AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಶಾಂತ್ ನೀಲ್-ಜೂ ಎನ್​ಟಿಆರ್ ಸಿನಿಮಾಕ್ಕೆ ‘ಧುರಂಧರ್’ ಸಂಗೀತ ನಿರ್ದೇಶಕ

ಪ್ರಶಾಂತ್ ನೀಲ್ ಮತ್ತು ರವಿ ಬಸ್ರೂರು ಅವರದ್ದು ಭರ್ಜರಿ ಹಿಟ್ ಜೋಡಿ. ಈ ಇಬ್ಬರೂ ಸೇರಿ ಕೆಲ ಅದ್ಭುತ ಹಿನ್ನೆಲೆ ಸಂಗೀತ ಮತ್ತು ಪವರ್​ಫುಲ್ ಮಾಸ್ ಹಾಡುಗಳನ್ನು ನೀಡಿದ್ದಾರೆ. ಇದೀಗ ಪ್ರಶಾಂತ್ ನೀಲ್, ಜೂ ಎನ್​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ‘ಧುರಂಧರ್’ ಮತ್ತು ‘ಧುರಂದರ್ 2’ ಸಿನಿಮಾಕ್ಕೆ ಸಂಗೀತ ನೀಡಿದ್ದ ಸಂಗೀತ ನಿರ್ದೇಶಕನನ್ನು ಕರೆತರಲಾಗಿದೆ.

ಪ್ರಶಾಂತ್ ನೀಲ್-ಜೂ ಎನ್​ಟಿಆರ್ ಸಿನಿಮಾಕ್ಕೆ ‘ಧುರಂಧರ್’ ಸಂಗೀತ ನಿರ್ದೇಶಕ
Dragon
ಮಂಜುನಾಥ ಸಿ.
|

Updated on: Oct 31, 2026 | 3:27 PM

Share

ಮುಖ್ಯಾಂಶಗಳು

  • ‘ಡ್ರ್ಯಾಗನ್’ ಸಿನಿಮಾಕ್ಕೆ ಬಾಲಿವುಡ್ ಸಂಗೀತ ನಿರ್ದೇಶಕ
  • ಪ್ರಶಾಂತ್ ನೀಲ್-ಜೂ ಎನ್​​ಟಿಆರ್ ಸಿನಿಮಾಕ್ಕೆ ಶಾಶ್ವತ್ ಸಂಗೀತ
  • ಒಟ್ಟಿಗೆ ಕೆಲಸ ಮಾಡಲಿರುವ ರವಿ ಬಸ್ರೂರು-ಶಾಶ್ವತ್

ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ಈ ವರೆಗಿನ ಎಲ್ಲ ಸಿನಿಮಾಕ್ಕೂ ರವಿ ಬಸ್ರೂರು ಅವರೇ ಸಂಗೀತ ನೀಡಿದ್ದಾರೆ. ಪ್ರಶಾಂತ್ ನೀಲ್ ಮತ್ತು ರವಿ ಬಸ್ರೂರು ಅವರದ್ದು ಭರ್ಜರಿ ಹಿಟ್ ಜೋಡಿ. ಈ ಇಬ್ಬರೂ ಸೇರಿ ಕೆಲ ಅದ್ಭುತ ಹಿನ್ನೆಲೆ ಸಂಗೀತ ಮತ್ತು ಪವರ್​ಫುಲ್ ಮಾಸ್ ಹಾಡುಗಳನ್ನು ನೀಡಿದ್ದಾರೆ. ಇದೀಗ ಪ್ರಶಾಂತ್ ನೀಲ್, ಜೂ ಎನ್​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ‘ಧುರಂಧರ್’ ಮತ್ತು ‘ಧುರಂದರ್ 2’ ಸಿನಿಮಾಕ್ಕೆ ಸಂಗೀತ ನೀಡಿದ್ದ ಸಂಗೀತ ನಿರ್ದೇಶಕನನ್ನು ಕರೆತರಲಾಗಿದೆ.

‘ಧುರಂಧರ್’ ಸಿನಿಮಾಕ್ಕೆ ಶಾಶ್ವತ್ ಸಚ್‌ದೇವ್ ಸಂಗೀತ ನೀಡಿದ್ದರು. ಆ ಸಿನಿಮಾದ ಹಾಡುಗಳು ಭಾರಿ ದೊಡ್ಡ ಹಿಟ್ ಆಗಿದ್ದವು. ಇದೀಗ ಜೂ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಅವರ ‘ಡ್ರ್ಯಾಗನ್’ ಚಿತ್ರದ ತಂಡವನ್ನು ಶಾಶ್ವತ್ ಸಚ್​​ದೇವ್ ಸೇರಿಕೊಳ್ಳಲಿದ್ದಾರೆ. ಅಂದಹಾಗೆ ರವಿ ಬಸ್ರೂರು ಅವರು ‘ಡ್ರ್ಯಾಗನ್’ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಆದರೆ ಸಿನಿಮಾಕ್ಕೆ ಕೆಲ ಹಾಡುಗಳನ್ನು ಶಾಶ್ವತ್ ಸಚ್​​ದೇವ್ ಕಂಪೋಸ್ ಮಾಡಲಿದ್ದಾರೆ. ರವಿ ಬಸ್ರೂರು ಸಹ ಕೆಲ ಹಾಡುಗಳನ್ನು ಕಂಪೋಸ್ ಮಾಡಲಿದ್ದು, ಇಬ್ಬರೂ ಒಟ್ಟಿಗೆ ಕೆಲಸ ಮಾಡಲಿದ್ದಾರೆ.

ಇತ್ತೀಚೆಗೆ ಒಂದು ಸಿನಿಮಾಕ್ಕೆ ಇಬ್ಬರು ಅಥವಾ ಅದಕ್ಕಿಂತಲೂ ಹೆಚ್ಚಿನ ಜನ ಸಂಗೀತ ನಿರ್ದೇಶಕರನ್ನು ದುಡಿಸಿಕೊಳ್ಳುವ ಟ್ರೆಂಡ್ ಹೆಚ್ಚಾಗುತ್ತಿದೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಕ್ಕೂ ರವಿ ಬಸ್ರೂರು ಹಿನ್ನೆಲೆ ಸಂಗೀತ ನೀಡಿದ್ದರೆ ಕೆಲ ಹಾಡುಗಳನ್ನು ಮತ್ತೊಂದು ಸಂಗೀತ ನಿರ್ದೇಶಕ ನೀಡಿದ್ದರು. ‘ಪುಷ್ಪ 2’ ಸಿನಿಮಾಕ್ಕೂ ಸಹ ದೇವಿಶ್ರೀ ಪ್ರಸಾದ್ ಮತ್ತು ಎಸ್ ತಮನ್ ಜಂಟಿಯಾಗಿ ಸಂಗೀತ ನೀಡಿದ್ದರು. ‘ಅನಿಮಲ್’ ಸಿನಿಮಾಕ್ಕೂ ಬೇರೆ ಬೇರೆ ಸಂಗೀತ ನಿರ್ದೇಶಕರುಗಳು ಕೆಲಸ ಮಾಡಿದ್ದಾರೆ. ಈಗ ಬಿಡುಗಡೆ ಆಗುತ್ತಿರುವ ‘ರಾಮಾಯಣ’ ಸಿನಿಮಾಕ್ಕೆ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಒಟ್ಟಿಗೆ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ:ಪ್ರಶಾಂತ್ ನೀಲ್ ಅರ್ಪಿಸುವ ಭಯಾನಕ ಸಿನಿಮಾ; ‘418’ ಟ್ರೇಲರ್ ಬಿಡುಗಡೆ

ಶಾಶ್ವತ್ ಸಚ್‌ದೇವ್ ಪ್ರತಿಭಾವಂತ ಸಂಗೀತ ನಿರ್ದೇಶಕರಾಗಿದ್ದು ‘ಧುರಂಧರ್’ ಸರಣಿ ಸೇರಿದಂತೆ ಇನ್ನೂ ಕೆಲ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಕೆಲ ಒಳ್ಳೆಯ ಹಾಡುಗಳನ್ನು ಪ್ರೇಕ್ಷಕರಿಗೆ ನೀಡಿದ್ದಾರೆ. ಇದೀಗ ಅವರು ಮೊದಲ ಬಾರಿಗೆ ದಕ್ಷಿಣ ಭಾರತದ ಸಿನಿಮಾಕ್ಕೆ ಕೆಲಸ ಮಾಡಲಿದ್ದಾರೆ. ಇನ್ನು ರವಿ ಬಸ್ರೂರು ಭಾರತದ ಬ್ಯುಸಿ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಹೀಗೆ ಎಲ್ಲ ಚಿತ್ರರಂಗದಲ್ಲೂ ಅವರು ಬಹಳ ಬ್ಯುಸಿ ಆಗಿದ್ದಾರೆ. ಆಕ್ಷನ್ ಸಿನಿಮಾಗಳಿಗೆ ರವಿ ಬಸ್ರೂರು ರೀತಿ ಇನ್ನೊಬ್ಬರು ಸಂಗೀತ ನೀಡಲ್ಲ ಎಂಬ ಚರ್ಚೆ ಚಿತ್ರರಂಗದಲ್ಲಿದೆ.

ಜೂ ಎನ್​ಟಿಆರ್ ಮತ್ತು ನೀಲ್ ಅವರ ಸಿನಿಮಾಕ್ಕೆ ‘ಡ್ರ್ಯಾಗನ್’ ಎಂದು ಹೆಸರಿಟ್ಟಿದ್ದು, ಸಿನಿಮಾ ಭಾರಿ ಆಕ್ಷನ್ ಭರಿತ ಸಿನಿಮಾ ಆಗಿರಲಿದೆ. ಸಿನಿಮಾನಲ್ಲಿ ರುಕ್ಮಿಣಿ ವಸಂತ್, ಬಾಲಿವುಡ್​​ನ ಅನಿಲ್ ಕಪೂರ್ ಹೀಗೆ ಇನ್ನೂ ಹಲವು ಪ್ರತಿಭಾವಂತ ಕಲಾವಿದರು ಕೆಲಸ ಮಾಡಿದ್ದಾರೆ. ಸಿನಿಮಾ ಮುಂದಿನ ವರ್ಷ ಏಪ್ರಿಲ್​​ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸೌಜನ್ಯ ಶವ ಪತ್ತೆಯಾದ ಸ್ಥಳದಲ್ಲಿ ಎಸ್‌ಐಟಿ ತಂಡದಿಂದ ಕ್ರೈಂ ಸೀನ್ ಮರುಸೃಷ್ಟಿ
ಸೌಜನ್ಯ ಶವ ಪತ್ತೆಯಾದ ಸ್ಥಳದಲ್ಲಿ ಎಸ್‌ಐಟಿ ತಂಡದಿಂದ ಕ್ರೈಂ ಸೀನ್ ಮರುಸೃಷ್ಟಿ
ಬೆಂಗಳೂರಿನಲ್ಲಿ ಸ್ಫೋಟಕ ಮಾದರಿಯ ಅನುಮಾನಾಸ್ಪದ ವಸ್ತು ಪತ್ತೆ
ಬೆಂಗಳೂರಿನಲ್ಲಿ ಸ್ಫೋಟಕ ಮಾದರಿಯ ಅನುಮಾನಾಸ್ಪದ ವಸ್ತು ಪತ್ತೆ
ಕೋರಮಂಗಲದಲ್ಲಿ ಬಿಎಂಟಿಸಿ ಬಸ್ ಅಗ್ನಿ ಅವಘಡ; ತಪ್ಪಿದ ಅನಾಹುತ!
ಕೋರಮಂಗಲದಲ್ಲಿ ಬಿಎಂಟಿಸಿ ಬಸ್ ಅಗ್ನಿ ಅವಘಡ; ತಪ್ಪಿದ ಅನಾಹುತ!
ಮುಗಿಯಿತು ಮದುವೆ ಸಂಭ್ರಮ, ಶುರು ಆಯ್ತು ಎವಿಕ್ಷನ್ ಭಯ: ವಿಡಿಯೋ
ಮುಗಿಯಿತು ಮದುವೆ ಸಂಭ್ರಮ, ಶುರು ಆಯ್ತು ಎವಿಕ್ಷನ್ ಭಯ: ವಿಡಿಯೋ
ಮಹಿಳಾ ಹೈನುಗಾರರ ಜೊತೆ ಸಂವಾದ: ಮಹತ್ವದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಮಹಿಳಾ ಹೈನುಗಾರರ ಜೊತೆ ಸಂವಾದ: ಮಹತ್ವದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹಾಸನಾಂಬೆ ದರ್ಶನೋತ್ಸವಕ್ಕೆ ಬೆಳ್ಳಂಬೆಳಿಗ್ಗೆಯೇ ಭಕ್ತಸಾಗರ
ಹಾಸನಾಂಬೆ ದರ್ಶನೋತ್ಸವಕ್ಕೆ ಬೆಳ್ಳಂಬೆಳಿಗ್ಗೆಯೇ ಭಕ್ತಸಾಗರ
ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವೂ ಲೀಟರ್​​ಗೆ​​ 14 ರೂ.ಹೆಚ್ಚಳ
ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವೂ ಲೀಟರ್​​ಗೆ​​ 14 ರೂ.ಹೆಚ್ಚಳ
ಇಂದು ಈ ರಾಶಿಯವರು ಅತಿಯಾಗಿ ಯಾರಿಗೂ ಆಶ್ವಾಸನೆ ನೀಡಬೇಡಿ
ಇಂದು ಈ ರಾಶಿಯವರು ಅತಿಯಾಗಿ ಯಾರಿಗೂ ಆಶ್ವಾಸನೆ ನೀಡಬೇಡಿ
ನಿಯಮ ಉಲ್ಲಂಘಿಸಿದ್ದ ಎಂಟು ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳು ಬಂದ್
ನಿಯಮ ಉಲ್ಲಂಘಿಸಿದ್ದ ಎಂಟು ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳು ಬಂದ್
ಕೇದಾರನಾಥದಲ್ಲಿ ಈ ಋತುವಿನ ಮೊದಲ ಹಿಮಪಾತ; ಭಕ್ತರ ಮೇಲೆ ಹಿಮದ ಮಳೆ!
ಕೇದಾರನಾಥದಲ್ಲಿ ಈ ಋತುವಿನ ಮೊದಲ ಹಿಮಪಾತ; ಭಕ್ತರ ಮೇಲೆ ಹಿಮದ ಮಳೆ!