಸ ದಾಖಲೆಯನ್ನು ಬರೆದಿದ್ದರು.

ಒಂದಲ್ಲ, ಎರಡಲ್ಲ 9 ವಿಭಾಗಗಳಲ್ಲಿ ಗ್ರ್ಯಾಮಿ ಸ್ಪರ್ಧೆಗೆ ಸಜ್ಜಾದ ‘ಧುರಂಧರ್ 2’ ಆಲ್ಬಮ್
ಧುರಂಧರ್ 2
ರಾಜೇಶ್ ದುಗ್ಗುಮನೆ
|

Updated on: Oct 10, 2026 | 1:34 PM

Share

ಮುಖ್ಯಾಂಶಗಳು

  • ಗ್ರಾಮಿ ಪ್ರಶಸ್ತಿಗೆ ಸಲ್ಲಿಕೆಯಾದ ಧುರಂಧರ್ 2 ಚಿತ್ರದ ಹಾಡುಗಳು
  • 9 ವಿಭಾಗಗಳಲ್ಲಿ ನಾಮಿನೇಷನ್
  • ಭಾರತಕ್ಕೆ ಒಲಿಯುತ್ತಾ ಪ್ರತಿಷ್ಠಿತ ಪ್ರಶಸ್ತಿ?

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2‘ ಸಿನಿಮಾದ ಸಂಗೀತವು ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಗ್ಗಳಿಕೆಗೆ ಪಾತ್ರವಾಗಿದೆ. ಶಾಶ್ವತ್ ಸಚ್‌ದೇವ್ ಸಂಯೋಜಿಸಿರುವ ಈ ಚಿತ್ರ ಈಗ ಅಂತಾರಾಷ್ಟ್ರೀಯ ಪ್ರಶಸ್ತಿ ಬಾಚಿಕೊಳ್ಳುವ ಸನಿಹದಲ್ಲಿದೆ. ಪ್ರತಿಷ್ಠಿತ 69ನೇ ಗ್ರ್ಯಾಮಿ ಪ್ರಶಸ್ತಿ ರೇಸ್​​ನಲ್ಲಿ ಬರೋಬ್ಬರಿ ಒಂಭತ್ತು ವಿಭಾಗಗಳಲ್ಲಿ ಈ ಸಿನಿಮಾದ ಹಾಡುಗಳನ್ನು ಸಲ್ಲಿಕೆ ಮಾಡಲಾಗಿದೆ. ಟಿ-ಸೀರೀಸ್ ಮತ್ತು ಬಿ62 ಸ್ಟುಡಿಯೋಸ್ ಈ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಭಾರತೀಯ ಚಿತ್ರರಂಗಕ್ಕೆ ಇದು ಹೆಮ್ಮೆಯ ಕ್ಷಣವಾಗಿದೆ.

ಗ್ರ್ಯಾಮಿ ಪ್ರಶಸ್ತಿಗಾಗಿ ಕೇವಲ ಒಂದೆರಡು ಹಾಡುಗಳಲ್ಲ, ಇಡೀ ಆಲ್ಬಮ್ ಅನ್ನು ಅತ್ಯುತ್ತಮ ಕಾಂಪೈಲೇಶನ್ ಸೌಂಡ್‌ಟ್ರ್ಯಾಕ್ ವಿಭಾಗದ ನಾಮಿನೇಷನ್​ಗೆ ಪರಿಗಣನೆ ಮಾಡಬೇಕು ಎಂದು ಕೋರಲಾಗಿದೆ. ಇದರೊಂದಿಗೆ ‘ಫಿರ್ ಸೆ’, ‘ಆರಿ ಆರಿ’, ‘ಜಾನ್ ಸೆ ಗುಜರ್ತೆ ಹೈ’, ಮತ್ತು ‘ಜೈಯೇ ಸಜನಾ’ ಸೇರಿದಂತೆ ಹಲವು ಜನಪ್ರಿಯ ಹಾಡುಗಳು ಬೇರೆ ಬೇರೆ ವಿಭಾಗಗಳಲ್ಲಿ ಸ್ಪರ್ಧಿಸುತ್ತಿವೆ. ಹೊಸದಾಗಿ ಪರಿಚಯಿಸಲಾದ ಏಷ್ಯನ್ ಪಾಪ್ ಮ್ಯೂಸಿಕ್ ವಿಭಾಗದಲ್ಲೂ ಈ ಸಿನಿಮಾದ ಹಾಡುಗಳು ಸ್ಥಾನ ಪಡೆದಿರುವುದು ವಿಶೇಷ.

ಸಂಗೀತ ನಿರ್ದೇಶಕ ಶಾಶ್ವತ್ ಸಚ್‌ದೇವ್ ಅವರ ಕೆಲಸದ ವೇಗವು ಎಲ್ಲೆಡೆ ಅಚ್ಚರಿ ಮೂಡಿಸಿದೆ. ನಿರ್ದೇಶಕ ಆದಿತ್ಯ ಧರ್ ತಿಳಿಸಿದಂತೆ, ಶಾಶ್ವತ್ ಅವರು ‘ಧುರಂಧರ್ 2’ ಚಿತ್ರಕ್ಕಾಗಿ ಕೇವಲ ಹನ್ನೊಂದು ದಿನಗಳಲ್ಲಿ ಬರೋಬ್ಬರಿ ಹದಿನಾಲ್ಕು ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಅತ್ಯುತ್ತಮ ಗುಣಮಟ್ಟದ ಸಂಗೀತ ನೀಡಿ, ಅದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿರುವುದು ನಿಜಕ್ಕೂ ಅಪರೂಪದ ಸಾಧನೆಯಾಗಿದೆ.

ಹಾಗೆ ನೋಡಿದರೆ, ಗ್ರಾಮಿ ಪ್ರಶಸ್ತಿಗೆ ಹಾಡುಗಳು ಸಲ್ಲಿಕೆಯಾಗಿರುವುದು ಅಂದರೆ ಅವು ಇನ್ನೂ ಅಧಿಕೃತವಾಗಿ ನಾಮಿನೇಟ್ ಆಗಿವೆ ಎಂದರ್ಥವಲ್ಲ. ರೆಕಾರ್ಡಿಂಗ್ ಅಕಾಡೆಮಿಯ ಕಠಿಣ ಅರ್ಹತಾ ಮಾನದಂಡಗಳು ಮತ್ತು ಬಹು ಹಂತದ ವೋಟಿಂಗ್ ಪ್ರಕ್ರಿಯೆಯ ಮೂಲಕ ಹಾಡುಗಳು ಸಾಗಬೇಕು. ಇದರ ನಂತರವೇ ಅಂತಿಮ ನಾಮಿನೇಷನ್ ಪಟ್ಟಿಯನ್ನು ಅಕಾಡೆಮಿ ಪ್ರಕಟಿಸಲಿದೆ.

ಇದನ್ನೂ ಓದಿ: ‘ಧುರಂಧರ್’ ಸಿನಿಮಾದಲ್ಲಿ ಕಥೆಯೇ ಇಲ್ಲ: ಸೂಪರ್ ಹಿಟ್ ಚಿತ್ರವನ್ನು ಟೀಕಿಸಿದ ನಿರ್ದೇಶಕ

ಈ ಜಾಗತಿಕ ಮ್ಯೂಸಿಕ್ ಕ್ಯಾಂಪೇನ್ ಹಾಗೂ ನಾಮಿನೇಷನ್ ಪ್ರಯತ್ನವು ಚಿತ್ರದ ಯಶಸ್ಸಿಗೆ ಮತ್ತೊಂದು ಗರಿಮೆ ತಂದುಕೊಟ್ಟಿದೆ. ‘ಧುರಂಧರ್’ ಹಾಗೂ ‘ಧುರಂಧರ್ 2’ ಈಗಾಗಲೇ ಜಾಗತಿಕ ಮಟ್ಟದಲ್ಲಿ ಮೂರು ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣ ಬಾಚಿಕೊಳ್ಳುವ ಮೂಲಕ ದೊಡ್ಡ ಇತಿಹಾಸ ನಿರ್ಮಿಸಿದೆ. ಈಗ ಗ್ರ್ಯಾಮಿ ರೇಸ್‌ನಲ್ಲೂ ಕಾಣಿಸಿಕೊಳ್ಳುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More