ಮಾರ್ಚ್ 2ಕ್ಕೆ ‘ಟಾಕ್ಸಿಕ್’ ಮಾರ್ಚ್ 3ಕ್ಕೆ ‘ಧುರಂಧರ್’, ಮಾರ್ಚ್ 8ಕ್ಕೆ ಮತ್ತೆ ‘ಟಾಕ್ಸಿಕ್’

Dhurandhar 2 vs Toxic: ‘ಟಾಕ್ಸಿಕ್’ ಸಿನಿಮಾಕ್ಕೆ ಎದುರಾಳಿಯಾಗಿ ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಬರುತ್ತಿದೆ. ಎರಡೂ ಸಿನಿಮಾಗಳ ನಡುವೆ ಭಾರಿ ಪೈಪೋಟಿ ಏರ್ಪಡುವುದು ಖಾತ್ರಿ ಆಗಿದೆ. ‘ಧುರಂಧರ್’ ಸಿನಿಮಾ ಈಗಾಗಲೇ ಭಾರಿ ದೊಡ್ಡ ಹಿಟ್ ಆಗಿದ್ದು, ಸಹಜವಾಗಿಯೇ ‘ಧುರಂಧರ್ 2’ ಸಿನಿಮಾಕ್ಕೆ ಸಹ ದೊಡ್ಡ ಸಂಖ್ಯೆಯ ಪ್ರೇಕ್ಷಕರು ಕಾಯುತ್ತಿದ್ದು, ಬಾಕ್ಸ್ ಆಫೀಸ್​​ನಲ್ಲಿ ಎರಡೂ ಸಿನಿಮಾಗಳ ನಡುವೆ ಭರ್ಜರಿ ಫೈಟ್ ನಡೆಯಲಿದೆ.

ಮಾರ್ಚ್ 2ಕ್ಕೆ ‘ಟಾಕ್ಸಿಕ್’ ಮಾರ್ಚ್ 3ಕ್ಕೆ ‘ಧುರಂಧರ್’, ಮಾರ್ಚ್ 8ಕ್ಕೆ ಮತ್ತೆ ‘ಟಾಕ್ಸಿಕ್’
Dhurandhar Toxic

Updated on: Mar 01, 2026 | 8:52 PM

ಯಶ್ (Yash) ನಟಿಸಿರುವ ‘ಟಾಕ್ಸಿಕ್’ ಸಿನಿಮಾ ಭಾರತದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಪ್ರೀ ರಿಲೀಸ್ ಸೇಲ್ಸ್ ಬಹುತೇಕ ಮುಗಿದಿದ್ದು, ಸಿನಿಮಾದ ಅಸಲಿ ಪ್ರಚಾರ ಶುರುವಾಗಬೇಕಿದೆ. ಆದರೆ ಈ ಬಾರಿ ‘ಟಾಕ್ಸಿಕ್’ ಸಿನಿಮಾಕ್ಕೆ ಎದುರಾಳಿಯಾಗಿ ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಬರುತ್ತಿದೆ. ಎರಡೂ ಸಿನಿಮಾಗಳ ನಡುವೆ ಭಾರಿ ಪೈಪೋಟಿ ಏರ್ಪಡುವುದು ಖಾತ್ರಿ ಆಗಿದೆ. ‘ಧುರಂಧರ್’ ಸಿನಿಮಾ ಈಗಾಗಲೇ ಭಾರಿ ದೊಡ್ಡ ಹಿಟ್ ಆಗಿದ್ದು, ಸಹಜವಾಗಿಯೇ ‘ಧುರಂಧರ್ 2’ ಸಿನಿಮಾಕ್ಕೆ ಸಹ ದೊಡ್ಡ ಸಂಖ್ಯೆಯ ಪ್ರೇಕ್ಷಕರು ಕಾಯುತ್ತಿದ್ದು, ಬಾಕ್ಸ್ ಆಫೀಸ್​​ನಲ್ಲಿ ಎರಡೂ ಸಿನಿಮಾಗಳ ನಡುವೆ ಭರ್ಜರಿ ಫೈಟ್ ನಡೆಯಲಿದೆ.

‘ಟಾಕ್ಸಿಕ್’ ಸಿನಿಮಾ ಈಗಾಗಲೇ ಕೆಲವು ಪೋಸ್ಟರ್​​ಗಳು, ಟೀಸರ್​​ಗಳನ್ನು ಬಿಡುಗಡೆ ಮಾಡಿದ್ದು, ಸಿನಿಮಾದ ಆನ್​​ಲೈನ್ ಪ್ರಚಾರ ಪ್ರಾರಂಭಿಸಿದೆ. ಆದರೆ ‘ಧುರಂಧರ್ 2’ ಸಿನಿಮಾ ಇನ್ನೂ ಪ್ರಚಾರವನ್ನೇ ಆರಂಭಿಸಿಲ್ಲ. ಆದರೆ ಇದೀಗ ‘ಧುರಂಧರ್ 2’ ಸಹ ಹಳಿಗೆ ಬಂದಿದ್ದು, ಶೀಘ್ರವೇ ಟ್ರೈಲರ್ ಬಿಡುಗಡೆ ಮಾಡಲಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕವೂ ಪ್ರಕಟವಾಗಿದೆ.

‘ಧುರಂಧರ್ 2’ ಸಿನಿಮಾದ ಟ್ರೈಲರ್ ಮಾರ್ಚ್ 3ರಂದು ಬಿಡುಗಡೆ ಆಗಲಿದೆ. ‘ಟಾಕ್ಸಿಕ್’ ಸಿನಿಮಾದ ಮೊದಲ ಹಾಡು ಮಾರ್ಚ್ 2 ರಂದು ಬಿಡುಗಡೆ ಆಗಲಿದ್ದು, ‘ಟಾಕ್ಸಿಕ್’ ತಂಡ ಬಿಡುಗಡೆ ಮಾಡುತ್ತಿರುವ ಮೊದಲ ಹಾಡು ಇದಾಗಿದೆ. ಅದಾದ ಮರುದಿನವೇ ‘ಧುರಂಧರ್ 2’ ಸಿನಿಮಾದ ಟ್ರೈಲರ್ ಬಿಡುಗಡೆ ಆಗುತ್ತಿದ್ದು, ಎರಡರ ನಡುವೆ ಸಣ್ಣ ಸೋಷಿಯಲ್ ಮೀಡಿಯಾ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.

ಇದನ್ನೂ ಓದಿ:ಧುರಂಧರ್ 2 Vs ಟಾಕ್ಸಿಕ್; ಯಶ್-ರಣವೀರ್ ಸಿಂಗ್ ಪೈಕಿ ಯಾರ ಸಿನಿಮಾ ಬಜೆಟ್ ಹೆಚ್ಚು?

ಈ ಹಿಂದೆ ಬಿಡುಗಡೆ ಆದ ‘ಟಾಕ್ಸಿಕ್’ ಸಿನಿಮಾದ ಟೀಸರ್ ದಾಖಲೆ ಸಂಖ್ಯೆಯ ವೀಕ್ಷಣೆಗಳನ್ನು ಯೂಟ್ಯೂಬ್​​​ನಲ್ಲಿ ಪಡೆದಿದೆ. ಇದೀಗ ‘ಧುರಂಧರ್ 2’ ಸಿನಿಮಾದ ಟ್ರೈಲರ್ ಆ ದಾಖಲೆಗಳನ್ನು ಮುರಿಯಲಿದೆಯೇ? ಎಂಬುದನ್ನು ಕಾದು ನೋಡಬೇಕಿದೆ. ಅಂದಹಾಗೆ ‘ಧುರಂಧರ್ 2’ ಸಿನಿಮಾದ ಟ್ರೈಲರ್ ಬಿಡುಗಡೆ ಆದ ಕೇವಲ ಐದೇ ದಿನಕ್ಕೆ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಸಹ ಬಿಡುಗಡೆ ಆಗಲಿದೆ. ಮಾರ್ಚ್ 08 ರಂದು ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದ್ದು, ಟ್ರೈಲರ್ ಸಹ ದಾಖಲೆ ಬರೆಯುವ ನಿರೀಕ್ಷೆ ಇದೆ.

‘ಧುರಂಧರ್ 2’ ಸಿನಿಮಾನಲ್ಲಿ ರಣ್ವೀರ್ ಸಿಂಗ್ ನಾಯಕನಾಗಿ ನಟಿಸಿದ್ದು, ಆದಿತ್ಯ ಧರ್ ಸಿನಿಮಾ ನಿರ್ದೇಶಿಸಿದ್ದಾರೆ. ಇದು ಭಾರತದ ಸೈನಿಕನೊಬ್ಬ ಪಾಕಿಸ್ತಾನದಲ್ಲಿ ಗುಪ್ತಚರ ಇಲಾಖೆ ಏಜೆಂಟ್ ಆಗಿ ಕೆಲಸ ಮಾಡುವ ಕತೆಯನ್ನು ಒಳಗೊಂಡಿದೆ. ಎರಡೂ ಸಿನಿಮಾಗಳು ಮಾರ್ಚ್ 19ರಂದು ಬಿಡುಗಡೆ ಆಗಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us